Advertisement

ಸಕಾರಾತ್ಮಕ ಚಿಂತನೆಯಲ್ಲಿ ಅಡಗಿದೆ ಬದುಕಿನ ಯಶಸ್ಸು

12:32 AM Jun 15, 2022 | Team Udayavani |

ಯದ್ಭಾವಂ ತದ್ಭವತಿ – ಎಂಬಂತೆ ನಾವು ಯಾವಾಗಲೂ ಏನನ್ನು ಆಲೋ ಚಿಸುತ್ತಿರುತ್ತೇವೆಯೋ ಹಾಗೆ ನಮ್ಮ ವ್ಯಕ್ತಿತ್ವವು ಕೂಡ ರೂಪುಗೊಳ್ಳುತ್ತದೆ ಎಂಬುದು ಶಾಲೆಯಲ್ಲಿ ಗುರುಗಳು ನಮಗೆ ಹೇಳುತ್ತಿದ್ದ ಮಾತುಗಳು. ಬದುಕಿನಲ್ಲಿ ಅನಿರೀಕ್ಷಿತವಾಗಿ ಬೀಳುವ ದೊಡ್ಡ ಹೊಡೆತಗಳು ಕೆಲವೊಮ್ಮೆ ನಮ್ಮ ಮನೋಸ್ಥೈರ್ಯವನ್ನೇ ಕುಗ್ಗಿಸಿ ಬಿಡುತ್ತವೆ. ಈ ಸಮಯದಲ್ಲಿ ಭಗವಂತನ ಮೊರೆ ಹೋಗುವುದು ಬಿಟ್ಟರೆ ನಮಗೆ ಬೇರೆ ದಾರಿಯೇ ಕಾಣುವುದಿಲ್ಲ. ದೇವರ ಪ್ರಾರ್ಥನೆಯಿಂದ ನಮ್ಮೊಳಗಿನ ಅಂತರಾತ್ಮದಲ್ಲಿ ಪ್ರಜ್ವಲಿಸುವ ಬೆಳಕು ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಆ ಆತ್ಮವಿಶ್ವಾಸವೇ ಅದೆಂತಹ ಕಠಿನ ಪರಿಸ್ಥಿತಿಯಲ್ಲೂ ನಮ್ಮನ್ನು ಮುನ್ನಡೆಸಿ ಕೊಂಡು ಹೋಗುತ್ತದೆ.

Advertisement

ಬದುಕನ್ನು ಒಂದು ನಿರ್ದಿಷ್ಟ ಪರಿಮಿತಿಯೊಳಗೆ ತನ್ನ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ ನಿತ್ಯದ ದಿನಚರಿಯಲ್ಲಿ ಒಂದಷ್ಟು ವ್ಯತ್ಯಾಸ ಕಂಡು ಬಂದರೂ ಕೆಲವೊಮ್ಮೆ ನಾವು ವಿಪರೀತವಾಗಿ ಗಲಿಬಿಲಿಗೊಳಗಾಗುತ್ತೇವೆ. ಅದೆಷ್ಟೋ ಸಲ ಅಷ್ಟೊಂದು ಪ್ರಾಮುಖ್ಯವಲ್ಲದ ಸಣ್ಣ ಪುಟ್ಟ ವಿಷಯಗಳಿಗೂ ಅತಿಯಾದ ಮಹತ್ವ ಕೊಟ್ಟು ಆಕಾಶವೇ ಕಳಚಿ ಮೈ ಮೇಲೆ ಬಿದ್ದಿತೇನೋ ಎಂಬಂತೆ ವರ್ತಿಸುತ್ತೇವೆ. ಸವಾಲುಗಳಿಗೆ ಮುಖಾಮುಖೀಯಾಗಿ ಅದರಿಂದ ಹೊರಬರುವ ಬದಲು ಆ ಕ್ಷಣದಲ್ಲಿ ಕೈಗೊಳ್ಳುವ ಕೆಲವು ದುಡುಕಿನ ತಪ್ಪು ನಿರ್ಧಾರಗಳಿಂದ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿ ನಮ್ಮ ಬದುಕಿಗೆ ನಾವೇ ಕೊಳ್ಳಿ ಇಟ್ಟು ನಮ್ಮ ಅವನತಿಗೆ ನಾವೇ ಕಾರಣರಾಗುತ್ತೇವೆ. ಕೆಲವೊಂದು ಕ್ಷಣಗಳು ಮೇಲ್ನೋಟಕ್ಕೆ ತುಂಬಾ ಕಠಿನವಾಗಿ ಕಂಡರೂ ಇಂತಹ ಸನ್ನಿವೇಶಗಳನ್ನು ಸ್ವಲ್ಪ ಸರಿಯಾಗಿ ಪರಾಮರ್ಶಿಸಿ ಅವಲೋಕಿಸಿದಾಗ ಸಮಸ್ಯೆಗೆ ಪರಿಹಾರವೊಂದು ಅಲ್ಲೇ ಸುಲಭವಾಗಿ ಗೋಚರಿಸುತ್ತದೆ.

