ಬೆಂಗಳೂರು: ಜೆಡಿಎಸ್ ಮೈತ್ರಿ ಬಗ್ಗೆ ಪಕ್ಷದೊಳಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಬಗ್ಗೆ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಚರ್ಚೆ ನಡೆದಿಲ್ಲ, ಇದರ ಬಗ್ಗೆ ಯಡಿಯೂರಪ್ಪ ಜತೆ ಚರ್ಚೆ ನಡೆಸುತ್ತೇನೆ ಎಂದರು.
ಹಣ ಬಿಡುಗಡೆ: ಮಳೆಹಾನಿ ಪರಿಹಾರದ ಬಗ್ಗೆ ಮಾತನಾಡಿದಿ ಸಿಎಂ, 500 ಕೋಟಿ ರೂ. ರಸ್ತೆ ದುರಸ್ತಿ ಅಭಿವೃದ್ಧಿಗೆ ಕೊಟ್ಟಿದ್ದೇವೆ. ಪೂರ್ಣ ಮನೆ ಹಾನಿಯಾದವರಿಗೆ ಒಂದು ಲಕ್ಷ ಬಿಡುಗಡೆಗೆ ಸೂಚಿಸಿದ್ದೇನೆ. ಭಾಗಶಃ ಮನೆ ಹಾನಿಗೆ ಹಣ ಬಿಡುಗಡೆಗೆ ಆದೇಶಿಸಿದ್ದೇನೆ. ಬೆಳೆ ಸಮೀಕ್ಷೆ ಇಂದಿನಿಂದ ಶೀಘ್ರವಾಗಿ ಆಗಬೇಕು. ಪರಿಹಾರ ಆ್ಯಪ್‌ನಲ್ಲಿ ಎಂಟ್ರಿಯಾಗಬೇಕು ಅದರಂತೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದರು.
ಇದನ್ನೂ ಓದಿ:ಬೆಂ.ನಗರ ಜಿಲ್ಲೆ ಕಸಾಪ ಗದ್ದುಗೆಗೆ ಪ್ರಕಾಶಮೂರ್ತಿ
ರಾಯಣ್ಣ ಸೈನಿಕ ಶಾಲೆ: ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ದಾಸರ ಸಾಹಿತ್ಯಕ್ಕೆ ಒಳಹ ದೊಡ್ಡ ಕೊಡುಗೆ ಕೊಟ್ಟ ತತ್ವಜ್ಞಾನಿ. ಸಮಾಜ ಸುಧಾರಕರು, ವಿಶ್ವ ಮಾನವ ಕಲ್ಪನೆ ಹೊಂದಿದ್ದಂತಹವರು ಕನಕದಾಸರು. ಮಾನವೀಯ ಗುಣಗಳನ್ನು ಪ್ರತಿಪಾದಿಸಿದವರು. ಸಮಾನತೆ ಸಾರಿದವರು, ಸತ್ಯವನ್ನು ಸಾರಿದವರು. ಅವರ ಕರ್ಮಭೂಮಿ ಕಾಗಿನೆಲೆ. ಇಡೀ ಕರ್ನಾಟಕ ರಾಜ್ಯದ ದಾಸ ಪದಗಳನ್ನು ಹಾಡುವ ಮೂಲಕ ಜನರಿಗೆ ಜೀವನದ ಸಾರವನ್ನು ಹೇಳಿದ್ದಾರೆ. ಜನರಿಗೆ ಬದುಕು ದಾರಿಯನ್ನು ಹೇಳಿ ಕೊಟ್ಟಿದ್ದಾರೆ. ಅವರು ರಚಿಸಿರುವ ರಾಮಧಾನ್ಯ ಹೀಗೆ ಹಲವಾರು ಈಗ ಕೂಡ ದಾರಿ ದೀಪವಾಗಿವೆ. ಕಾಗಿನಲೆಯಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಿದ್ದೇವೆ. ಇದರ ಜೊತೆಗೆ ಸೊಂಗಳ್ಳಿ ರಾಯಣ್ಣ ಸಮಾಧಿ ಅಭಿವೃದ್ಧಿ ಮಾಡುತ್ತಿದ್ದೇವೆ. ಮ್ಯೂಸಿಯಂ ಮಾಡುತ್ತಿದ್ದೇವೆ. ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಮಾಡುತ್ತಿದ್ದೇವೆ. 180 ಕೋಟಿ ಖರ್ಚಾಗಿದೆ. ಇವತ್ತು 50 ಕೋಟಿ ಖರ್ಚು ಮಾಡಿ ಪೂರ್ಣ ಮಾಡಿದ್ದೇವೆ. ಶಿಸ್ತಿನ ಸಿಪಾಯಿಯ ಸೈನಿಕ ಶಾಲೆಯನ್ನು ಮಾಡುತ್ತಿದ್ದೇವೆ. ಕೇಂದ್ರದ ರಾಜ್ ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಶಾಲೆಯನ್ನು ಪೂರ್ಣಗೊಳಿಸಿದ ನಂತರ ಡಿಫೆನ್ಸ್ ಡಿಪಾರ್ಟ್ಮೆಂಟ್ ತೆಗೆದುಕೊಳ್ಳಬೇಕೆಂಬ ಇಚ್ಚೆ ಕರ್ನಾಟಕ ಸರ್ಕಾರದ್ದು. ಎಲ್ಲ ಕೆಲಸ ಕಾರ್ಯಗಳು ನಿರಂತರವಾಗಿ ಮಾಡುತ್ತಿದ್ದೇವೆ ಎಂದರು.