Advertisement

Thirthahalli: ರಸ್ತೆಗಿಳಿದ ಪೊಲೀಸರು; ಶಾಲಾ ವಾಹನಗಳಿಗೆ ಖಡಕ್ ಎಚ್ಚರಿಕೆ!

06:57 PM Jun 25, 2024 | Kavyashree |

ತೀರ್ಥಹಳ್ಳಿ: ಪಟ್ಟಣದಲ್ಲಿ ಮಂಗಳವಾರ ಬೆಳ್ಳಂ ಬೆಳಗ್ಗೆ ಕೊಪ್ಪ ಸರ್ಕಲ್ ನಲ್ಲಿ ದಕ್ಷ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಶಿವನಗೌಡ, ವಿರೇಂದ್ರ, ಮಂಜುನಾಥ್ ನಾಯಕ್, ಸುಧಾಕರ್, ದೀಪಕ್, ಸುರೇಂದ್ರ ಸೇರಿದಂತೆ ಇನ್ನಿತರ ಪೊಲೀಸರು ಸುರಿಯುವ ಮಳೆಯನ್ನು ಲೆಕ್ಕಿಸದೆ ರಸ್ತೆಗಿಳಿದು ಶಾಲಾ ವಾಹನಗಳಿಗೆ ಸುರಕ್ಷತೆ ದೃಷ್ಟಿಯಿಂದ ರಸ್ತೆಯ ನಿಯಮಾವಳಿಗಳನ್ನು ಪಾಲನೆ ಮಾಡಲು ಮನವಿ ಮಾಡಿದರು.

Advertisement

ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆ ಹೇಗಿರಬೇಕು?

  1. ನಿಗದಿಪಡಿಸಿದ ಸಂಖ್ಯೆಯ ಶಾಲಾ ಮಕ್ಕಳು ಮಾತ್ರ ಬಸ್ಸುಗಳಲ್ಲಿ ಪ್ರಯಾಣಿಸುವಂತೆ ಅಗತ್ಯ ಕ್ರಮಕೈಗೊಳ್ಳುವುದು. ನಿಗದಿತ ಸಂಖ್ಯೆಗಿಂತ

ಹೆಚ್ಚಿನ ಮಕ್ಕಳನ್ನು ಶಾಲಾ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡುವುದು ಕಾನೂನು ಬಾಹಿರವಾಗಿರುತ್ತದೆ.

  1. ಶಾಲಾ ಮಕ್ಕಳು ಪುಟ್ ಬೋರ್ಡ್‌ಗಳಲ್ಲಿ ನಿಲ್ಲದೇ ಇರುವುದನ್ನು ಖಾತ್ರಿಪಡಿಸಿಕೊಳ್ಳುವುದು.
  2. ಶಾಲಾ ಮಕ್ಕಳ ಬಸ್ಸುಗಳ ಚಾಲಕರು ಕಡ್ಡಾಯವಾಗಿ ಚಾಲನ ಪರವಾನಿಗೆ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು.
  3. ಜಾಸ್ತಿ ಹೆಣ್ಣು ಮಕ್ಕಳು ಪ್ರಯಾಣಿಸುವ ಬಸ್ಸುಗಳಿಗೆ ಮಹಿಳಾ ನಿರ್ವಾಹಕರನ್ನು ನೇಮಕಮಾಡುವುದು.
  4. ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಸ್ಸುಗಳಲ್ಲಿ ಸಿಸಿ ಕ್ಯಾಮರ, ಫೈರ್ ಎಸ್ಟಿಂಗ್ ವಿಷ‌ರ್, ಫಸ್ಟ್ ಏಯ್ಡ್ ಬಾಕ್ಸ್‌ಗಳನ್ನು ಕಡ್ಡಾಯವಾಗಿ ಇರಿಸುವುದು.
  5. ಶಾಲಾಮಕ್ಕಳ ಬಸ್ಸುಗಳ ಚಾಲಕರು ಮತ್ತು ನಿರ್ವಾಹಕರು ಸಮವಸ್ತ್ರದಲ್ಲಿರುವಂತೆ ನೋಡಿಕೊಳ್ಳುವುದು.
  6. ಶಾಲಾ ಮಕ್ಕಳ ಬಸ್ಸುಗಳಲ್ಲಿ ಯಾವುದೇ ರೀತಿಯ ಟೆಕ್ನಿಕಲ್ ಡಿಫೆಕ್ಟಗಳು ಇಲ್ಲದಂತೆ ಕಾಲಕಾಲಕ್ಕೆ ತಪಾಸಣೆಗೊಳಪಡಿಸುವುದು. ಎಮರ್ಜೆನ್ಸಿ ಎಕ್ಸಿಟ್ ಡೋರ್ ಇರುವುದನ್ನು ಖಾತ್ರಿಪಡಿಸಿಕೊಳ್ಳುವುದು. ವಾಹನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವುದು.
  7. ಶಾಲಾಬಸ್ಸುಗಳ ಆರ್.ಸಿ., ಇನ್ನೂರನ್ಸ್, ಎಮಿಷನ್ ಸರ್ಟಿಫಿಕೇಟ್ ಇತ್ಯಾದಿ ದಾಖಲೆಗಳನ್ನು ಸಮಪರ್ಕವಾಗಿ ನಿರ್ವಹಣೆ ಮಾಡುವುದು.
  8. ಶಾಲಾ ವಾಹನಗಳ ಚಾಲಕರು ಮೊಬೈಲ್ ಫೋನ್, ಬ್ಲೂಟೂಥ್‌ಗಳನ್ನು ಬಳಸದಂತೆ ನೋಡಿಕೊಳ್ಳುವುದು ಮತ್ತು ಕಣ್ಣುಕುಕ್ಕುವ ಹೆಡ್‌ಲೈಟ್‌ಗಳನ್ನು ಬಳಸಬಾರದು.

ಮೇಲ್ಕಂಡ ಸೂಚನೆಗಳನ್ನು ಪಾಲನೆ ಮಾಡದೇ ಇದ್ದಲ್ಲಿ ಸಂಬಂಧಿಸಿದವರ ವಿರುದ್ಧ ಸಿಎಂವಿ ಕಾಯ್ದೆ ಅನ್ವಯ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next