Advertisement

ಎರಡೇ ಪಾತ್ರಗಳ ಸುತ್ತ ತಿಮ್ಮೇಗೌಡ

11:20 AM Aug 30, 2018 | Team Udayavani |

ದೇಶದ ಮೊದಲ ಶಿಕ್ಷಕಿ “ಸಾವಿತ್ರಿಬಾಯಿ ಫ‌ುಲೆ’ ಅವರ ಬದುಕು ಆಧರಿಸಿದ “ಸಾವಿತ್ರಿಬಾಯಿ ಫ‌ುಲೆ’ ಚಿತ್ರದ ಮೂಲಕ ಇನ್ನಷ್ಟು ಗಮನಸೆಳೆದಿದ್ದ ನಟಿ ತಾರಾ, ಈಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಅದು ಕೂಡ ಹೊಸ ಬಗೆಯ ಚಿತ್ರ ಎಂಬುದು ವಿಶೇಷ. ಆ ಚಿತ್ರಕ್ಕೆ “ಮಿಸ್ಟರ್‌ ಅಂಡ್‌ ಮಿಸಸ್‌ ತಿಮ್ಮೇಗೌಡ’ ಎಂದು ನಾಮಕರಣ ಮಾಡಲಾಗಿದೆ. ತಾರಾ ಅವರ ಪತಿಯಾಗಿ ನಟ ಕಿಶೋರ್‌ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಇಡೀ ಚಿತ್ರದಲ್ಲಿ ಇವರಿಬ್ಬರೇ ಹೈಲೆಟ್‌. ಅಂದಹಾಗೆ, ಈ ಚಿತ್ರಕ್ಕೆ ಪ್ರಶಾಂತ್‌ ನಿರ್ದೇಶಕರು. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ನಾಗಾಭರಣ, ಸಾಧು ಕೋಕಿಲ, ನಾಗೇಂದ್ರ ಪ್ರಸಾದ್‌ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಪ್ರಶಾಂತ್‌ ಅವರಿಗಿದೆ. ಈ ಚಿತ್ರಕ್ಕೆ ಡಾ. ಸೂರಿ ನಿರ್ಮಾಪಕರು. “ಇದು ಎರಡು ಪಾತ್ರಗಳ ನಡುವಿನ ಕಥೆ. ಇಡೀ ಚಿತ್ರದಲ್ಲಿ ಎರಡೇ ಪಾತ್ರಗಳು ಕಾಣಿಸಿಕೊಳ್ಳಲಿವೆ.

ಗಂಡ ಮತ್ತು ಹೆಂಡತಿ ನಡುವಿನ ಬದುಕು, ಬವಣೆ, ನೋವು, ನಲಿವು ಮತ್ತು ಅವರ ಸುಂದರ ಲೈಫ್ ಬಗ್ಗೆ ಕಥೆ ಸಾಗಲಿದೆ. ಆ ಮಧ್ಯೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದರೆ, ಅದ್ಯಾವ ಸಮಸ್ಯೆಯೂ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡುವುದಿಲ್ಲ’ ಎಂಬುದು ನಿರ್ದೇಶಕ ಪ್ರಶಾಂತ್‌ ಮಾತು. ಪ್ರತಿಯೊಬ್ಬರು ಹೀಗೂ ಬದುಕಬಹುದಾ ಎಂಬ ಬದುಕನ್ನು ತೋರಿಸುವ ಉದ್ದೇಶ ಈ ಚಿತ್ರದ್ದು.

ಪ್ರಪಂಚದಲ್ಲಿರುವ ಸುಮಾರು 50 ಪ್ಪಸ್‌ ಆಸುಪಾಸಿನ ವಯಸ್ಸಿನವರಿಗೆ ಆಗುವಂತಹ ತಳಮಳ, ತಲ್ಲಣದ ಅಂಶಗಳು ಒಂದೇ ರೀತಿಯಾಗಿರುತ್ತವೆ. ಅಂತಹ ಯುನಿರ್ವಸಲ್‌ ವಿಷಯ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ. ಕೆ.ಆರ್‌.ನಗರ ತಾಲೂಕು ಶ್ರೀರಾಮಪುರ ಗ್ರಾಮದಲ್ಲಿರುವ ಒಂದು ಮನೆಯಲ್ಲಿ ಚಿತ್ರೀಕರಣ ನಡೆಯಲಿದೆ. ಸುಮಾರು ಎರಡು ಸಾವಿರ ಕಿ.ಮೀ ಸುತ್ತಾಟ ನಡೆಸಿ, ಕೊನೆಗೆ ಕಥೆಗೆ ಬೇಕಾದ ಮನೆ ಹುಡುಕಿದ್ದು ವಿಶೇಷ’ ಎಂಬುದು ನಿರ್ದೇಶಕರ ಮಾತು. 

ಚಿತ್ರಕ್ಕೆ ಎಲ್ಲಾ ತಯಾರಿಯೂ ನಡೆದಿದೆ. ಕಿಶೋರ್‌ ಡೇಟ್ಸ್‌ ನೋಡಿಕೊಂಡು ಚಿತ್ರೀಕರಣಕ್ಕೆ ಹೋಗುವ ಯೋಚನೆ  ಇದೆ. ನವೆಂಬರ್‌ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಸನಾ ರವಿಕುಮಾರ್‌ ಛಾಯಾಗ್ರಹಣವಿದೆ. ಅರ್ಜುನ್‌ ಜನ್ಯಾ ಅವರು ಸಂಗೀತ ನೀಡುತ್ತಿದ್ದು, ನಾಲ್ಕು ಹಾಡುಗಳು ಚಿತ್ರದಲ್ಲಿರಲಿವೆ. ಇಲ್ಲಿ ಎರಡು ಪಾತ್ರಗಳ ಜೊತೆಗೆ ಔಟ್‌ ವಾಯ್ಸ ಕೇಳಿಬರಲಿದೆ. ಬಿಟ್ಟರೆ, ಯಾವ ಪಾತ್ರವೂ ತೆರೆಯ ಮೇಲೆ ಬರಲ್ಲ ಎಂಬುದು ಪ್ರಶಾಂತ್‌ ಮಾತು.

Advertisement
Advertisement

Udayavani is now on Telegram. Click here to join our channel and stay updated with the latest news.

Next