Advertisement

ಮೂರನೇ ಮದುವೆ: ದೂರು

11:19 AM Jan 16, 2018 | |

ಉಳ್ಳಾಲ: ಪತ್ನಿ, ಮಕ್ಕಳನ್ನು ತೊರೆದು ಭಿನ್ನ ಕೋಮಿನ ಯುವತಿಯನ್ನು ಮದುವೆಯಾದ ಬೋಳಿಯಾರ್‌ ಗ್ರಾಮದ ಆಸಿಫ್‌ ವಿರುದ್ಧ ಆತನ ಪತ್ನಿ ಸ್ಥಳೀಯ ಮಹಿಳಾ ಸಂಘಟನೆ ಹಾಗೂ ಆಶಾ ಕಾರ್ಯ ಕರ್ತೆಯರ ನೇತೃತ್ವದಲ್ಲಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಆಸಿಫ್ ಪಾವೂರು ಗ್ರಾಮದ ಹಪ್ಸಾ  ಅವರನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಎರಡು ಮಕ್ಕಳಿದ್ದಾರೆ.  ಪ್ರಕರಣ  ಈ ಹಿಂದೊಮ್ಮೆ ಕೊಣಾಜೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು,  ಅಲ್ಲಿ ನಡೆದಿದ್ದ  ಮಾತುಕತೆಯಲ್ಲಿ  ಮಕ್ಕಳ ಖರ್ಚಿಗೆ ಪ್ರತಿ ತಿಂಗಳು ಹಣ ನೀಡುವ ಒಪ್ಪಂದವಾಗಿತ್ತು. ಆದರೆ ಆಸಿಫ್ ಒಪ್ಪಂದದಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. 

ಮೂರನೇ ಪತ್ನಿ ಬಳ್ಳಾರಿಯವಳು
ಈಗ ಬಳ್ಳಾರಿಯಿಂದ ಭಿನ್ನ ಕೋಮಿನ ಯುವತಿಯನ್ನು ಮದುವೆ ಯಾಗಿದ್ದು, ಊರಿಗೆ ವಾಪಸ್‌ ಆಗಿದ್ದರೂ ಮಕ್ಕಳ ಖರ್ಚಿಗೆ  ಹಣ ನೀಡುತ್ತಿಲ್ಲ. ಹಪ್ಸಾ ಅವರ ಬೀಡಿಯ ಪ್ರಾವಿಡೆಂಟ್‌ ಫಂಡ್‌ ಕೂಡ  ಆಸಿಫ್ ಹೆಸರಿನಲ್ಲಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next