ಪೊಚೆಫ್ ಸ್ಟ್ರೂಮ್: ಭಾರತೀಯ ವನಿತಾ ಕ್ರಿಕೆಟ್ ಇತಿಹಾಸ ದಲ್ಲೇ ಮೊದಲ ಐಸಿಸಿ ವಿಶ್ವಕಪ್ ಗೆದ್ದ ತಂಡದ ನಾಯಕಿ ಶಫಾಲಿ ವರ್ಮ ಈಗ ದೇಶದ ಕ್ರೀಡಾಪ್ರಿಯರ ಕಣ್ಮಣಿ. ಅವರ ತಂಡದ ಈ ಅಸಾಮಾನ್ಯ ಸಾಧನೆಗೆ ವಿಶ್ವವೇ ಕೊಂಡಾಡುತ್ತಿದೆ. ಆದರೆ ಈ ಅಭಿಯಾನ ಇಲ್ಲಿಗೇ ನಿಲ್ಲದು, ಇದು ಆರಂಭ ಮಾತ್ರ, ಇನ್ನೊಂದು ದೊಡ್ಡ ಟ್ರೋಫಿಯೊಂದಿಗೆ ತವರಿಗೆ ಮರಳಬೇಕೆಂಬುದು ಅವರ ಸ್ಪಷ್ಟೋಕ್ತಿ.
“ಇಲ್ಲ. ಇದು ಕೇವಲ ಆರಂಭ ಮಾತ್ರ. ದಕ್ಷಿಣ ಆಫ್ರಿಕಾದಿಂದ ಇನ್ನೊಂದು ದೊಡ್ಡ ಟ್ರೋಫಿಯನ್ನು ನಾವು ಭಾರತಕ್ಕೆ ಹೊತ್ತೂಯ್ಯಬೇಕಿದೆ’ ಎಂಬುದಾಗಿ ಶಫಾಲಿ ವರ್ಮ ಸಂದ ರ್ಶನವೊಂದರಲ್ಲಿ ಹೇಳಿದರು.
ಭಾರತದ ಸೀನಿಯರ್ ತಂಡದ ಡ್ಯಾಶಿಂಗ್ ಓಪನರ್ ಆಗಿರುವ ಶಫಾಲಿ ವರ್ಮ ಅಂಡರ್-19 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಪಡೆದದ್ದು ಅಚ್ಚರಿಯೇನೂ ಆಗಿರಲಿಲ್ಲ. ಇವರೊಂದಿಗೆ ಸೀನಿಯರ್ ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಕಿರಿಯರ ವಿಶ್ವಕಪ್ ತಂಡಕ್ಕೆ ಆಯ್ಕೆ ಯಾದರು. ಸಹಜವಾಗಿಯೇ ಭಾರತ ತಂಡ ಬಲಿಷ್ಠವಾಗಿ ಗೋಚರಿಸಿತು. ತಂಡದ ಸಾಮರ್ಥ್ಯ ಏನೆಂಬುದು ರವಿವಾರ ಸಂಜೆ ಸಾಬೀತಾಯಿತು.
ಇನ್ನು ಸೀನಿಯರ್ ವಿಶ್ವಕಪ್
ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ದಲ್ಲೇ ವನಿತೆಯರ ಸೀನಿಯರ್ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಈ ತಂಡದಲ್ಲಿ ಶಫಾಲಿ ವರ್ಮ ಕೂಡ ಇದ್ದಾರೆ. ಈ ದೊಡ್ಡ ಟ್ರೋಫಿ ಕೂಡ ತಮ್ಮದಾಗಬೇಕು ಎಂಬುದು ಶಫಾಲಿ ಅವರ ದೊಡ್ಡ ಕನಸು.
“ಅಂಡರ್-19 ವಿಶ್ವಕಪ್ ಗೆಲು ವಿನಿಂದ ಮೂಡಿದ ಉತ್ಸಾಹ ಎನ್ನು ವುದು ನಮಗೆ ಸೀನಿಯರ್ ವಿಶ್ವ ಕಪ್‌ನಲ್ಲಿ ಸ್ಫೂರ್ತಿ ಆಗಬೇಕಿದೆ. ದೇಶಕ್ಕೆ ಎರಡೆರಡು ವಿಶ್ವಕಪ್ ಟ್ರೋಫಿ ಗಳನ್ನು ಹೊತ್ತೂಯ್ಯುವ ಸುವರ್ಣಾ ವಕಾಶವೊಂದು ನಮ್ಮ ಮುಂದಿದೆ’ ಎಂದರು ಶಫಾಲಿ.
