ದೇವರೊಂದಿಗೆ ಆ ಭಕ್ತನಿಗೆ ಭಾರೀ ಸಲುಗೆಯಿತ್ತು.ಅದೊಮ್ಮೆ ಅವನು ಭಗವಂತನಜೊತೆ ಮಾತಾಡುತ್ತಾ ಆಕ್ಷೇಪದದನಿಯಲ್ಲಿ ಹೇಳಿದ: “ಪ್ರಭೂ,ಈ ಜಗತ್ತನ್ನು ಸೃಷ್ಟಿಸಿದವನುನೀನೇ ಇರಬಹುದು.
ಆದರೆಕೃಷಿಯ ವಿಷಯದಲ್ಲಿ ನಿನ್ನಲೆಕ್ಕಾಚಾರಗಳು ಏನೇನೂ ಸರಿಯಿಲ್ಲ. ಬೀಜ, ಅದರಬೆಳವಣಿಗೆ, ಅದಕ್ಕೆ ಕೊಡಬೇಕಿರುವ ರಕ್ಷಣೆಯ ಬಗ್ಗೆ ನಿನಗೆ ಖಂಡಿತ ಅರಿವಿಲ್ಲ’ ಅಂದ!”ಸರಿ, ಹಾಗಾದರೆ ನಿನ್ನ ಸಲಹೆ ಏನು?-ಭಗವಂತನ ಪ್ರಶ್ನೆ.ಈ ಭಕ್ತ ಹೇಳಿದ: “ನೀನು ಒಂದು ವರ್ಷಸುಮ್ಮನೇ ಇದ್ದುಬಿಡು. ನಾನು ಬಯಸಿದಂತೆಯೇ ಘಟನೆಗಳು ನಡೆಯಲಿ. ಆಗಕೃಷಿ ಕ್ಷೇತ್ರದಲ್ಲಿ ಎಂಥ ಒಳ್ಳೆಯ ಬದಲಾವಣೆ ಆಗುವುದೋ ನೀನೇ ನೋಡುವೆಯಂತೆ…’ಈ ಮಾತಿಗೆ ದೇವರೂ ಒಪ್ಪಿಕೊಂಡ.
ಆ ವರ್ಷ ಸಿಡಿಲು, ಮಿಂಚು, ಬಿರುಗಾಳಿ, ಮಳೆ, ಪ್ರವಾಹ…ಯಾವುದೂ ಇಲ್ಲದಂತೆ ರೈತ ಆಸೆ ಪಟ್ಟ. ಅವನುಬಯಸಿದಂತೆಯೇ ಎಲ್ಲವೂ ನಡೆಯಿತು.ಅಗತ್ಯವಿರುವಷ್ಟೇ ಮಳೆ, ಬಿಸಿಲು, ನೆರಳು,ಗಾಳಿ ಬರಲೆಂದು ರೈತ ಆದೇಶಿಸಿದ. ಪ್ರಕೃತಿ,ಹಾಗೆಯೇ ಬದಲಾಯಿತು.
ಕೃಷಿ ಚಟುವಟಿಕೆಆರಂಭವಾಗಿ ರಾಗಿ, ಭತ್ತ,ಗೋಧಿ ಸೊಂಪಾಗಿಬೆಳೆದವು. ಕೆಲದಿನಗಳನಂತರ ಕಟಾವಿನಸಮಯ ಬಂತು.ಗಿಡಗಳನ್ನು ಕತ್ತರಿಸಿನೋಡಿದರೆ ಆಶ್ಚರ್ಯ;ತೆನೆಯೊಳಗೆ ಕಾಳುಗಳಿಲ್ಲ!ರೈತ ಪೆಚ್ಚಾಗಿ, ದೇವರ ಎದುರು ನಿಂತು ಕೇಳಿದ:”ಭಗವಂತಾ, ಹೀಗೆಕಾಯಿತು?”ಆಗ ಭಗವಂತ ಹೇಳಿದ: “ನೀನುಬಯಸದೇ ಇದ್ದುದರಿಂದ ಅಲ್ಲಿಸವಾಲು, ಅಡೆತಡೆ, ಘರ್ಷಣೆ-ಇರಲಿಲ್ಲ. ಹೀಗಾಗಿ ರಾಗಿ/ಗೋಧಿ/ಭತ್ತದ ಪೈರುಗಳು ಹುಲುಸಾಗಿಬೆಳೆದವೇ ವಿನಃ ಕಾಳುಗಳನ್ನುಉತ್ಪಾದಿಸುವಲ್ಲಿ ವಿಫಲವಾದವು.
ಬದುಕಿನಲ್ಲಿಯಾವತ್ತೂ ಸ್ವಲ್ಪವಾದರೂ ಕಷ್ಟ ಇರಬೇಕು. ಸಿಡಿಲು,ಗುಡುಗು, ಮಿಂಚು, ಬಿರುಗಾಳಿ ಎಲ್ಲವೂ ಬೇಕು.ಇದನ್ನೆಲ್ಲಾ ಎದುರಿಸಿದಾಗಲೇ ಪ್ರತಿಯೊಂದುಜೀವಿಗೂ ಗಟ್ಟಿಯಾಗಿ ನಿಲ್ಲುವ ಶಕ್ತಿ ತಂತಾನೇಬರುತ್ತದೆ. ಬದುಕಿನಲ್ಲಿ ಸಂಭ್ರಮ ಮಾತ್ರವಲ್ಲ,ಸಂಕಟವೂ ಇರಬೇಕು. ಕಷ್ಟಗಳೇ ಇರುವುದಿಲ್ಲಅಂದರೆ, ಪ್ರತಿಯೊಂದು ಜೀವಿಯ ದೇಹವೂ ಜೊಳ್ಳಾಗಿಬಿಡುತ್ತದೆ…