Advertisement

Diamond Frame; ಇ-ಬೈಕ್‌ ಅನ್ನು ಮಡಚಿಟ್ಟುಕೊಳ್ಳಬಹುದು!

07:48 PM Oct 22, 2023 | Team Udayavani |

ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆಯ ವಿದ್ಯಾರ್ಥಿಗಳ ತಂಡವೊಂದು ಯಶಸ್ವಿಯಾಗಿ ಜಗತ್ತಿನ ಮೊದಲ ಮಡಚಬಹುದಾದ ಡೈಮಂಡ್‌ ಫ್ರೇಮ್ ಇ-ಬೈಕ್‌ ಅನ್ನು ಅಭಿವೃದ್ಧಿಪಡಿಸಿದೆ.

Advertisement

ಈ ಸ್ಟಾರ್ಟ್‌ಅಪ್‌ಗೆ ಮಹೀಂದ್ರಾ ಗ್ರೂಪ್‌ ಹೂಡಿಕೆ ಮಾಡಿದೆ. ಸ್ವತಃ ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ತಮ್ಮ ಕಚೇರಿಯ ಆವರಣದಲ್ಲಿ “ಹಾರ್ನ್ ಬ್ಯಾಕ್ ಎಕ್ಸ್‌1′ ಇ-ಬೈಕ್‌ ಅನ್ನು ಚಾಲನೆ ಮಾಡಿದ್ದು, ಈ ಕುರಿತ ಟ್ರಯಲ್‌ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ವೈರಲ್‌ ಆಗಿದೆ. “ಇತರೆ ಮಡಚಬಹುದಾದ ಇ-ಬೈಕ್‌ಗಳಿಗಿಂತಲೂ “ಹಾರ್ನ್ ಬ್ಯಾಕ್ ಎಕ್ಸ್‌1′ ಶೇ.35ರಷ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿದೆ. ಅಲ್ಲದೇ ಮಡಚಿದ ನಂತರ ಇದನ್ನು ಕೈಯಲ್ಲಿ ಎತ್ತಿಕೊಂಡು ಹೋಗುವ ಗೋಜಿಲ್ಲ. ಬದಲಾಗಿ ಸುಲಭವಾಗಿ ಇದನ್ನು ತಳ್ಳಿಕೊಂಡು ಹೋಗಬಹುದು’ ಎಂದು ಆನಂದ್‌ ಮಹೀಂದ್ರಾ ಟ್ವೀಟ್‌(ಎಕ್ಸ್‌) ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next