ಬದುಕಿನಲ್ಲಿ ತಮಗೆದುರಾದ ಕಠಿನ ಸನ್ನಿವೇಶಗಳನ್ನು ಸವಾಲಾಗಿ ಸ್ವೀಕರಿಸಿ, ಅವಕಾಶಗಳನ್ನಾಗಿ ಪರಿವರ್ತಿಸಿ ಯಶಸ್ಸನ್ನು ಸಾಧಿಸಿರುವ ಅದೆಷ್ಟೋ ವ್ಯಕ್ತಿಗಳನ್ನು ನಾವಿಂದು ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕಾಣಬಹುದಾಗಿದೆ. ಇಂತಹ ಸಾಧನಾಶೀಲ ವ್ಯಕ್ತಿಗಳ ಬದುಕಿನ ಸಾಹಸಗಾಥೆಗಳನ್ನು ಪುಟ ತಿರುವಿ ನೋಡಿದಾಗ ಮನಸ್ಸಲ್ಲಿ ತುಂಬಿ ಬರುವ ಸ್ಫೂರ್ತಿ ನಮ್ಮ ಯೋಚನಾ ಲಹರಿಯನ್ನು ಬದಲಾಯಿಸುತ್ತದೆ. ಬದುಕಿನಲ್ಲಿ ಎದುರಾಗುವ ಅದೆಂತಹ ಕಠಿನ ಪರಿಸ್ಥಿತಿಯಲ್ಲೂ ಧೃತಿಗೆಡದೆ ಇಂತಹ ಸನ್ನಿವೇಶಗಳನ್ನು ಸವಾಲಾಗಿ ಸ್ವೀಕರಿಸಿ ಅವಕಾಶಗಳನ್ನಾಗಿ ಪರಿವರ್ತಿಸಿಕೊಂ ಡದ್ದೇ ಆದಲ್ಲಿ ಅಲ್ಲೊಂದು ಸಾಧನೆಯ ಇತಿಹಾಸದ ಪುಟವೊಂದು ತನ್ನಿಂತಾನಾಗಿ ತೆರೆದುಕೊಳ್ಳುತ್ತದೆ. ಅಲ್ಲಿ ಸಿಗುವ ಶ್ರೇಯಸ್ಸು ಚಿಕ್ಕ ಮಟ್ಟಿನದಾಗಿದ್ದರೂ ಅದು ದೊಡ್ಡ ಸಾಧನೆಯೆನಿಸುತ್ತದೆ. ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ ಎಂದು ಪರಿಭಾವಿಸಿ ಎದುರಾಗುವ ಸವಾಲುಗಳಿಗೆ ಸಕಾರಾತ್ಮಕವಾಗಿ ನಮ್ಮನ್ನು ತೆರೆದು
ಕೊಂಡು ಮುನ್ನುಗಿದಾಗ ದೊರಕುವ ಶ್ರೇಯಸ್ಸು ಅನನ್ಯವಾದುದು. “ಉದ್ಧರೇ ದಾತ್ಮನಾತ್ಮಾನಂ ನಾತ್ಮಾನಮ ವಸಾದ ಯೇತ್‌ ಆತ್ಮೆವ ಹ್ಯಾತ್ಮನೋ ಬಂಧು ರಾತ್ಮೆವ ರಿಪುರಾತ್ಮನಃ’-ತನ್ನ ಮೂಲಕ ತನ್ನನ್ನು ಸಂಸಾರ ಸಾಗರದಿಂದ ಉದ್ಧಾರ ಮಾಡಿಕೊಳ್ಳಲಿ ಮತ್ತು ತನ್ನನ್ನು ಅಧೋಗತಿಗೆ ಕೊಂಡೊಯ್ಯದಿರಲಿ. ಏಕೆಂದರೆ ಈ ಮನುಷ್ಯನು ತನಗೆ ತಾನೇ ಮಿತ್ರನೂ ಮತ್ತು ತಾನೇ ಶತ್ರುವೂ ಆಗಿದ್ದಾನೆ ಎಂದರ್ಥ. “ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೆ ವಾತ್ಮನಾ ಜಿತಃ ಅನಾತ್ಮನಸ್ತು ಶತ್ರುತ್ಮೆ ವತೇìತಾತ್ಮೆವ ಶತ್ರುವತ್‌’- ಯಾವ ಜೀವಾತ್ಮನ ಮೂಲಕ ಮನಸ್ಸು ಮತ್ತು ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿದೆಯೋ ಅ ಜೀವಾ ತ್ಮನಿಗಾದರೋ ಅವನು ತನಗೆ ತಾನೇ ಮಿತ್ರನಾಗಿ¨ªಾನೆ ಮತ್ತು ಯಾರ ಮೂಲಕ ಮನಸ್ಸು ಮತ್ತು ಇಂದ್ರಿಯಗಳ ಸಹಿತವಾದ ಶರೀರವು ಗೆಲ್ಲಲ್ಪಟ್ಟಿಲ್ಲವೋ ಅವನಿಗೆ ಅವನು ಶತ್ರುವಿನಂತೆ ಶತ್ರುತ್ವದಲ್ಲಿ ವರ್ತಿಸುತ್ತಾನೆ ಎಂಬ ಭಗವಂತನ ಉವಾಚಗಳ ಸಾರಗಳು ಅದೆಷ್ಟೊಂದು ಅದ್ಭುತ !

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next