Advertisement
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂಬ ವಿಪಕ್ಷ ಸದಸ್ಯರ ಒತ್ತಡಕ್ಕೆ ಮಣಿಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನ್ಯಾಯಾಂಗ ತನಿಖೆಗೆ ವಹಿಸುವುದು ಸಾಧ್ಯವಿಲ್ಲ. ಈಗಾಗಲೇ ಈ ಕುರಿತಂತೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟವಾಗಿ ಹೇಳಿದರು.
ಮಂಗಳೂರಿನಲ್ಲಿ ಗಲಭೆ ಆದಾಗ ಕೇರಳದಿಂದ ಬಂದವರು ಅಲ್ಲಿದ್ದರು. 1,300 ಮಂದಿಯ ಮೊಬೈಲ್ ಫೋನ್‌ಗಳು ಆ ಪ್ರದೇಶದಲ್ಲಿ ಪತ್ತೆಯಾಗಿದ್ದವು. ಹಾಗೆಂದು ಎಲ್ಲರೂ ಗಲಭೆ ಮಾಡಲಿಕ್ಕೆ ಬಂದಿದ್ದರು ಎಂದು ಹೇಳುತ್ತಿಲ್ಲ, ವ್ಯಾಪಾರಕ್ಕಾಗಿಯೂ ಬಂದಿರಬಹುದು. ಹೀಗಾಗಿಯೇ 373 ಮಂದಿಗೆ ಯಾಕೆ ಬಂದಿದ್ದಿರಿ, ಯಾವ ಕಾರಣಕ್ಕೆ ಅಲ್ಲಿದ್ದಿರಿ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
Related Articles
ನಿಷೇಧಾಜ್ಞೆ ಇದ್ದರೂ ಪ್ರತಿಭಟನೆಗೆ ಗುಂಪು ಮುಂದಾಗಿತ್ತು. ಅದು ಸಾವಿರಾರು ಸಂಖ್ಯೆಯಲ್ಲಿತ್ತು. ಮಧ್ಯಾಹ್ನ 1.30ರಿಂದ ಸಂಜೆಯವರೆಗೂ ಮನವಿ ಮಾಡಿದರೂ ಚದುರಿರಲಿಲ್ಲ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ತೂರಾಟದಲ್ಲಿ ತೊಡಗಿತ್ತು. ಪೊಲೀಸ್ ಠಾಣೆಗೆ ನುಗ್ಗುವ ಪ್ರಯತ್ನ ಮಾಡಿತ್ತು. ಗನ್ ಶಾಪ್‌ಗ್ೂ ನುಗ್ಗುವ ಯತ್ನ ನಡೆಸಿತ್ತು. ಇದೆಲ್ಲದರ ಹಿನ್ನೆಲೆಯಲ್ಲೇ ಪರಿಸ್ಥಿತಿ ಹತೋಟಿಗೆ ತರಲು ಗೋಲಿಬಾರ್ ನಡೆಸಬೇಕಾಯಿತು. ಕಲ್ಲು ತೂರಾಟದ ಅನಂತರವೇ ಗೋಲಿಬಾರ್ ಮಾಡಲಾಗಿದೆ ಎಂದು ಹೇಳಿದರು.
