Advertisement

ಚೀನದಲ್ಲಿ ಜುರಾಸಿಕ್‌ ಅವಧಿಯ ಡೈನೋಸರ್‌ ಮೊಟ್ಟೆ ಪತ್ತೆ

03:27 PM Jan 02, 2018 | udayavani editorial |

ಬೀಜಿಂಗ್‌ : ಚೀನದ ಜಿಯಾಂಗ್ಸಿ ಪ್ರಾಂತ್ಯದಲ್ಲಿನ  ಗ್ವಾಂಗ್‌ಝೋ ನಗರ ಡೈನೋಸಾರ್‌ಗಳ ತವರು ಎಂದೇ ಖ್ಯಾತವಾಗಿದ್ದು ಈಚೆಗೆ ಇಲ್ಲಿ ಈಚೆಗೆ ಡೈನೋಸಾರ್‌ಗಳ ಪಳೆಯುಳಿಕೆ ರೂಪದಲ್ಲಿರುವ ಸುಮಾರು 30 ಮೊಟ್ಟೆಗಳು ಪತ್ತೆಯಾಗಿವೆ.  ಪರಿಣತರು ಈ ಮೊಟ್ಟೆಗಳು ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ. 

Advertisement

ಕೋಟ್ಯಂತರ ವರ್ಷಗಳಷ್ಟು ಹಿಂದೆ ಈ ಭೂಮಿಯನ್ನು ಆಳುತ್ತಿದ್ದ ರಾಕ್ಷಸ ಗಾತ್ರದ ಡೈನೋಸರ್‌ಗಳ ಸಂತತಿ ವೃದ್ಧಿಸುತ್ತಿದ್ದ ವಿಶ್ವದ ಏಳು ಪ್ರಮುಖ ತಾಣಗಳಲ್ಲಿ ಚೀನವೂ ಒಂದಾಗಿದೆ ಎಂದು ನೇಚರ್‌ ಡಾಟ್‌ ಕಾಮ್‌ ವರದಿ ಮಾಡಿದೆ. ಚೀನದಲ್ಲಿ ಇದ್ದವೆಂದು ಹೇಳಲಾಗಿರುವ ಡೈನೋಸಾರ್‌ಗಳು ಹಕ್ಕಿಗಳಂತೆ ರೆಕ್ಕೆಗಳನ್ನು ಹೊಂದಿದ ಪ್ರಭೇದಕ್ಕೆ ಸೇರಿದವುಗಳಾಗಿವೆ. 

ಚೀನದ ಗ್ವಾಂಗ್‌ಝೋ ದಲ್ಲಿ ಕಟ್ಟಡ ಕಾರ್ಮಿಕರು ದೊಡ್ಡದೊಂದು ಬಂಡೆಯನ್ನು  ಸ್ಫೋಟಕವಿಟ್ಟು ಸಿಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಅದೃಷ್ಟವಶಾತ್‌ ಪಳೆಯುಳಿಕೆ ರೂಪದಲ್ಲಿದ್ದ ಡೈನೋಸಾರ್‌ಗಳ ಸುಮಾರು 30 ಮೊಟ್ಟೆಗಳು ಯಥಾವತ್‌ ಸ್ಥಿತಿಯಲ್ಲಿ ಉಳಿದುಕೊಂಡವು. 

ಕಪ್ಪು ಬಣ್ಣದಲ್ಲಿದ್ದ ಈ ಮೊಟ್ಟೆಗಳು 2ಎಂಎಂ ಗಾತ್ರದಲ್ಲಿವೆ. ಕಾರ್ಮಿಕರ ದೃಷ್ಟಿಗೆ ಬಿದ್ದ ಈ ಮೊಟ್ಟೆಗಳನ್ನು ಅವರು ಡೈನೋಸಾರ್‌ಗಳ ಮೊಟ್ಟೆ ಇರಬಹುದೆಂದು ಶಂಕಿಸಿದರೂ ಸ್ಥಳೀಯ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದರು. ಪರಿಣತರು ಬಂದು ನೋಡಿದಾಗಲೇ ಅದು ಡೈನೋಸಾರ್‌ಗಳ ಮೊಟ್ಟೆ ಎಂಬುದು ಖಚಿತವಾಯಿತು. ಇವುಗಳು ಕ್ರೆಟೇಶಿಯರ್‌ ಅವಧಿಗೆ ಸೇರಿದವುಗಳೆಂದು ಪರಿಣತರು ಅಭಿಪ್ರಾಯಪಟ್ಟರು. ಈ ಕ್ರೆಟೇಶಿಯಸ್‌ ಅವಧಿಯು ಜುರಾಸಿಕ್‌ ಪಾರ್ಕ್‌ ಅವಧಿಯನ್ನು ಅನುಸರಿಸಿ ಬಂದ ಅವಧಿಯಾಗಿದೆ. 

ಪರಿಣತರು ಕ್ರೆಟೇವಿಯಸ್‌ ಯುಗ 145 ಮಿಲಿಯ ವರ್ಷಗಳ ಹಿಂದೆ ಆರಂಭವಾಯಿತೆಂದು ಅಭಿಪ್ರಾಯ ಪಡುತ್ತಾರೆ. ಇದು ಸುಮಾರು 66 ಮಿಲಿಯ ವರ್ಷಗಳ ಬಳಿಕ ಕೊನೆಗೊಂಡಿತು. ಇದನ್ನು ಅನುಸರಿಸಿ ಪ್ಯಾಲಿಯೋಜೀನ್‌ ಅವಧಿ ಬಂತು. 

Advertisement

ಕ್ರೆಟೇಶಿಯಸ್‌ ಅವಧಿಯಲ್ಲಿದ್ದ ಡೈನೋಸಾರ್‌ಗಳು ಟೈರಾನೊಸರಸ್‌ ರೆಕ್ಸ್‌ (ಟಿ-ರೆಕ್ಸ್‌) ಪ್ರಭೇದವನ್ನು ಒಳಗೊಂಡಿವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಮತ್ತು ಮೂರು ಕೊಂಬುಗಳಿದ್ದವು ಎಂದು ಪರಿಣತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next