Advertisement
ಶನಿವಾರ ಐತಿಹಾಸಿಕ ವಿಜಯಪುರ ಮಹಾನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ರಾಜ್ಯ ಮಟ್ಟದ 37ನೇ ಸಮ್ಮೇಳನಕ್ಕೆ ಚಾಲನೆ ಮಾತನಾಡಿದ ಅವರು, ಆದರೆ ನಕಲಿ ಪತ್ರಕರ್ತರಿಗೆ ಕಡಿವಾಣ ಅಗತ್ಯ ಎಂದರು.
Related Articles
Advertisement
ಬಿಜಾಪುರ ಬಿಳಿಜೋಳ ಅತ್ಯಂತ ಪೌಷ್ಟಿಕ ಶ್ರೇಷ್ಠ ಆಹಾರ ಧಾನ್ಯ. ಜೋಳದಂತೆ ಬಿಜಾಪುರ ಜನರೂ ಗಟ್ಟಿಗರು, ಕಾಯಕ ಪರಿಶ್ರಮ ಜೀವಿಗಳು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಬಣ್ಣಿಸಿದರು.
ಕೃಷ್ಣೆಯ ಹನಿ ನೀರಿನ ಬಳಕೆಗೆ ಅಗತ್ಯವಾಗಿದೆ. ಕೃಷ್ಣೆಯಿಂದ ವಿಜಯಪುರ ಭಾಗದ 5 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಆಗಲಿದ್ದು, ಇಡೀ ಭಾರತಕ್ಕೆ ಅನ್ನ ಹಾಕುವ ಶಕ್ತಿಯಿದೆ. ಕೃಷ್ಣೆಗಾಗಿ ಬದುಕನ್ನೇ ತ್ಯಾಗ ಮಾಡಿದ ನೆಲದ ಮುಂದಿನ ಪೀಳಿಗೆ ಬದುಕು ಉತ್ತಮವಾಗಿ ಸೃಷ್ಟಿಯಾಗಲಿ ಎಂದು ಆಶಿಸಿದರು.
ಇದನ್ನೂ ಓದಿ:ಪ್ರಮೋದ್ ಮುತಾಲಿಕ್ ಸ್ಪರ್ಧೆ ಬಗ್ಗೆ ಕೊನೆಗೂ ಮೌನ ಮುರಿದ ಸಚಿವ ಸುನಿಲ್ ಕುಮಾರ್
ಕೃಷ್ಣಾ ಸ್ಕೀಂ ಬಿ ನೆಪದಲ್ಲೇ 25 ವರ್ಷ ತಳ್ಳಿಕೊಂಡು ಬಂದರು. ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಇಲ್ಲ ಈ ಪದ್ದತಿ ನಮ್ಮಲ್ಲೇಕೆ ಎಂದುನ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆಕ್ಷೇಪಿಸಿದೆ. 9 ಉಪ ಯೋಜನೆಗಳಲ್ಲಿ 7 ಯೋಜನೆಗಳಿಗೆ ನಾನು ಚಾಲನೆ ನೀಡಿದ್ದೆ ಎಂದು ನೆನಪಿಸಿದರು.
ಪತ್ರಕರ್ತರು ಪ್ರಾದೇಶಿಕ ಮನಸ್ಥಿತಿಗೆ ಬದಲಾಗಿ ಅಖಂಡ ಕರ್ನಾಟಕದ ದೃಷ್ಟಿಕೋನದ ಪತ್ರಕರ್ತರಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಪತ್ರಕರ್ತರು ರಾಜಕಾರಣಿ ಅವಿನಾಭಾವ ಸಂಬಂಧ. ರಾಜಕಾರಣಿ ಇಲ್ಲದೇ ಹೋಗಿದ್ದರೆ ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳನ್ನು ಓದುವರಾರು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕಾರ್ಯನಿರತೆಯಲ್ಲಿ ನಾವು, ನೀವೆಲ್ಲ ಆರೋಗ್ಯಕರ ಸಂಬಂದದಲ್ಲಿ ಮುಂದುವರೆದು, ರಾಜ್ಯದ ಹಿತದೃಷ್ಟಿಯಿಂದ ಉತ್ತಮ ಕೆಲಸ ಆಗಬೇಕಿದೆ. ಪತ್ರಕರ್ತರು ಕೂಡ ವಿಶ್ವಾಸಾರ್ಹತೆ ಹಾಗೂ ಸ್ವೀಕಾರಾರ್ಹತೆ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನಿಡಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪತ್ರಕರ್ತರ ಸಮ್ಮೇಳನದ ಸ್ಮರಣಗ್ರಂಥ ಮಾಧ್ಯಮ ಮಂಥನ ಲೋಕಾರ್ಪಣೆ ಮಾಡಿದರು.
ಜ್ಞಾನ ಯೋಗಾಶ್ರಮದ ಅಧ್ಯಕ್ಷ ಗುರು ಬಸವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರು, ಬೀಜ ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶಟ್ಟಿ, ಕಾನಿಪ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಇತರರು ವೇದಿಕೆ ಮೇಲಿದ್ದರು.