Advertisement

ಆಯುರ್ವೇದ ಚಿಕಿತ್ಸೆಯಿಂದ ಅಡ್ಡ ಪರಿಣಾಮವಿಲ್ಲ: ಮೇಯರ್‌ 

10:29 AM Oct 19, 2017 | |

ಹಂಪನಕಟ್ಟೆ: ಹಿರಿಯರ ಕಾಲದಲ್ಲಿ ಆಯುರ್ವೇದ ಚಿಕಿತ್ಸೆಗೆ ಪ್ರಾಧಾನ್ಯ ನೀಡಲಾಗಿತ್ತು. ಆದ್ದರಿಂದಲೇ ಅಂದಿನ ಜನರು ಯಾವುದೇ ರೋಗಗಳಿಲ್ಲದೆ ಬಹುಕಾಲ ಜೀವಿಸುತ್ತಿದ್ದರು. ಆಯುರ್ವೇದ ಚಿಕಿತ್ಸೆಯಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಆಯುರ್ವೇದ
ಚಿಕಿತ್ಸೆಯತ್ತ ಆಸಕ್ತಿ ವಹಿಸಬೇಕು ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಆಯುಷ್‌ ಇಲಾಖೆ ವತಿಯಿಂದ ವೆನ್ಲ್ಲಾಕ್‌ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ‘ನೋವು ನಿರ್ವಹಣೆಯಲ್ಲಿ ಆಯುರ್ವೇದ ಚಿಕಿತ್ಸೆ’ ಘೋಷಣೆಯೊಂದಿಗೆ ಜರಗಿದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ ಚಿಕಿತ್ಸೆಯ ಕುರಿತು ಎಲ್ಲೆಡೆ ಮಾಹಿತಿ ಹಾಗೂ ಅರಿವು ಮೂಡಿಸುವ ಕೆಲಸವನ್ನು ಇಲಾಖೆ ಮಾಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಪಾಲಿಕೆಯ ಪ್ರತಿ ವಾರ್ಡ್‌ನಲ್ಲಿ ಆಯುರ್ವೇದ ಚಿಕಿತ್ಸೆ ಬಗ್ಗೆ ಜನ ಜಾಗೃತಿ ಮೂಡಿಸುವುದಾದರೆ ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಆಯುರ್ವೇದ ಬಳಕೆಯಿಂದ 10 ವರ್ಷ ಹೆಚ್ಚು ಬದುಕಲು ಸಾಧ್ಯ ಎಂದರು.

ಆಯುರ್ವೇದಕ್ಕೆ ಪರಂಪರೆ ಇದೆ
ಜಿ.ಪಂ. ಮಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಎಂ.ಆರ್‌.ರವಿಮಾತನಾಡಿ, ಆಯುರ್ವೇದ ಚಿಕಿತ್ಸೆಯ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿರುವ ಋಣಾತ್ಮಕ ಮನೋಧೋರಣೆ ಬದಲಾಗಬೇಕು. ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯರು ಶ್ರಮಿಸಬೇಕು ಎಂದರು.

ಕಲಿತ ವಿದ್ಯೆಯ ಬಗ್ಗೆ ಆಸಕ್ತಿಗಿಂತಲೂ ಮಿಗಿಲಾಗಿ ಅಭಿಮಾನ ಇರಬೇಕು. ಆ ಪ್ರೀತಿ ಇದ್ದಾಗ ಆಯುರ್ವೇದ ಜನ ಸಾಮಾನ್ಯರ ಬಳಿಗೆ ತಲುಪಿಸುವುದು ಕಷ್ಟವಲ್ಲ. ಆಯುರ್ವೇದ ಚಿಕಿತ್ಸೆಗೆ ಪರಂಪರೆ ಇದೆ. ಪ್ರಸನ್ನ ಆಲೋಚನೆಗಳಿದ್ದಾಗ ಮನಸ್ಸು ಪ್ರಸನ್ನವಾಗಿರುತ್ತದೆ. ಈ ಬಗ್ಗೆ ಜನಾಂದೋಲನ ಆಗಬೇಕಾಗಿದೆ ಎಂದರು.

Advertisement

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್‌ ಮೋನು, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌, ಆಯುಷ್‌ ಫೌಂಡೇಶನ್‌ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌, ವೆನ್ಲ್ಲಾಕ್‌ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿದೇವಿ ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮಹಮ್ಮದ್‌ ಇಕ್ಬಾಲ್‌ ಸ್ವಾಗತಿಸಿದರು. ಡಾ| ಶ್ರೀನಿವಾಸ ಆಚಾರ್ಯ ಹೆಜಮಾಡಿ ಆಯುರ್ವೇದ ಚಿಕಿತ್ಸೆಯ ಬಗ್ಗೆ ಉಪನ್ಯಾಸ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next