Advertisement

ಗುಂಡು ಹಾರಿಸದೆ ಬೇರೆ ಆಯ್ಕೆ ಇರಲಿಲ್ಲ

10:23 AM Dec 08, 2019 | mahesh |

ಬೆಂಗಳೂರು: ನಾಲ್ವರು ಆರೋಪಿಗಳು ಮಹಜರು ಕಾರ್ಯದ ವೇಳೆ ಪೊಲೀಸ್‌ ಸಿಬಂದಿಯ ಮೇಲೆ ತಿರುಗಿಬಿದ್ದು ಕೊಲೆಗೆ ಯತ್ನಿಸಿದರು… ಈ ವೇಳೆ ಅನಿವಾರ್ಯವಾಗಿ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು…

Advertisement

ಎನ್‌ಕೌಂಟರ್‌ ಮಾಡಿದ ತಂಡದ ನೇತೃತ್ವ ವಹಿಸಿದ್ದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ಸಿ. ವಿ. ಸಜ್ಜನರ್‌ ಅವರ ನೇರ ಮಾತಿದು.

 ಆರೋಪಿಗಳಿಗೆ ಗುಂಡು ಹಾರಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತೇ..?
ನಾಲ್ವರು ಆರೋಪಿಗಳ ಸಮ್ಮುಖದಲ್ಲಿ ಕೃತ್ಯ ಎಸಗಿದ ಸ್ಥಳದಲ್ಲಿ ಮಹಜರು ಕಾರ್ಯ ನಡೆಸ ಬೇಕಿತ್ತು. ಹೀಗಾಗಿ ಪೊಲೀಸರ ತಂಡ ಆರೋಪಿ ಗಳನ್ನು ಕರೆದೊಯ್ದಿತ್ತು. ಆದರೆ ಆರೋಪಿ ಗಳಾದ ಚನ್ನಕೇಶವಲು ಹಾಗೂ ಮೊಹಮ್ಮದ್‌ ಪೊಲೀಸರ ಬಳಿಯೇ ಪಿಸ್ತೂಲ್‌ ಕಸಿದು ಗುಂಡು ಹಾರಿಸಲು ಯತ್ನಿಸಿದ್ದರು. ಉಳಿದ ಆರೋಪಿಗಳು ಪೊಲೀಸರ ಮೇಲೆ ಕಲ್ಲು, ದೊಣ್ಣೆಗಳಿಂದ ಪ್ರತಿದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಇದರಲ್ಲಿ ಇಬ್ಬರು ಸಿಬಂದಿಯೂ ಗಾಯಗೊಂಡಿದ್ದಾರೆ.

 ಮುಂದಿನ ಕಾನೂನು ಪ್ರಕ್ರಿಯೆ?
ಈ ಹಂತದಲ್ಲಿ ಏನನ್ನೂ ಹೇಳಲು ಇಚ್ಛಿಸುವು ದಿಲ್ಲ. ಎಲ್ಲವೂ ಕಾನೂನಿನ ಅಡಿಯಲ್ಲಿಯೇ ಕರ್ತವ್ಯ ನಿರ್ವಹಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ತನಿಖೆಗೂ ಸಹಕರಿಸಲಾಗುವುದು.

 ತನಿಖೆಯಲ್ಲಿ ಕಂಡುಬಂದ ಅಂಶಗಳೇನು..?
ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂಬಂಧ ತಾಂತ್ರಿಕ ಅಂಶಗಳ ಆಧಾರ ದಲ್ಲಿಯೂ ತನಿಖೆ ನಡೆಸಲಾಗಿದೆ. ಎಫ್ಎಸ್‌ಎಲ್‌ ವರದಿ ಕೂಡ ಬಂದಿದೆ. ಆರೋಪಿ ಗಳು ವಿಚಾರಣೆ ವೇಳೆ ತನಿಖಾಧಿಕಾರಿ ಮುಂದೆ ತಪ್ಪೊಪ್ಪಿಕೊಂಡಿದ್ದರು. ಈಗ ಆರೋಪಿಗಳು ಮೃತರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಉಲ್ಲೇಖೀಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸ ಲಾಗುವುದು.

Advertisement

 ಕರ್ನಾಟಕದಲ್ಲೂ ಕುಕೃತ್ಯ ಎಸಗಿದ್ದರೇ?
ಆರೋಪಿಗಳು ಟ್ರಕ್‌ ಚಾಲನೆ ವೃತ್ತಿಯಲ್ಲಿ ತೊಡ ಗಿಸಿಕೊಂಡಿದ್ದರು. ಕರ್ನಾಟಕ ಮಾತ್ರ ವಲ್ಲದೆ ನೆರೆರಾಜ್ಯಗಳಲ್ಲಿಯೂ ಓಡಾಡಿದ್ದಾರೆ. ಅವರು ಇದೇ ಮಾದರಿಯ ಕೃತ್ಯಗಳನ್ನು ಎಸಗಿರಬಹುದು. ಹೀಗಾಗಿ ಅವರು ಎಲ್ಲೆಲ್ಲಿ ಸಂಚರಿಸಿದ್ದರು ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದ್ದು ತನಿಖೆ ನಡೆಸಲಾಗುತ್ತಿದೆ.

- ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next