Advertisement
ಬಹಳಷ್ಟು ಕಾರಣಗಳಿಂದ ನಮಗೆ ಇದು ಸತ್ಯ ಎಂದು ಕಂಡರೂ ಕೆಲವೊಮ್ಮೆ ವಿಭಿನ್ನವಾದ ದೃಷ್ಟಿಕೋನವನ್ನಿಟ್ಟುಕೊಂಡು ಗಮನಿಸಿದರೆ ಇದು ಸರಿಯಲ್ಲವೆಂದೂ ಅನ್ನಿಸುತ್ತದೆ. ಉದಾಹರಣೆಗೆ, ಭಾರತೀಯ ಸಂಗೀತಪದ್ಧತಿಯಲ್ಲಿ ಅದರಲ್ಲೂ ಹಿಂದೂಸ್ತಾನಿ ಸಂಗೀತದಲ್ಲಿ ಆಳವಾದ ಅಭ್ಯಾಸವನ್ನು ಹೊಂದಿರುವಂಥ ಕಲಾವಿದರು ಪಾಶ್ಚಾತ್ಯ ಸಂಗೀತದ ಹಾರ್ಮನಿಯನ್ನು ಭಾರತೀಯ ಸಂಗೀತದ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳಲು ನಿಜಕ್ಕೂ ಹೆಣಗಬೇಕಾಗುತ್ತದೆ. ನಮ್ಮ ಸಂಗೀತದ ಕೃತಿ ಅಥವಾ ಬಂದಿಶ್‌ಗಳಂತೆ ಪಾಶ್ಚಾತ್ಯರ, ಅದರಲ್ಲೂ ಬಿಥೋವನ್ ಮೊದಲಾದ ದಿಗ್ಗಜರ ರಚನೆಗಳು ಇರುವುದಿಲ್ಲ. ಕಾರ್ಡ್ಸ್ ಮತ್ತು ಹಾರ್ಮನಿ ಎಂಬ ವಿಭಿನ್ನವಾದ ರಚನಾ ಶೈಲಿಯು ಪಾಶ್ಚಾತ್ಯರ ಸಂಗೀತದಲ್ಲಿÉ ಎದ್ದು ಕಾಣಿಸುವುದು ಆ ಬದಿಯ ವಿಶೇಷವಾದ ಮನೋಧರ್ಮ. ಭಜನೆಯ ಸಾಲಿನ ವಿಟuಲನನ್ನು ಹೇಗೆ ಕರೆದರೂ ಅವನು ನಮಗೆ ವಿಟuಲನೇ, ಕೋಮಲಗಾಂಧಾರದಲ್ಲಿ ನಾವು ವಿಟuಲನನ್ನು ಕರೆದರೆ ಅÇÉೊಂದು ಮಾರ್ದವತೆಯಿರುತ್ತದೆ.
Related Articles
Advertisement
ಭಾರತೀಯ ಸಂಗೀತದಲ್ಲಿ ದಿಗ್ಗಜರೆನಿಸಿಕೊಂಡವರು ಹೀಗೆ ಸಂಪೂರ್ಣ ಪಾಶ್ಚಾತ್ಯ ಸಂಗೀತದ ಆರ್ಕೆಸ್ಟ್ರಾಗಳಲ್ಲಿ ನುಡಿಸುವ ಯತ್ನವನ್ನು ಮಾಡಿ ಅಸಮಾಧಾನದಿಂದ ವೇದಿಕೆಯಿಳಿದ ಉದಾಹರಣೆಗೇನೂ ಕಮ್ಮಿಯಿಲ್ಲ. ದಕ್ಷಿಣ ಆಫ್ರಿಕಾದ ಡರ್ಬನ್ನಿನ ಫಿಲ್ ಹಾರ್ಮೋನಿಕ್ ಆರ್ಕೆಸ್ಟ್ರಾದ ಜೊತೆಗೆ ವೇದಿಕೆಯೇರಿ ಕುಳಿತ ಪಂ. ಹರಿಪ್ರಸಾದ್ ಚೌರಾಸಿಯಾ ಕೂಡ ಇಂಥದ್ದೇ ಒಂದು ಪರಿಸ್ಥಿತಿಯನ್ನು ಎದುರಿಸಿದ್ದರು.