Advertisement
ದೇಶದ್ರೋಹ ಪ್ರಕರಣಕ್ಕೆ ಸಮರ್ಥನೆಬೀದರ್ನ ಶಾಹೀನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ, ಮುಖ್ಯ ಶಿಕ್ಷಕಿ ಸೇರಿ ಹಲವರ ಮೇಲೆ ಹಾಕಿರುವ ದೇಶದ್ರೋಹ ಪ್ರಕರಣವನ್ನೂ ಸಮರ್ಥಿಸಿಕೊಂಡ ಗೃಹ ಸಚಿವರು, ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯವೇ ಪ್ರಕರಣ ದಾಖಲಿಸಲಾಗಿದೆ. ದೂರು ಕೊಟ್ಟಾಗ ಪ್ರಕರಣ ದಾಖಲಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ, ವ್ಯತ್ಯಾಸವಾಗಿದ್ದರೆ ಪರಿಶೀಲಿಸಲಾಗುವುದು ಎಂದರು. ಗಲಭೆ ಪೂರ್ವ ಯೋಜಿತ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಸಂಬಂಧ ವಿಪಕ್ಷ ಕಾಂಗ್ರೆಸ್‌ನ ನಿಲುವಳಿ ಸೂಚನೆ ಮೇರೆಗೆ ನಡೆದ ಚರ್ಚೆಗೆ ಸರಕಾರದ ವತಿಯಿಂದ ಉತ್ತರ ನೀಡಿದ್ದು ಗೃಹ ಸಚಿವ ಬಸವರಾಜ ಬೊಮ್ಮಾಯಿ. ಸದನದಲ್ಲಿ ಅವರೇ ಹೇಳಿದ ಹಾಗೆ…,
– ಮಂಗಳೂರು ಗಲಭೆ ಪೂರ್ವ ಯೋಜಿತ
– ನಾನಾ ಸಂಘಟನೆಗಳ ಕೈವಾಡ ಇದರಲ್ಲಿದೆ
– ಗಲಭೆ ಕೃತ್ಯ ರೂಪಿಸಿದವರು ಹಾಗೂ ಪಾಲ್ಗೊಂಡವರ ವ್ಯಾಪ್ತಿ ದೊಡ್ಡದು
– ಸೌದಿ ಅರೇಬಿಯಾ ಹಾಗೂ ಇತರ ರಾಷ್ಟ್ರಗಳಲ್ಲೂ ಇವರ ಸಂಪರ್ಕ ಇದೆ
– ವಿದೇಶಗಳಿಂದ ಆರ್ಥಿಕ ನೆರವೂ ಸಿಗುತ್ತಿದೆ.
– ಸಣ್ಣ ರಾಜಕೀಯ ಲಾಭಕ್ಕಾಗಿ ಯಾರಿಗಾದರೂ ಬೆಂಬಲ ಕೊಟ್ಟರೂ ಅಪಾಯ ಕಟ್ಟಿಟ್ಟ ಬುತ್ತಿ
– ಮಂಗಳೂರು ಗಲಭೆ ವಿಚಾರದಲ್ಲಿ ಸೌದಿ ಅರೇಬಿಯಾದಿಂದಲೂ ಬೆದರಿಕೆ ಕರೆ
– ನನಗೆ ಬೆದರಿಕೆ ಕರೆ ಮಾಡಿದವರು ಮುಖ್ಯಮಂತ್ರಿಗಳಿಗೂ ಬೆದರಿಕೆಯೊಡ್ಡಿದರು. ಒಟ್ಟಾಗಿ ನಿಯಂತ್ರಣವಾಗಬೇಕು
ಮೈಸೂರಿನ ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ನಮ್ಮ ಕಣ್ಣ ಮುಂದೆಯೇ ಇದೆ. ಯು.ಟಿ. ಖಾದರ್ ಅವರ ಸಹೋದರ ನನ್ನ ಬಳಿ ಬಂದು ಮನವಿ ಮಾಡಿಕೊಂಡಿದ್ದಾರೆ. ಖಾದರ್ ಅವರೂ ಹುಷಾರಿಗಿರಬೇಕು. ಯಾವುದೇ ಸಂಘಟನೆ ಇರಲಿ ಇಂದು ನಾವೆಲ್ಲರೂ ಒಟ್ಟಾಗಿ ನಿಯಂತ್ರಣ ಮಾಡದಿದ್ದರೆ ಮುಂದೆ ನಾವೂ ಬಲಿಯಾಗಬೇಕಾಗುತ್ತದೆ ಎಂದು ತಿಳಿಸಿದರು. ಜಾಮೀನು ಮಂಜೂರು ಚರ್ಚೆ
ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ 22 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ವಿಚಾರದ ಬಗ್ಗೆಯೂ ಸದನದಲ್ಲಿ ಸುದೀರ್ಘ ಚರ್ಚೆ ನಡೆಯಿತು. ವಿಷಯ ಬೇರೆಡೆ ಸಾಗುತ್ತಿರುವುದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಚರ್ಚೆಗೆ ಅಂತ್ಯ ಹಾಡಿದರು. ಗುಹಾ ಪ್ರಕರಣದಲ್ಲಿ ಕ್ಷಮೆ
