Advertisement

ಗ್ರಾಮಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಬೇಡ

04:55 PM Jul 20, 2019 | Team Udayavani |

ಯಲಬುರ್ಗಾ: ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಬೇಡಿ. ಕುಡಿಯುವ ನೀರು, ನೈರ್ಮಲ್ಯದ ಕಡೆ ಹೆಚ್ಚು ಗಮನ ಹರಿಸಿ ಎಂದು ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಪಂ ಪಿಡಿಒಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಪಂಗಳ ಮಟ್ಟದಲ್ಲಿ ಇಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದು ನಿಮ್ಮ ಗಮನಕ್ಕೆ ಬರದೇ ನಡೆಯಲು ಸಾಧ್ಯವಿಲ್ಲ. ಆದರೂ ನಿಮಗೆ ತಿಳಿದಿಲ್ಲವೇ ಅಥವಾ ತಿಳಿದೂ ಸುಮ್ಮನಿದ್ದೀರಾ ಎಂದು ಪ್ರಶ್ನಿಸಿದ ಅವರು, ಗ್ರಾಮಗಳ ಅಭಿವೃದ್ಧಿಗಾಗಿ ವಿನೂತನ ಚಿಂತನೆಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳು ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ನೀರಿನ ಸಮಸ್ಯೆಗೆ ಆದ್ಯತೆ: ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕಾಗಿರುವುದು ನಿಮ್ಮ ಕರ್ತವ್ಯ. ಸಮಸ್ಯೆ ಪರಿಹರಿಸಲು ತುರ್ತಾಗಿ ನಿಮಗೆ ಏನು ಬೇಕೆಂದು ಇಒ ಅವರನ್ನು ಕೇಳಿ ಪಡೆಯಿರಿ. ಗ್ರಾಪಂ ಎಲ್ಲ ಪಿಡಿಒಗಳು ಸರಕಾರ‌ 14ನೇ ಹಣಕಾಸು ಯೋಜನೆಗೆ ಸರಕಾರದಿಂದ ಎಷ್ಟು ಅನುದಾನ ಬಂದಿದೆ ಎನ್ನುವುದರ ಬಗ್ಗೆ ಎಲ್ಲ ಮಾಹಿತಿ ನೀಡಬೇಕು. ಈಗಾಗಲೇ 2017-18 ಹಾಗೂ 2019ರ ಸಾಲಿನಲ್ಲಿ ಸರಕಾರದಿಂದ ಇದುವರೆಗೊ 14ನೇ ಹಣಕಾಸು ಯೋಜನೆಗೆ ಎಷ್ಟು ಹಣ ಬಿಡುಯಾಗಿದೆ, ಅದರ ಪೈಕಿ ಎಷ್ಟು ಅಭಿವೃದ್ಧಿಗೆ ಖರ್ಚು ಮಾಡಿದ್ದೀರಿ ಎನ್ನುವ ಬಗ್ಗೆ ಎಲ್ಲ ಮಾಹಿತಿ ಸಭೆಗೆ ತರುವಂತೆ ಮೊದಲೇ ತಿಳಿಸಿದಂತೆ ಈ ಸಭೆ ಕರೆಯಲಾಗಿದೆ ಎಂದರು.

14ನೇ ಹಣಕಾಸು ಯೋಜನೆಯಲ್ಲಿ ಗ್ರಾಪಂ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಸಾರ್ವಜನಿಕರ ಸಾಕಷ್ಟು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕಾಗಿದೆ. ಹೀಗಾಗಿ ಎಲ ಗ್ರಾಪಂ ಪಿಡಿಒಗಳು ಇದರ ಮಾಹಿತಿ ತಂದಿದ್ದಾರೆ ಎಂದು ಪ್ರಶ್ನಿಸುತ್ತಿದ್ದಂತೆ ಕೆಲ ಗ್ರಾಪಂ ಪಿಡಿಒಗಳು ತಂದಿಲ್ಲ ಎನ್ನುತ್ತಿದ್ದಂತೆ ಪಿಡಿಒಗಳ ಮೇಲೆ ಹರಿಹಾಯ್ದರು.

Advertisement

ಆಗ ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌ ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಯಾವ ಪಿಡಿಒಗಳು ಇದರ ಮಾಹಿತಿ ತಂದಿಲ್ಲ ಅಂತವರು ಸಭೆಯಿಂದ ಹೊರಗೆ ಹೋಗಿಬಿಡಿ. ನಿಮಗೆಷ್ಟು ಸಾರಿ ಹೇಳಬೇಕು. ಸರಕಾರ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಕೆಲ ಗ್ರಾಪಂ ಪಿಡಿಒಗಳು ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಆರೋಪ ಕೇಳಿಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮ್ಯಾಗೇರಿ ಗ್ರಾಪಂ ಕಾರ್ಯದರ್ಶಿ ಚನ್ನಬಸನ ಗೌಡ ಮಾಲಿಪಾಟೀಲ ಮಾತನಾಡಿ, ಈಗಾಗಲೇ 14ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರು, ನರೇಗಾ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ ಎಂದ‌ರು. ಬಂಡಿ ಗ್ರಾಪಂ ಪಿಡಿಒ ರವಿಕುಮಾರ ಲಿಂಗಣ್ಣನವರ್‌ ಮಾತನಾಡಿ, ನನ್ನ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ 14ನೇ ಹಣಕಾಸು ಯೋಜನೆಯಡಿ ಕೆರೆ ಅಭಿವೃದ್ಧಿ, ನರೇಗಾ ಯೋಜನೆ, ಚರಂಡಿ ನೈರ್ಮಲ್ಯೀಕರಣ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಇನ್ನೂ ವಿಕಲಚೇತನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದು ಹೇಳಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ ಸೇರಿದಂತೆ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next