ಆದರೆ, ಚೆನ್ನಾಗಿ ಪಾಶ್ಚಾತ್ಯ ಸಂಗೀತವನ್ನು ಅಭ್ಯಾಸ ಮಾಡಿದ ವಾದ್ಯ ಕಲಾವಿದ ಅಥವಾ ಗಾಯಕನಿಗೆ ಭಾರತೀಯ ಸಂಗೀತವನ್ನು ಅರ್ಥೈಸಿಕೊಳ್ಳುವುದು ಭಾರತೀಯ ಸಂಗೀತಗಾರ ಪಾಶ್ಚಾತ್ಯ ಸಂಗೀತವನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಗಿಂತ ಸುಲಭ. ಯಾಕೆಂದರೆ, ಅವರಲ್ಲಿ ರಾಗದ ಸಂಕ್ಷಿಪ್ತ ರೂಪವಾದ ಸ್ಕೇಲ್ ಎಂಬ ಪದ್ಧತಿಯಿದೆ. ರಾಗದ ಸ್ವರಗಳನ್ನು ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಅಳೆದು ಇದು ಆರೋಹಣ ಮತ್ತು ಇದು ಅವರೋಹಣ ಎಂದು ಹೇಳುವುದು ಸ್ಕೇಲ…. ಡರ್ಬನ್ನಿನಲ್ಲಿ ಅಂಥ ಮಿತ್ರನೊಬ್ಬನಿ¨ªಾನೆ. ಅವನ ಹೆಸರು Guy Buttery. ಖುದ್ದು ಪಾಶ್ಚಾತ್ಯ ಸಂಗೀತದ ಉತ್ತಮ ಕಲಾವಿದನೂ, ವರ್ಷಕ್ಕೊಮ್ಮೆ ತನ್ನ ಕಛೇರಿಗಳಿಗಾಗಿ ಜಗತ್ತಿನ ಪರ್ಯಟನೆ ಮಾಡುವಷ್ಟು ತನ್ನ ಸಂಗೀತಪ್ರಕಾರದಲ್ಲಿ ಪ್ರಖ್ಯಾತನಾದ ಈತ ದಿನಕ್ಕೆ ಕೆಲವೊಮ್ಮೆ ಬರೋಬ್ಬರಿ ಹತ್ತು ತಾಸು ಸತತವಾಗಿ ಕಿಶೋರಿ ಅಮೋನ್ಕರ್ ಸಂಗೀತವನ್ನು ಕೇಳುತ್ತಾನೆ. ಗಿಟಾರ್ ವಾದಕನಾದ ಈತ ತಕ್ಕಮಟ್ಟಿಗೆ ಸಿತಾರನ್ನೂ ನುಡಿಸುತ್ತಾನೆ. ಕೇವಲ ರೆಕಾರ್ಡನ್ನು ಕೇಳಿಸಿಕೊಂಡು ಇದು ವಿಲಾಯತ್ ಖಾನ್‌ರ ಬಾಜ್ ಎಂದು ಗುರುತಿಸುತ್ತಾನೆ. ಭಾರತೀಯ ಸಂಗೀತದ ಬಗ್ಗೆ ಈ ಕಲಾವಿದನಿಗಿರುವ ಮೋಹವು ಆತನ ಸಾಂಗೀತಿಕ ವ್ಯಕ್ತಿತ್ವದ ಬಗ್ಗೆ ಬಹಳ ಗೌರವವನ್ನು ಮೂಡಿಸುತ್ತದೆ.
ಬಗೆಬಗೆಯ ಸಂಗೀತದ ಮೇಳೈಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯತ್ನಗಳ ಫಲಾಫಲವನ್ನು ಹತ್ತಿರದಿಂದ ನೋಡಿದರೆ ಸಂಗೀತಕ್ಕಿರುವ ಅಂಥಾ¨ªೊಂದು ವಿಶಿಷ್ಟ ಗುಣವು ಕಾಣಿಸುತ್ತದೆ. ಸಂದರ್ಭ ಮತ್ತು ಪರಿಶ್ರಮದ ಅಧಾರದ ಮೇಲೆ ಒಂದು ಬಗೆಯ ಸಂಗೀತವು ಮತ್ತೂಂದು ಬಗೆಯ ಸಂಗೀತದೊಂದಿಗೆ ನೀರಿನಂತೆ ಒಂದಾಗಬಹುದು ಅಥವಾ ಪಾದರಸದಂತೆ ದ್ರವವಾಗಿ ಹರಿಯಲು ಜಿದ್ದಿಯೂ ಆಗಬಹುದು.
– ಕಣಾದ ರಾಘವ