Related Articles
“ಅಂಡರ್-19 ತಂಡಕ್ಕೆ ಆಯ್ಕೆಯಾ ದಾಗ ಇದನ್ನು ಗೆಲ್ಲುವುದಷ್ಟೇ ನಮ್ಮ ಗುರಿಯಾಗಿತ್ತು. ಇದೀಗ ಸಾಕಾ ರಗೊಂಡಿದೆ. ಇನ್ನೀಗ ನಾನು ಸಂಪೂ ರ್ಣವಾಗಿ ಸೀನಿಯರ್ ತಂಡದೊಂದಿಗೆ ತೊಡಗಿಸಿಕೊಳ್ಳಬೇಕಿದೆ. ಇಲ್ಲಿನ ಕಾರ್ಯ ತಂತ್ರವೇ ಬೇರೆ’ ಎಂದರು.
ನೋವಿನ್ನೂ ಕಾಡುತ್ತಿದೆ…
2020ರಲ್ಲಿ ಎಂಸಿಜಿಯಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ 85 ಸಾವಿರ ವೀಕ್ಷಕರೆದುರು ಭಾರತ 85 ರನ್ನುಗಳಿಂದ ಆಸ್ಟ್ರೇಲಿಯಕ್ಕೆ ಸೋತ ನೋವು ಇನ್ನೂ ಕಾಡುತ್ತಿದೆ ಎಂದು ಶಫಾಲಿ ಈ ಸಂದರ್ಭದಲ್ಲಿ ಹೇಳಿದರು.
“ಇದಕ್ಕೆ ಅಂಡರ್-19 ವಿಶ್ವಕಪ್‌ನಲ್ಲಿ ಪರಿಹಾರ ಕಂಡುಕೊಳ್ಳಲೇಬೇಕೆಂದು ನಿರ್ಧರಿಸಿದ್ದೆ. ನಾವು ಈ ವಿಶ್ವಕಪ್ ಗೆಲ್ಲಲೇಬೇಕು, ಅದಕ್ಕಾಗಿಯೇ ನಾವು ಇಲ್ಲಿಗೆ ಬಂದಿರುವುದು ಎಂದು ಹೇಳುತ್ತಲೇ ಇದ್ದೆ…’ ಎಂದರು.
ಭಾರತ ಕಪ್ ಗೆದ್ದರೂ ವೈಯಕ್ತಿಕ ಸಾಧನೆ ಬಗ್ಗೆ ಶಫಾಲಿಗೆ ಸಮಾಧಾನ ಇರಲಿಲ್ಲ. “ನಾನು ಇನ್ನೂ ಹೆಚ್ಚು ರನ್ ಗಳಿಸಬೇಕು. ಇಲ್ಲಿನ ನಿರ್ವಹಣೆ ತೃಪ್ತಿ ಕೊಟ್ಟಿಲ್ಲ’ ಎಂಬುದಾಗಿ ಹೇಳಿದರು.
ಪ್ರಶಸ್ತಿ ಗೆದ್ದ ಬಳಿಕ ಭಾವುಕರಾಗಿ ಕಣ್ಣೀರು ಸುರಿಸಿದ ಕುರಿತೂ ಶಫಾಲಿ ಪ್ರತಿಕ್ರಿಯಿಸಿದರು. “ಇದನ್ನು ತಡೆಯಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ. ಇದೊಂದು ಮಹಾನ್ ಸಾಧನೆ. ಆನಂದಭಾಷ್ಪ ಸಹಜ’ ಎಂದರು.
ಶಫಾಲಿ ಮನೆಗೆ ಮುಖ್ಯಮಂತ್ರಿ ಭೇಟಿ
ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕಿ ಶಫಾಲಿ ವರ್ಮ ಅವರ ರೋಹrಕ್ ನಿವಾಸಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೋಮವಾರ ಭೇಟಿ ನೀಡಿ ಕ್ರಿಕೆಟ್ ಸಾಧನೆಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಶಫಾಲಿ ವರ್ಮ ಅವರ ತಂದೆ ಮತ್ತು ತಾತ ಅವರನ್ನು ಭೇಟಿ ಮಾಡಿದ ಖಟ್ಟರ್, ಸಿಹಿ ಮತ್ತು ಪುಷ್ಪಗುತ್ಛವನ್ನು ವಿನಿಮಯ ಮಾಡಿಕೊಂಡರು. “ಶಫಾಲಿ ವರ್ಮ ಮತ್ತು ಅವರ ತಂಡ ದೇಶವೇ ಹೆಮ್ಮೆಪಡುವಂತೆ ಮಾಡಿದೆ. ಇದು ಚಿಕ್ಕ ಪ್ರಾಯದಲ್ಲಿ ಮಾಡಿದ ದೊಡ್ಡ ಸಾಧನೆ. ಅವರು ನಮ್ಮವರೆಂಬುದೊಂದು ಹಿರಿಮೆ’ ಎಂದು ಮುಖ್ಯಮಂತ್ರಿ ಪ್ರಶಂಸೆಗೈದರು.ಇದಕ್ಕೂ ಮುನ್ನ ಅವರು ಭಾರತೀಯ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು.