Advertisement

ತಿಮ್ಮಪ್ಪನಾಯಕನ ಕೆರೆಗೆ ಬೇಕಿದೆ ಕಾಯಕಲ್ಪ

04:37 PM Sep 24, 2021 | Team Udayavani |

ಅರಸೀಕೆರೆ: ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 346 ಕೆರೆಗಳಿದ್ದು, 94 ಕೆರೆಗಳು ಸರ್ವೆಯಾಗಿವೆ. 71 ಕೆರೆಗಳು ಒತ್ತುವರಿಯಾಗಿದೆ. ಅದರಲ್ಲಿ ತಿಮ್ಮಪ್ಪನಾಯಕನ ಕೆರೆ ಒಟ್ಟು ವಿಸ್ತೀರ್ಣ 455 ಎಕರೆಯಿದ್ದು, 43 ಎಕರೆ ಒತ್ತುವರಿಯಾಗಿದೆ. ನಗರ ಪ್ರದೇಶದಿಂದ 6 ಕಿಮೀ ದೂರದಲ್ಲಿರುವ ಜಾಜೂರು ಹಾಗೂ ನಾಗತೀಹಳ್ಳಿ ಗ್ರಾಮಗಳ ಸಮೀಪವಿರುವ ಪ್ರಸಿದ್ಧ ತಿಮ್ಮಪ್ಪ ನಾಯಕನ ಕೆರೆಯ ಪುನಚ್ಛೇತನದ ನಿರೀಕ್ಷೆಯಲ್ಲಿದೆ. 455 ಎಕರೆಯಲ್ಲಿ ಕೆರೆಯ ಅಚ್ಚುಕಟ್ಟು ಪ್ರದೇಶ 107 ಎಕರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ 43 ಎಕರೆ ಒತ್ತುವರಿ ಮಾಡಿಕೊಂಡಿರುವ ಪ್ರದೇಶವನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭಿಸಬೇಕಿದೆ.

Advertisement

ಈ ಕೆರೆ ತುಂಬಿ ಹರಿದರೇ ಬೆಂಡೇಕೆರೆ, ಹರತನಹಳ್ಳಿ, ಬಸವರಾಜಪುರ, ಜಾಜೂರು, ನಾಗತೀಹಳ್ಳಿ, ವೆಂಕಟಾಪುರ, ಮಾರ್ಗದ ಎಲ್ಲಾ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗುವ ಜತೆಗೆ 15 ಗ್ರಾಮಗಳ ಕೃಷಿಗೆ ಅನುಕೂಲವಾಗಲಿದೆ. ಸುಮಾರು 2500 ಎಕರೆ ಪ್ರದೇಶದ ತೆಂಗಿನ ತೋಟಗಳಿಗೆ ಈ ಕೆರೆಯ ಅಂತರ್ಜಲವೇ ಪ್ರಮುಖ ಆಧಾರ.

ನಗರಕ್ಕೆ ನೀರಿನ ಆಶ್ರಯ ತಾಣ ಕಳೆದ 25 ವರ್ಷಗಳ ಹಿಂದೆ ಜನರಿಗೆ ಕುಡಿವ ನೀರಿನ ತಾಣವಾಗಿದ್ದ ಇಲ್ಲಿನ ಕೆರೆಯ ಸುತ್ತಮುತ್ತಲಿನಲ್ಲಿ 34 ಕೊಳವೆಬಾವಿಗಳನ್ನು ಅಂದಿನ ಪುರಸಭೆ ಆಡಳಿತ ತೆಗೆಸುವ ಮೂಲಕ ನಗರ ಪ್ರದೇಶಕ್ಕೆ ಕುಡಿವ ನೀರಿನ ವ್ಯವಸ್ಥೆ ಮಾಡುತ್ತಿತ್ತು. ಇತ್ತೀಚಿನ ದಿನಗಳಲ್ಲಿ ತೀವ್ರ ಮಳೆಯ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರಿಲ್ಲದೆ, ಬತ್ತಿ ಹೋಗಿರುವ ಪರಿಣಾಮ ಇಲ್ಲಿನ ನೀರಿನ ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ:ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಮೀನುಗಾರರ ಬದುಕು ಬೀದಿಗೆ: ಕೆರೆ ಕಲುಷಿತವಾಗಿರುವ ಪರಿಣಾಮ ಮೀನುಗಾರಿಕೆ ಕೈಗೊಳ್ಳುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದ 50ಕ್ಕೂ ಹೆಚ್ಚಿನ ಕುಟುಂಬಗಳು ಇಂದು ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಕೆರೆಯಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ನೀರು ನಿಂತಿದ್ದು, ಈ ಕಲುಷಿತ ನೀರಿನಲ್ಲಿ ಜಲಚರಗಳು ನಾಶವಾಗಿವೆ. ಅಂತರ್ಜಲ ಕುಸಿತ ಕಾರಣ ಸುತ್ತಮುತ್ತಲ ಗದ್ದೆಗಳಲ್ಲಿ ಭತ್ತದ ನಾಟಿ ಮಾಡಿ ಅನೇಕ ವರ್ಷಗಳ ಕಳೆದಿದೆ. ಕೆರೆಯ ಮಳೆಯಿಂದ ಸರಿಯಾಗಿ ತುಂಬದೇ ಇರುವ ಕಾರಣ ತೆಂಗಿನತೋಟಗಳೂ ಸಹ ಸೊರಗಿವೆ

