Advertisement

ಸಾಧನೆಗೆ ಅಸಾಧ್ಯವಾಗದ್ದುಯಾವುದೂ ಇಲ್ಲ

12:13 PM Jan 25, 2022 | Team Udayavani |

ಶಹಾಬಾದ: ಸಾಧನೆಗೆ ಅಸಾಧ್ಯವಾಗದ್ದು ಯಾವುದು ಇಲ್ಲ.ಆದರೆ ಸಾ ಸುವ ಛಲ ಇದ್ದರೇ ಜೀವನದಲ್ಲಿ ಏನಾದರೂ ಆಗಬಹುದು ಎಂಬುದಕ್ಕೆ ಸುಧಾರಾಣಿ ನಾಟೇಕಾರ ಅವರ ಪರಿಶ್ರಮವೇ ಸಾಕ್ಷಿ ಎಂದು ಕಾಂಗ್ರೆಸ್‌ ಮುಖಂಡ ವಿಜಯಕುಮಾರ ರಾಮಕೃಷ್ಣ ಹೇಳಿದರು.

Advertisement

ನಗರದ ಜಿಇ ಕಾಲೋನಿಯ ನಿವಾಸಿ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದರೇ ಮಾತ್ರ ನೌಕರಿಯನ್ನು ಗಿಟ್ಟಿಸಿಕೊಳ್ಳಬಹುದು ಎಂಬುದಕ್ಕೆ ಅಪವಾದ ಎಂಬಂತೆ ಅಪ್ಪಟ ಕನ್ನಡ ಮಾಧ್ಯಮದಲ್ಲಿ ಓದಿದಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಪಿಎಸ್‌ಐ ಆಗಿ ನೇಮಕವಾಗಿದ್ದಾರೆ. ಅವರ ಸತತ ಪರಿಶ್ರಮ, ಅಭ್ಯಾಸ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಅವರ ಅಭ್ಯಾಸ ನಿರಂತರವಾಗಿರಲಿ. ಇನ್ನೂ ಹೆಚ್ಚಿನ ಹುದ್ದೆಯನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭಕೋರಿದರು.

ಕಲಬುರಗಿ ದಕ್ಷಿಣ ವಿಧಾನಸಭಾದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗರಾಜ ತಾರಫೈಲ್‌ ಮಾತನಾಡಿ, ವಿದ್ಯೆ ಗುಡಿಸಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಅರಳುವ ಶಕ್ತಿ ಅದಕ್ಕಿದೆ. ಸಮಯದ ಪರಿಪಾಲನೆ, ಸತತ ಅಧ್ಯಯನ ಹಾಗೂ ಪರಿಶ್ರಮದ ಮೂಲಕವೇ ಏನಾದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ನೇಮಕವಾಗಿರುವುದು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಸುಧಾರಾಣಿ ನಾಟೇಕಾರ, ಸ್ಪಷ್ಟ ಗುರಿ, ಸಾಧಿ ಸುವ ಛಲ ಇದ್ದಾಗಲೂ ಸೋಲು ಕಾಣುತ್ತೆವೆ. ಎಡವಿದಾಗ ಕೈಚೆಲ್ಲದೇ ಮರಳಿ ಯತ್ನ ಮಾಡಬೇಕು. ಹಿಂದೆ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ತಿದ್ದುಕೊಳ್ಳಬೇಕು ಅಲ್ಲದೇ ಕಾಟಾಚಾರಕ್ಕೆ ಪರೀಕೆಗಳನ್ನು ಬರೆಯದೇ ಜೀವನದಲ್ಲಿ ಏನಾದರೂ ಸಾ ಧಿಸಬೇಕೆಂಬ ಅದಮ್ಯ ಬಯಕೆಯೊಂದಿಗೆ ಪರೀಕ್ಷೆಗೆ ಸಿದ್ಧರಾದರೇ ಸಾಧನೆ ತಾನಾಗಿ ಒಲಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಸಾಜ್ಜಿದ್‌ ಗುತ್ತೆದಾರ, ಕಿರಣಬಾಬು ಕೋರೆ, ಬಾಬು, ಡಾ| ಆಂಜನೇಯ, ನಾಗೇಂದ್ರ ನಾಟೇಕಾರ, ವೆಂಕಟೇಶ (ಲೇಖು), ಸಂತೋಷ ಉಳ್ಳಾಗಡ್ಡಿ, ಶಿವರಾಜ ನಾಟೇಕಾರ, ರವಿ, ಸಂತೋಷ ಉಳ್ಳಾಗಡ್ಡಿ, ವಿದ್ಯಾಸಾಗರ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next