ಒಂದು ದಶಕದ ಹಿಂದೆ(2010), ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ 50 ಓವರ್ ಗಳ ಕ್ರಿಕೆಟ್ ಪಂದ್ಯಾಟದಲ್ಲಿ ಡಬಲ್ ಸೆಂಚುರಿ ಭಾರಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಗ್ವಾಲಿಯರ್ ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಅವರ ಅದ್ಭುತ ಸಾಧನೆ ಅದಾಗಿತ್ತು.
ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಇನ್ನಿಂಗ್ಸ್ ತೆರೆದ ಬಂದ ಸಚಿನ್ ತೆಂಡೂಲ್ಕರ್, 147 ಎಸೆತಗಳಲ್ಲಿ 200 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು, ಸಚಿನ್ ಅವರ ದ್ವಿಶತಕದ ಸಾಧನೆಯಿಂದಾಗಿ ಭಾರತವು ಬೃಹತ್ ಮೊತ್ತವನ್ನು(401/3)ಗಳಿಸಿತ್ತು. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಉತ್ತಮ ಬೆಂಬಲವನ್ನು ಕಂಡುಕೊಂಡಿದ್ದರಿಂದ ಸಚಿನ್ 25 ಬೌಂಡರಿ ಮತ್ತು ಮೂರು ಗರಿಷ್ಠ ಮೊತ್ತದೊಂದಿಗೆ ಇನ್ನಿಂಗ್ಸ್ ಮುಗಿಸಿದ್ದರು, ನಂತರ ಧೋನಿ 35 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯವಾಗಿ ಇನ್ನಿಂಗ್ಸ್ ಪೂರ್ಣಗೊಳಿಸಿದ್ದರು, ಅಂತಿಮವಾಗಿ ಭಾರತವು 153 ರನ್ಗಳಿಂದ ಸ್ಪರ್ಧೆಯನ್ನು ಗೆದ್ದಿತ್ತು.
ಓದಿ : ಪಿಂಕ್ ಬಾಲ್ ನಲ್ಲಿ ಅಕ್ಷರ್ – ಅಶ್ವಿನ್ ಮ್ಯಾಜಿಕ್ : ಅಲ್ಪ ಮೊತ್ತಕ್ಕೆ ಕುಸಿದ ಆಂಗ್ಲರು
ಈ ದಿನ, ಆ ವರ್ಷ ಸಚಿನ್ 50 ಓವರ್ ಗಳ ಏಕದಿನ ಪಂದ್ಯಾಟದಲ್ಲಿ ದ್ವಿಶತಕ ಭಾರಿಸಿದ ಮೊದಲ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Related Articles
1997 ರಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಬೆಲಿಂಡಾ ಕ್ಲರ್ಕ್ ಡೆನ್ಮಾರ್ಕ್ ವಿರುದ್ಧ ನಡೆದ ಮಹಿಳಾ ವಿಶ್ವಕಪ್ ನಲ್ಲಿ ದ್ವಿಶತಕ ಭಾರಿಸಿದ್ದರು.
ಈ ಮುಂಚಿತವಾಗಿ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ, ಜಿಂಬಾಬ್ವೆಯ ಚಾರ್ಲ್ಸ್ ಕೋವೆಂಟ್ರಿ ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 194 ರನ್ ಭಾರಿಸುವುದರ ಮೂಲಕ 2009 ರಲ್ಲಿ ಏಕ ದಿನ ಪಂದ್ಯಾಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪುರುಷ ಕ್ರಿಕಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಆದಾಗ್ಯೂ, ಸಚಿನ್ ಅವರ ದ್ವಿಶತಕದ ನಂತರ, ಇನ್ನೂ ಐದು ಬ್ಯಾಟ್ಸ್ ಮನ್ ಗಳು 50 ಓವರ್ ಫಾರ್ಮ್ಯಾಟ್ ನಲ್ಲಿ 200 ರನ್ ಗಳ ಗಡಿ ದಾಟುವುದಕ್ಕೆ ಪ್ರೇರಣೆ ನೀಡಿದೆ, ಪ್ರಸ್ತುತ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೂರು ವಿಭಿನ್ನ ಸಂದರ್ಭಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಪುರುಷರ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ (264, ಶ್ರೀಲಂಕಾ ವಿರುದ್ಧ 2014 ರಲ್ಲಿ).
ವೀರೇಂದ್ರ ಸೆಹ್ವಾಗ್, ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಪಾಕಿಸ್ತಾನದ ಫಖರ್ ಜಮಾನ್ ಇತರ ಕ್ರಿಕೆಟಿಗರು, ಇದುವರೆಗೆ 200 ರನ್ ಗಡಿ ದಾಟಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ಬರೆದಿದ್ದು ಸುವರ್ಣಾಕ್ಷರ. ಈಗ ವೃತ್ತಿಜೀವನಕ್ಕೆ ತೆರೆ ಎಳೆದು ಕೆಲವು ವರ್ಷಗಳಾಗಿವೆ. ಏಕದಿನ (18,426) ಮತ್ತು ಟೆಸ್ಟ್ (15,921)ಗಳಲ್ಲಿ ಹೆಚ್ಚಿನ ರನ್ ಗಳಿಸಿದ ದಾಖಲೆಯನ್ನು ಅವರು ಹೊಂದಿದ್ದಾರೆ ಮತ್ತು ಅವರ ಹೆಸರಿನಲ್ಲಿ 100 ಅಂತರರಾಷ್ಟ್ರೀಯ ಶತಕಗಳನ್ನು(ಟೆಸ್ಟ್ ಪಂದ್ಯಗಳಲ್ಲಿ 51, ಏಕದಿನ ಪಂದ್ಯಗಳಲ್ಲಿ 49) ಪಡೆದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯಿದೆ.
ಓದಿ : ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!