Advertisement

ಕೆರೆ ಏರಿ ದುರಸ್ತಿ ಅವಶ್ಯ
ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಕೆರೆಗೆ ನಗರದ ಕೊಳಚೆ ನೀರು ಹರಿದು ಬರುತ್ತಿದೆ. ಕೆರೆಯ ತುಂಬಾ ಬಳ್ಳಾರಿ ಜಾಲಿ ಮುಳ್ಳು ಗಿಡಗಳು ಹೆಚ್ಚು ಬೆಳೆದು ನಿಂತಿವೆ. ಇದನ್ನು ತೆರವು ಪಡಿಸುವ ಕಾರ್ಯ ನಡೆದೇ ಇಲ್ಲ. ಜನ,ಜಾನುವಾರುಗಳಿಗೆ ನೀರು ಮತ್ತು ಮೇವಿನ ತಾಣವಾಗಿದ್ದ ಈ ಕೆರೆ ಅಂಗಳದಲ್ಲಿ ನಗರದ ಕಸವಿಲೇವಾರಿಯಾ ಗುತ್ತಿರುವುದು, ಒಳಚರಂಡಿ ಕಲುಷಿತ ನೀರು ಸೇರುತ್ತಿರುವುದು ಕೆರೆ ಹಾನಿಗೆ ಕಾರಣವಾಗಿದೆ. ಕೆರೆಯ ಎರಿಯೂ ಅನೇಕ ವರ್ಷಗಳಿಂದ ದುರಸ್ತಿಯಾಗದೆ ಶಿಥಿಲವಾಗಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 34 ದೊಡ್ಡಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ 439 ಕೋಟಿ ರೂ ಗಳ ಕ್ರಿಯಾಯೋಜನೆಗೆ ಡಿಪಿಆರ್‌ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೊಳವೆಬಾವಿಗಳು ಅಗತ್ಯಕ್ಕಿಂತಲೂ ಹೆಚ್ಚು ಇರುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೆರೆಗಳು ಒಣಗಿವೆ.
-ಬಾಲಕೃಷ್ಣ, ಸಹಾಯಕ ಎಂಜಿನಿಯರ್‌

ಇತಿಹಾಸ ಪ್ರಸಿದ್ಧ ತಿಮ್ಮಪ್ಪನಾಯಕನಕೆರೆ ಏರಿಯು ಶಿಥಿಲವಾಗಿರುವ ಕಾರಣ ದುರಸ್ಥಿ ಕಾರ್ಯಕೈಗೊಳ್ಳಬೇಕಾಗಿದೆ. ನಗರದ ಕೊಳಚೆ ನೀರು ಹರಿದು ಬಂದು ಸೇರುತ್ತಿರುವುದನ್ನು ಹಾಗೂ ತ್ಯಾಜ್ಯಗಳನ್ನು ಜನರು ತಂದು ಹಾಕುತ್ತಿರುವುದನ್ನು ತಪ್ಪಿಸಬೇಕು ಹಾಗೂ ಬಳ್ಳಾರಿ ಜಾಲಿ ಗಿಡಗಳ ತೆರವು ಕಾರ್ಯ ಮಾಡುವ ಮೂಲಕ ಕೆರೆಯ ಪುನಚ್ಛೇತನ ಮಾಡಬೇಕಿದೆ.
-ಸೋಮಶೇಖರ್‌, ನಾಗತಿಹಳ್ಳಿ ನಿವಾಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next