Advertisement
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ವಿವಿ ಘಟಕದ ವಿಷಯ ಪ್ರಸ್ತಾವಗೊಂಡಿತ್ತು.
ಶಾಸಕ ಸಂಜೀವ ಮಠಂದೂರು ಮಾತ ನಾಡಿ, ಸಭೆಯಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಿದೆ. ಜನರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಒಂದೇ ಆಗಿದೆ. ಪ್ರಥಮ ದರ್ಜೆ ಕಾಲೇಜು ಆಗಿ ಮುಂದುವರಿಯಲಿ. ಕಾಲೇಜಿಗೆ ಬೇಕಾಗುವ ಸ್ನಾತಕೋತ್ತರ ಕೋರ್ಸ್‌ಗಳು ಅಥವಾ ಸ್ಪೆಷಲ್ ಕೋರ್ಸ್‌ಗಳನ್ನು ತರಿಸುವ ಕೆಲಸ ಆಗಬೇಕಾಗಿದೆ. ಈ ಕಾಲೇಜಿಗೆ 1.30 ಕೋಟಿ ರೂ. ವೆಚ್ಚದಲ್ಲಿ ತರಗತಿ ಕೋಣೆಗಳ ಕಟ್ಟಡ ಮಂಜೂರಾಗಿದ್ದು, ಈ ವರ್ಷವೇ ಕಾಮಗಾರಿ ಪೂರ್ತಿಯಾದರೆ ಮುಂದಿನ ವರ್ಷ ಎಂ.ಕಾಂ. ಕೋರ್ಸ್ ಪ್ರಾರಂಭಿಸಲಾ ಗುವುದು. ಖಾಲಿಯಾಗಿರುವ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪ್ರಾಚಾರ್ಯ ಡಾ| ವರದರಾಜ ಚಂದ್ರಗಿರಿ ಪ್ರಸ್ತಾವನೆ ಮಂಡಿಸಿ, ಜಂಟಿ ನಿರ್ದೇಶಕರು ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಅಭಿಪ್ರಾಯವನ್ನು ವರದಿ ರೂಪದಲ್ಲಿ ಜಂಟಿ ನಿರ್ದೇಶಕರ ಮೂಲಕ ಸರಕಾರಕ್ಕೆ ಸಲ್ಲಿಸುವಂತೆ ನಿರ್ದೇಶನ ಇದೆ. ಆದ್ದರಿಂದ ಈ ಬಗ್ಗೆ ಚರ್ಚಿಸುವ ಅಗತ್ಯ ಇದೆ. ಸ್ಥಳೀಯ 3 ಗ್ರಾ.ಪಂ. ಅಧ್ಯಕ್ಷರಿಗೆ, ಹಾಲಿ, ಮಾಜಿ ಕಾಲೇಜು ಅಭಿವೃದ್ಧಿ ಸಮಿತಿ ಪದಾಧಿಕಾರಿಗಳಿಗೆ ಲಿಖೀತವಾಗಿ ಸಭೆಯ ಪತ್ರವನ್ನು ಕಳಿಸಲಾಗಿದೆ ಎಂದರು.
Related Articles
Advertisement
ಜಂಟಿ ನಿರ್ದೇಶಕ ಅಪ್ಪಾಜಿ ಗೌಡ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾ.ಪಂ. ಮಾಜಿ ಅಧ್ಯಕ್ಷ ಶಂಭು ಭಟ್, ಉಪನ್ಯಾಸಕರು ಭಾಗವಹಿಸಿದ್ದರು.