Advertisement

ಸಿಎಂ ಸ್ಥಾನ ಖಾಲಿ ಇಲ್ಲ: ಸಿದ್ದರಾಮಯ್ಯ

06:20 AM Nov 19, 2018 | |

ಹುಬ್ಬಳ್ಳಿ: ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ಜನರಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರೆಲ್ಲ ಸಿಎಂ ಸ್ಥಾನದ ಆಕಾಂಕ್ಷಿಗಳೆಂದು ಅರ್ಥವಲ್ಲ. ಉಪ ಮುಖ್ಯಮಂತ್ರಿ ಪರಮೇಶ್ವರ್‌ ತಮ್ಮ ಆಸೆ ಹೇಳಿಕೊಂಡಿದ್ದಾರೆ ಅಷ್ಟೆ. ಈಗ ಆ ಸ್ಥಾನ ಖಾಲಿ ಇಲ್ಲವಲ್ಲ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಳಂಬವಾಗಿದ್ದು, ಶೀಘ್ರವೇ ವಿಸ್ತರಣೆ ಆಗಲಿದೆ. ಕೇಂದ್ರದಿಂದ ಸಿಬಿಐ ದುರುಪಯೋಗ ಆಗುತ್ತಿದೆ. ಯಾವುದೇ ರಾಜ್ಯದಲ್ಲಿ ಸಿಬಿಐ ತನಿಖೆ ನಡೆಸಬೇಕಾದರೆ ಆಯಾ ರಾಜ್ಯದ ಅನುಮತಿ ಪಡೆಯಬೇಕೆನ್ನುವ ನಿಯಮವಿದೆ. ಆದರೆ ಕೇಂದ್ರ ಸರ್ಕಾರದಿಂದ ಸಿಬಿಐ ತನಿಖೆ ಹೆಸರಲ್ಲಿ ರಾಜ್ಯಗಳ ಮೇಲೆ ಅನವಶ್ಯಕ ಮಧ್ಯಪ್ರವೇಶ ಹೆಚ್ಚಾಗಿದೆ. ನೆಹರು ಅವರನ್ನು ಹಿಟ್ಲರ್‌ ಎಂದು ಕರೆಯುವ ಆರ್‌ಎಸ್‌ಎಸ್‌ನವರು ಫ್ಯಾಸಿÓr… ಮನೋಭಾವ ಹೊಂದಿದ್ದು, ಹಿಟ್ಲರ್‌ನಂತೆ ಆಡಳಿತ ನಡೆಸುತ್ತಿದ್ದಾರೆ. ಸಂಘ ಪರಿವಾರದವರು ಹಿಟ್ಲರ್‌ ವಂಶಸ್ಥರು. ಇಂದಿರಾ ಕ್ಯಾಂಟೀನ್‌ನಿಂದ ಬಡವರ ಹಸಿವು ನೀಗಿದೆ. ಇದರ ಶ್ರೇಯಸ್ಸು ಕಾಂಗ್ರೆಸ್‌ಗೆ ಸೇರಬಾರದೆಂಬ ದುರುದ್ದೇಶದಿಂದ ಬಿಜೆಪಿ ತಡೆಯೊಡ್ಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next