Advertisement

ತುರುವೇಕೆರೆ: ಪೊಲೀಸರಿಂದ ಪಥಸಂಚಲನ

02:10 PM Aug 30, 2020 | Suhan S |

ತುರುವೇಕೆರೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ತಾಲೂಕು ಜೆಡಿಎಸ್‌ ವತಿಯಿಂದ ಸೋಮವಾರ ಹಮ್ಮಿ ಕೊಂಡಿದ್ದ ಪ್ರತಿಭಟನಾ ಪಾದ ಯಾತ್ರೆಯ ಮುಂಜಾಗ್ರತೆಯಾಗಿ ತಾಲೂಕಿನ ಹಲವೆಡೆ ಹಾಗೂ ಗುಡ್ಡೇನಹಳ್ಳಿಯಲ್ಲಿ ನೂರಕ್ಕೂ ಪೊಲೀಸರು ಹಾಗೂ ಮಿಲಿಟರಿ ತುಕಡಿಗಳಿಂದ ಪಥ ಸಂಚಲನ ನಡೆಸಿದರು.

Advertisement

ತಾಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನ ಹಳ್ಳಿ ರೈತರು ಬಗರ್‌ ಹುಕುಂ ಸಾಗುವಳಿ ಭೂಮಿಯಲ್ಲಿ 800ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಟ್ಟಿದ್ದರು. ಇದನ್ನು ಹಾಲಿ ಶಾಸಕರು ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತೆಂಗಿನ ಸಸಿ ಕೀಳಿಸಿದ್ದಾರೆಂದು ಮಾಜಿ ಶಾಸಕರು ಆರೋಪಿಸಿದರು.

ಈ ಬಗ್ಗೆ ಪ್ರತಿಭಟನೆ ಮಾಡುವುದಾಗಿ ತಾಲೂಕು ಜೆಡಿ ಎಸ್‌ ಹಾಕಿದ್ದ ಫ್ಲೆಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದರು. ಈ ವೇಳೆ ಫ್ಲೆಕ್ಸ್‌ ಹರಿದ ವಿಚಾರವಾಗಿ ಎರಡು ಪಕ್ಷಗಳ ನಡುವೆ ಘರ್ಷಣೆ ನಡೆದು ತಾಲೂಕಿನಲ್ಲಿ 144 ಸೆಕ್ಷನ್‌ ನಿಷೇಧಾಜ್ಞೆ ಜಾರಿಗೆ ಕಾರಣವಾಯಿತು. ಆದಾಗ್ಯೂ ಮಾಜಿ ಶಾಸಕರು ಪ್ರತಿಭಟನೆ ಮಾಡುವುದಾಗಿ ಸುದ್ದಿ ಗೋಷ್ಠಿ ನಡೆಸಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಗೆ ಮಾಜಿ ಶಾಸಕರು ಎಡರು ಗಾಲು ಹಾಕುತ್ತಿದ್ದು ನಾವು ಪ್ರತಿ ಪ್ರತಿಭಟನೆ ಮಾಡುವುದಾಗಿ ತಾಲೂಕು ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದರು.

144 ಸೆಕ್ಷನ್‌ ಬಗ್ಗೆ ಜಾಗೃತಿ ಮೂಡಿಸಲು ಗುಡ್ಡೇನಹಳ್ಳಿ ಗ್ರಾಮದಲ್ಲಿ 150ಕ್ಕೂ ಹೆಚ್ಚು ಪೊಲೀಸ್‌ ಮತ್ತು ಮಿಲಿಟರಿ ತುಕಡಿಗಳು ಪಥ ಸಂಚಲನ ಮಾಡಿದವು.

Advertisement

Udayavani is now on Telegram. Click here to join our channel and stay updated with the latest news.

Next