Advertisement

ವಿಕಲ ಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಯ ಪರ್ಸ್ ಎಗರಿಸಿದ ಕಳ್ಳ!

04:21 PM Oct 16, 2021 | Team Udayavani |

ಬಂಟ್ವಾಳ: ವಿಕಲಚೇತನ ಫಲಾನುಭವಿಗಳಿಗೆ ನೀಡುವ ದ್ವಿಚಕ್ರವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ  ಫಲಾನುಭವಿಯೋರ್ವಳ ಪರ್ಸ್ ಕಳವು ಮಾಡಿದ ಘಟನೆ ನಡೆದಿದೆ.

Advertisement

ವಿಟ್ಲ ಪಡ್ನೂರು ನಿವಾಸಿ ವಿಕಲಚೇತನ ಫಲಾನುಭವಿ ಯಶೋಧ ಬಿ ಅವರು ಶಾಸಕರ ಕೈಯಿಂದ ದ್ವಿ ಚಕ್ರವಾಹನದ ಕೀಲಿ ಕೈ ವಿತರಿಸುವ ವೇಳರ ಫಲಾನುಭವಿ ತನ್ನ ಪರ್ಸ್ ನ್ನು ಅಲ್ಲೇ ಕೆಳಗೆ ಇಟ್ಟಿದ್ದರು.  ಆದರೆ ವಾಹನ ಕೀ ಪಡೆದು ನೋಡುವಷ್ಟರಲ್ಲಿ ಪರ್ಸ್ ಮಾಯವಾಗಿತ್ತು. ಪರ್ಸ್ ನಲ್ಲಿ ನಗದು ಹಣ ಹಾಗೂ ಎ.ಟಿ.ಎಂ.ಕಾರ್ಡ್ ಇತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಿ.ಸಿ.ಕ್ಯಾಮರಾ ದಲ್ಲಿ ಸೆರೆ:

ಇಬ್ಬರು ವ್ಯಕ್ತಿಗಳು ಪರ್ಸ್ ಕಳವು ಮಾಡುವ ದೃಶ್ಯ ಶಾಸಕರ ಕಚೇರಿ ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಫಲಾನುಭವಿಗಳಿಗೆ ಕೀಲಿ ಕೈ ಕೊಡುವ ಸಂದರ್ಭದಲ್ಲಿ ಹೊಂಚು ಹಾಕಿ ಪರ್ಸ್ ಕಳವು ಮಾಡಿ ಪರಾರಿಯಾಗಿದ್ದಾರೆ.

ಈ ಪರ್ಸ್ ಇಲ್ಲಿನ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ಸಿಕ್ಕಿದ್ದು, ಅದರೊಳಗೆ ಇದ್ದ ನಗದು ಹಣ ಹಾಗೂ ಎ‌ಟಿ‌ಎಂ ಕಾರ್ಡ್ ಕಾಣೆಯಾಗಿದೆ, ಕೇವಲ ಪರ್ಸ್ ಮಾತ್ರ ಬಿಟ್ಟು ಹೋಗಿದ್ದು , ಕಳ್ಳರಿಗಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Advertisement

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next