ಲಂಡನ್: ಬ್ರಿಟನ್ ಇತಿಹಾಸದಲ್ಲೇ ಪ್ರಧಾನಿ ಥೆರೆಸಾ ಮೇಗೆ ಭಾರಿ ಹಿನ್ನಡೆ ಉಂಟಾಗಿದ್ದು, ಸಂಸತ್ತಿ ನಲ್ಲಿ ಬ್ರೆಕ್ಸಿಟ್ ವಿರುದ್ಧ ಸಂಸದರು ಮತ ಹಾಕಿದ್ದಾರೆ. ಇದ ರಿಂದಾಗಿ ಮೇ ವಿರುದ್ಧ ಅವಿಶ್ವಾಸ ಗೊ ತ್ತುವಳಿ ಹೊರಡಿಸುವ ಆತಂಕ ವ್ಯಕ್ತವಾಗಿದ್ದು, ಈ ವಿತ್ತವರ್ಷದಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಸಾಧ್ಯತೆ ಇಲ್ಲವಾದಂತಾಗಿದೆ. ಅಷ್ಟೇ ಅಲ್ಲ, ಬ್ರೆಕ್ಸಿಟ್ ಬಗ್ಗೆ ಈ ವರೆಗೆ ರೂಪಿಸಿದ್ದ ಯೋಜನೆಗಳೆಲ್ಲವೂ ತಲೆಕೆಳಗಾಗಿವೆ. ಬ್ರಿಟನ್ ಹೊರಬರುವುದರ ಪರ ಮಸೂದೆಗೆ 432ರ ಪೈಕಿ 202 ಸಂಸದರು ಮತ ಹಾಕಿದ್ದು, 230 ಮತದ ಅಗತ್ಯವಿತ್ತು. ಇದು ಇತ್ತೀಚಿನ ದಿನಗಳಲ್ಲೇ ಬ್ರಿಟಿಷ್ ಪ್ರಧಾನಿಗೆ ಆದ ಹಿನ್ನಡೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಈ ಸೋಲಿನ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿಪಕ್ಷ ಲೇಬರ್ ಪಾರ್ಟಿಯ ನಾಯಕ ಜೆರೆಮಿ ಕಾರ್ಬಿನ್, ಮೇ ವಿರುದ್ಧ ಅವಿಶ್ವಾಸಮತ ನಿಲು ವಳಿ ಕೈಗೊಳ್ಳುವಂತೆ ಪ್ರಸ್ತಾಪ ಮಂಡಿಸಿದ್ದಾರೆ. 1973ರಲ್ಲಿ ಐರೋಪ್ಯ ಒಕ್ಕೂಟಕ್ಕೆ ಸೇರಿದ್ದ ಬ್ರಿಟನ್ ಮಾರ್ಚ್ 29ಕ್ಕೆ ಹೊರಬರಬೇಕಿತ್ತು. ಇನ್ನು ಕೇವಲ ಎರಡೇ ತಿಂಗಳಿದ್ದರೂ ಬ್ರಿಟನ್‌ನಲ್ಲಿ ಅಗತ್ಯ ಪೂರ್ವತಯಾರಿಯೇ ಆಗಿಲ್ಲ. ಬ್ರೆಕ್ಸಿಟ್ ಬರವಾಗಿರುವವರು ಹಾಗೂ ವಿರೋಧಿ ಗಳು ಕೂಡ ವಿವಿಧ ಕಾರಣಗಳಿಗೆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬ್ರೆಕ್ಸಿಟ್‌ನಿಂದ ಇಂಗ್ಲೆಂಡ್‌ನ ವ್ಯಾಪಾರ ವಹಿವಾಟಿಗೆ ತೊಂದರೆ ಯಾಗಬಹುದು ಎಂಬ ಭೀತಿ ಮೂಡಿದೆ.