Advertisement

ಈ ದಲಿತನಿಗೆ ಈಗ ಶೌಚಾಲಯವೇ ಮನೆ

11:12 PM May 18, 2019 | mahesh |

ಕೇಂದ್ರಾಪುರ: ಇತ್ತೀಚೆಗೆ ಸಂಭವಿಸಿದ್ದ ಫೋನಿ ಚಂಡಮಾರುತದಲ್ಲಿ ತನ್ನ ಮನೆಯನ್ನು ಕಳೆದುಕೊಂಡಿರುವ ದಲಿತ ವ್ಯಕ್ತಿಯೊಬ್ಬ, ಸ್ವಚ್ಛ ಭಾರತ್‌ ಅಭಿಯಾನದಡಿ ಕಟ್ಟಲಾಗಿದ್ದ ಶೌಚಾಲಯವೊಂದರಲ್ಲಿ ತನ್ನ ಇಡೀ ಕುಟುಂಬದೊಂದಿಗೆ ವಾಸ ಮಾಡುತ್ತಿರುವ ಮನಕಲಕುವ ವಿಚಾರವೊಂದು ಬೆಳಕಿಗೆ ಬಂದಿದೆ.

Advertisement

ಒಡಿಶಾದ ಕೇಂದ್ರಾಪುರದ ರಘು ದೇಯ್‌ಪುರದಲ್ಲಿ ಕುಚ್ಚಾ ಮಾದ ರಿಯ ಗುಡಿಸಲಿನಲ್ಲಿ ವಾಸವಾಗಿದ್ದ ಖೀರೋಡ್‌ ಜೆನಾ (58) ಎಂಬ ಬಡ ವ್ಯಕ್ತಿ, ನಿತ್ಯ ಜೀವನಕ್ಕಾಗಿ ಕೂಲಿ ಮಾಡುತ್ತಿದ್ದ. ಆದರೆ, ಫೋನಿ ಚಂಡಮಾರುತ ಈ ಬಡವನ ಗುಡಿಸಲನ್ನು ನಾಶ ಮಾಡಿತು. ಆದರೆ, ಸರ್ಕಾರ ಈತನ ಕುಟುಂಬಕ್ಕಾಗಿ ಸ್ವತ್ಛ ಭಾರತ ಅಭಿಯಾನದಡಿ ಕಟ್ಟಿಸಿ ಕೊಟ್ಟಿದ್ದ ಶೌಚಾಲಯ ಮಾತ್ರ ಫೋನಿಗೆ ನಾಶವಾಗಲಿಲ್ಲ. ಹಾಗಾಗಿ, ಅಲ್ಲಿಗೆ ತನ್ನ ಮನೆ ಯಲ್ಲಿದ್ದ ಅಳಿದುಳಿದ ಸಾಮಾನು, ಸರಂ ಜಾಮು ಸಾಗಿಸಿ ಅಲ್ಲೇ ಈಗ ಆತ ವಾಸವಾಗಿದ್ದಾನೆ.

ತನ್ನ ಕಷ್ಟವನ್ನು ವಿವರಿಸಿರುವ ಜೆನಾ, “”ಚಂಡಮಾರುತ ಅಪ್ಪಳಿಸಲು 2 ದಿನಗಳ ಮುನ್ನ ಕಟ್ಟಲಾಗಿದ್ದ ಈ ಶೌಚಾಲಯವೇ ತನಗೀಗ ಆಶ್ರಯ ತಾಣವಾಗಿದೆ. ನಮ್ಮ ವಾಸ್ತವ್ಯ ಅದರಲ್ಲೇ ಮುಂದುವರಿದಿರುವುದರಿಂದ ಬಯಲು ಶೌಚ ಅನಿ ವಾರ್ಯವಾಗಿದೆ” ಎಂದಿದ್ದಾನೆ. “”ಈ ಹಿಂದೆ, ಪ್ರಧಾನಮಂತ್ರಿಆವಾಸ್‌ ಯೋಜನೆ ಹಾಗೂ ಬಿಜು ಪುಕ್ಕಾ ಘರ್‌ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ, ಅನುದಾನ ಸಿಗಲಿಲ್ಲ. ಅದು ಸಿಕ್ಕಿದ್ದರೆ ನನಗೆ ಈ ದುರವಸ್ಥೆ ಬರುತ್ತಿರಲಿಲ್ಲ ವೇನೋ” ಎಂದು ಬೇಸರ ವ್ಯಕ್ತ ಪಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next