ರಾಮಚಂದ್ರ ಗುಹಾ ಅವರನ್ನು ಎಳೆದಾಡಿದ ಪ್ರಕರಣದ ಬಗ್ಗೆ ನಾನೇ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರಿದ್ದೇನೆ. ರಮೇಶ್ ಕುಮಾರ್ ಅವರು ವಿಮಾನ ನಿಲ್ದಾಣಕ್ಕೆ ಹೋದಾಗ ತಡೆದು ಅವರಿಗೆ ಮುಜುಗರ ಉಂಟಾದಾಗಲೂ ಕರೆ ಮಾಡಿ ವಿಚಾರಿಸಿ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಪರಿಹಾರ ವಿಚಾರದಲ್ಲಿ ಮೂಲ್ಕಿಯಲ್ಲಿ ಹಿಂದೆ ನಡೆದಿದ್ದ ಘಟನೆಯಲ್ಲೂ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಅವರ ಕುಟುಂಬದವರು ಬಂದು ನಮಗೂ ಪರಿಹಾರ ಕೊಡಿ ಎಂದು ಮನವಿ ಮಾಡಿಕೊಂಡರು. ಹೀಗಾಗಿ ಮುಖ್ಯಮಂತ್ರಿಯವರು ಪುನರ್ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಇದೊಂದು ಪೊಲೀಸರ ಪೂರ್ವಯೋಜಿತ ಕೃತ್ಯ. ಘಟನೆಯಲ್ಲಿ ಇಬ್ಬರು ಅಮಾಯಕ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದು, ಅದರ ಹೊಣೆಯನ್ನು ಸರಕಾರ, ಪೊಲೀಸ್ ಇಲಾಖೆ ಹೊರಬೇಕು. ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು.
– ಸಿದ್ದರಾಮಯ್ಯ, ವಿಪಕ್ಷ ನಾಯಕ ನಾಟಕವೊಂದರಲ್ಲಿ ಪಾತ್ರ ಮಾಡಿದ ವಿದ್ಯಾರ್ಥಿನಿ ಹಾಗೂ ಆ ಮಗುವಿನ ತಾಯಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಆ ಶಾಲೆಯ ಸುಮಾರು 52 ಮಕ್ಕಳನ್ನು ವಿಚಾರಣೆಗೊಳಪಡಿಸಿದ್ದಾರೆ. ಮಹಿಳಾ ಆಯೋಗ ಇದ್ದೂ ಇಲ್ಲದಂತಾಗಿವೆ.
– ಜಯಮಾಲಾ, ಪರಿಷತ್ ಸದಸ್ಯೆ ದೇಶದಲ್ಲಿ ನಾವು (ಮುಸ್ಲಿಂ ಸಮುದಾಯ) 20-30 ಕೋಟಿ ಜನ ಇದ್ದೇವೆ. ನಾವೆಲ್ಲ ಇರಲೇಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೀರಾ? ನಾವೂ ನಿಮ್ಮಂತೆಯೇ ಈ ರಾಷ್ಟ್ರದ ಪ್ರಜೆಗಳು. ನಮಗೂ ಸಮಾನ ಹಕ್ಕಿದೆ. ಬದುಕಲು ಬಿಡಿ.
– ನಜೀರ್ ಅಹಮದ್, ಪರಿಷತ್ ಸದಸ್ಯ ಪೂರ್ವಾಗ್ರಹಪೀಡಿತರಾಗಿ ಮಾತನಾಡುವುದು ಸರಿಯಲ್ಲ. ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಲ್ಲು ಹೊಡೆದವರೆಲ್ಲ ದೇಶ ಪ್ರೇಮಿಗಳಾ? ಅದನ್ನು ಖಂಡಿಸಬೇಡವೇ?
– ಕೋಟ ಶ್ರೀನಿವಾಸ ಪೂಜಾರಿ, ಪರಿಷತ್‌ನ ಸಭಾ ನಾಯಕ