Advertisement

ಫೆಬ್ರವರಿ ಮೊದಲ ವಾರದಲ್ಲಿ ಸೋಂಕು ಹೆಚ್ಚಾಗುತ್ತದೆ, ಆದರೆ ಲಾಕ್ ಡೌನ್ ಮಾಡಲ್ಲ: ಸಚಿವ ಸುಧಾಕರ್

10:48 AM Jan 14, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಇನ್ನೂ ಪೀಕ್ ಗೆ ಹೋಗಿಲ್ಲ. ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುತ್ತದೆ. 3- 4ನೇ ವಾರದಿಂದ ಕಡಿಮೆ ಆಗುತ್ತದೆಂದು ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ತೆಗೆದುಕೊಳ್ಳಿ, ಮಾರ್ಗಸೂಚಿ ಪಾಲನೆ ಮಾಡಬೇಕು. ಬಹಿರಂಗ ಸಮಾವೇಶ, ಗುಂಪುಗೂಡುವುದು ಮಾಡಬೇಡಿ.  ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕು ಎಂದರು.

ಈಗ ಇರುವ ಮಾರ್ಗಸೂಚಿ ಈ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ. ಸಾರ್ವಜನಿಕರು ಸಹಕರಿಸಬೇಕು. ಯಾರು ನಿರ್ಲಕ್ಷ್ಯ ಮಾಡಬೇಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ. ಅರ್ಹರು ಮೂರನೇ ಡೋಸ್ ತಗೆದುಕೊಳ್ಳಿ. ಎರಡನೇ ಡೋಸ್ ಯಾರು ತಗೆದುಕೊಂಡಿಲ್ಲ ಅವರೆಲ್ಲ ತಪ್ಪದೆ ಡೋಸ್ ತಗೆದುಕೊಳ್ಳಿ ಎಂದು ಮನವಿ ಮಾಡಿದರು.

ಲಾಕ್ ಡೌನ್ ಮುಖಾಂತರ ಎಲ್ಲವೂ ಸರಿಯಾಗುವುದಿಲ್ಲ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿ ಕೂಡಾ ನಿನ್ನೆ ಹೇಳಿದ್ದಾರೆ. ಒಂದೂವರೆ ತಿಂಗಳ ಕಾಲ ಸಭೆ ಸಮಾರಂಭಗಳಲ್ಲಿ ಮುಂದೂಡಿ. ಸಮಾಧಾನ ಸಂಗತಿ ಅಂದರೆ 5 ರಿಂದ 6% ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇಂದು ಸೋಂಕು ಹೆಚ್ಚಳವಿರುವ ಜಿಲ್ಲೆಗಳ ಜಿಲ್ಲಾಡಳಿತ ಜೊತೆ ವರ್ಚುವಲ್ ಮೂಲಕ ಸಭೆಯಿದೆ ಎಂದರು.

ಇದನ್ನೂ ಓದಿ:ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಾಗಾಲೋಟ; ಒಮಿಕ್ರಾನ್ 5,753ಕ್ಕೆ ಏರಿಕೆ

Advertisement

ವೀಕೆಂಡ್ ಕರ್ಫ್ಯೂ ಮಾಡಿದರೂ ಸೋಂಕು ಕಡಿಮೆ ಆಗುತ್ತಿಲ್ಲವೆಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ. ಏಳು ದಿನಕ್ಕೆ ಸೋಂಕು ಕಡಿಮೆ ಆಗುವುದಿಲ್ಲ. ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು. ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ. ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ. ಹೀಗಾಗಿ ಇನ್ನು ಸ್ವಲ್ಪ ‌ದಿನದಲ್ಲಿ ವೀಕೆಂಡ್ ಕರ್ಫ್ಯೂ ಫಲಿತಾಂಶ ಸಿಗಬಹುದು ಎಂದರು.

ಲಾಕ್ ಡೌನ್ ಇಲ್ಲ: ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣ ಆಗುವುದಿಲ್ಲ. ಎರಡು ಬಾರಿ ಲಾಕ್ ಡೌನ್ ‌ಮಾಡಿ ಜನರಿಗೆ ಸಮಸ್ಯೆ ಆಗಿದೆ. ನಿನ್ನೆ ಪ್ರಧಾನಿ ಮೋದಿ ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹೀಗಾಗಿ ಲಾಕ್ ಡೌನ್ ಅಂತಹ ನಿಯಮ ಇಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next