ಹೊಸದಿಲ್ಲಿ: ನೂತನ ಸಂಸತ್ ಭವನ ಉದ್ಘಾಟನೆಯ ಬಗ್ಗೆ ಟೀಕೆಗಳು ಬರುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ.
ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಇಂದು ದೆಹಲಿಗೆ ಆಗಮಿಸಿದರು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಸಮುದಾಯ ಕಾರ್ಯಕ್ರಮವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಅಲ್ಲಿನ ಪ್ರೇಕ್ಷಕರಲ್ಲಿ ಕೇವಲ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಮಾತ್ರ ಇದ್ದಿದ್ದು ಅಲ್ಲ. ಅಲ್ಲಿ ಆ ದೇಶದ ಮಾಜಿ ಪ್ರಧಾನಿ, ವಿರೋಧ ಪಕ್ಷದ ಸಂಸದರೂ ಕೂಡಾ ಇದ್ದರು. ಅವರೆಲ್ಲರೂ ದೇಶದ ಹಿತಕ್ಕಾಗಿ ಅಲ್ಲಿ ಸೇರಿದ್ದರು ಎಂದರು.
ಇದನ್ನೂ ಓದಿ:IPL Stories; ಆರ್ ಸಿಬಿ ನೆಟ್ ಬೌಲರ್, ಪಂತ್ ನೆರೆಮನೆಯಾತ…: ಯಾರು ಈ ಆಕಾಶ್ ಮಧ್ವಾಲ್
Related Articles
“ಮಾಜಿ ಪ್ರಧಾನಿ ಕೂಡ ಆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿರೋಧ ಪಕ್ಷದ ಮತ್ತು ಆಡಳಿತ ಪಕ್ಷದ ಸಂಸದರು ಇದ್ದರು. ಅವರೆಲ್ಲರೂ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು” ಎಂದು ಪ್ರಧಾನಿ ಹೇಳಿದರು.
“ಬಿಕ್ಕಟ್ಟಿನ ಸಮಯದಲ್ಲಿ, ಮೋದಿ ಜಗತ್ತಿಗೆ ಏಕೆ ಲಸಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಕೇಳಿದರು, ನೆನಪಿಡಿ, ಇದು ಬುದ್ಧನ ಭೂಮಿ, ಇದು ಗಾಂಧಿಯ ನಾಡು! ನಾವು ನಮ್ಮ ಶತ್ರುಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ, ನಾವು ಸಹಾನುಭೂತಿಯಿಂದ ಪ್ರೇರಿತ ಜನರು!” ಎಂದು ಪ್ರಧಾನಿ ಮೋದಿ ಹೇಳಿದರು.
ಹೊಸ ಸಂಸತ್ ಕಟ್ಟಡವನ್ನು ಭಾನುವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ, ಆದರೆ ಈ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಭಾಗವಹಿಸುತ್ತದೆ. ಸುಮಾರು 20 ಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.