Advertisement
ಹಂದಿಕೇರಾ ಗ್ರಾಮದಲ್ಲಿ ಮೂವರು ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ತಿರುಗಾಡುತ್ತಿದ್ದರು. ಶಾಲೆಯ ಪಕ್ಕದಲ್ಲೇ ನಿಂತಿದ್ದರಿಂದ ಅಲ್ಲೇ ಇದ್ದ ಮಕ್ಕಳಿಗೆ ಚಾಕೋಲೇಟ್ ಕೊಡಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು “ಮಕ್ಕಳ ಕಳ್ಳರೆಂದು’ ಪ್ರಶ್ನಿಸಿದ್ದಾರೆ.
ಗ್ರಾಮಸ್ಥರು ಮುರ್ಕಿ ಗ್ರಾಮಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮೊದಲೇ ಮಾಹಿತಿ ಅರಿತಿದ್ದ ಮುರ್ಕಿ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕಲ್ಲು ಹಾಕಿ ಕಾಯುತ್ತ ಕುಳಿತಿದ್ದಾರೆ. ನೂರಾರು ಜನ ಸೇರಿದ್ದಲ್ಲದೇ, ರಸ್ತೆಗೆ ಕಲ್ಲು ಅಡ್ಡ ಹಾಕಿದ್ದರಿಂದ ಹೆದರಿ ಕಾರನ್ನು ಕಲ್ಲಿನ ಮೇಲೆಯೇ ಹತ್ತಿಸಿ
ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಕಲ್ಲಿನ ಮೇಲೆ ಹತ್ತಿಸುವ ವೇಳೆ ಕಾರು ಉರುಳಿ ಬಿದ್ದಿದೆ. ಆಗ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಮಲನಗರ ಸಿಪಿಐ ದಯಾಸಾಗರ ನೇತೃತ್ವದಲ್ಲಿ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Related Articles
ಒಬ್ಬನನ್ನು ಹೆಚ್ಚಿನ ಚಿಕಿತ್ಸೆಗೆ ಔರಾದ ತಾಲೂಕು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
Advertisement
ಹಂದಿಕೇರಾ ಗ್ರಾಮಕ್ಕೆ ಬಂದವರು ಮಕ್ಕಳ ಕಳ್ಳರು ಅಲ್ಲ. ಹೈದಾರಾಬಾದ್ ಮೂಲದವರಾಗಿದ್ದು, ಕಾರಿನಲ್ಲಿ ಲಾಂಗ್ಡ್ರೈವ್ಗೆ ಬಂದಿದ್ದರು.
ಡಿ. ದೇವರಾಜ, ಎಸ್‌ಪಿ