Advertisement

ಸಿದ್ದರಾಮಯ್ಯ ಹೇಳಿಕೆಗಳಲ್ಲಿ ಗಂಭೀರತೆಯೇ ಇರಲ್ಲ: ರವಿ

04:51 PM Dec 06, 2020 | Adarsha |

ಬೆಳಗಾವಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪೂರ್ವಜರು ಗೋ ಸೇವೆ ಮಾಡಿದವರು. ಆದರೆ ವೈಚಾರಿಕವಾಗಿ ಸಿದ್ದರಾಮಯ್ಯ ಈಗ ಕ್ರಾಸ್‌ ಆಗಿ ವರ್ತಿಸುತ್ತಿದ್ದಾರೆ. ಇದು ನಮಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಅವರ ಹೇಳಿಕೆಗಳಲ್ಲಿ ಗಂಭೀರತೆಯೇ ಇರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಟುಕಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅರ್ಥವಾಗದ ರೀತಿಯಲ್ಲಿ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ಕಲಬೆರಕೆ ಬಗ್ಗೆ ಮಾತನಾಡಿದರು. ಆದರೆ ಅವರ ಪಕ್ಷದ ನಾಯಕತ್ವವೇ ಕಲಬೆರಕೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಏನೇನೋ ಹೇಳುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದರು.

ಸಿದ್ದರಾಮಯ್ಯ ವೈಚಾರಿಕವಾಗಿ ಕ್ರಾಸ್‌ ಆಗಿದ್ದಾರೆ. ಗೋಹತ್ಯೆ ಮಸೂದೆಗೆ ವಿರೋಧ ಮಾಡುತ್ತಿದ್ದಾರೆ. ರಾಮಮಂದಿರ ಸ್ಥಾಪನೆ ಮಾಡಲ್ಲ ಎಂದರು. ಈಗ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇವೆ. ಆಮೇಲೆ ಆರ್ಟಿಕಲ್‌ 370 ರದ್ದಾಗಲ್ಲ ಎಂದರು.

ಅದನ್ನು ಮಾಡಿ ತೋರಿಸಿದ್ದೇವೆ. ಮುಂದೆ ಇದೇ ರೀತಿ ಸಾಮಾನ್ಯ ನಾಗರಿಕೆ ಸಂಹಿತೆ ಕಾಯ್ದೆ ಸಹ ಜಾರಿ ಮಾಡುತ್ತೇವೆ. ಬಿಜೆಪಿ ಸುಳ್ಳು ಹೇಳುವ ಪಕ್ಷ ಅಲ್ಲ. ಆಡಿದ್ದನ್ನು ಮಾಡಿ ತೋರಿಸುವ ಪಕ್ಷ ಎಂದು ತಿರುಗೇಟು ನೀಡಿದರು.

ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಿ ಬಿಜೆಪಿ ಯಾವತ್ತೂ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನೇ ಜಾರಿಗೆ ತಂದಿದೆ. ರೈತರ ಬೆಳೆಗಳಿಗೆ ಅತೀ ಹೆಚ್ಚು ದರ ನೀಡಿದೆ. ಕಿಸಾನ್‌ ಸಮ್ಮಾನ ಯೋಜನೆ ಜಾರಿಗೆ ತಂದಿದ್ದು, ನಮ್ಮ ಪಕ್ಷ ಯಾವತ್ತೂ ರೈತರ ಜತೆಗಿರುತ್ತದೆ ಎಂದರು.

Advertisement

ಇದನ್ನೂ ಓದಿ:ಹಳ್ಳಿ ಫೈಟ್‌; ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭ

ಅಲ್ಲ. ಆಡಿದ್ದನ್ನು ಮಾಡಿ ತೋರಿಸುವ ಪಕ್ಷ ಎಂದು ತಿರುಗೇಟು ನೀಡಿದರು. ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಬಗ್ಗೆ ಪ್ರಸ್ತಾಪಿಸಿ ಬಿಜೆಪಿ ಯಾವತ್ತೂ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನೇ ಜಾರಿಗೆ ತಂದಿದೆ. ರೈತರ ಬೆಳೆಗಳಿಗೆ ಅತೀ ಹೆಚ್ಚು ದರ ನೀಡಿದೆ. ಕಿಸಾನ್‌ ಸಮ್ಮಾನ ಯೋಜನೆ ಜಾರಿಗೆ ತಂದಿದ್ದು, ನಮ್ಮ ಪಕ್ಷ ಯಾವತ್ತೂ ರೈತರ ಜತೆಗಿರುತ್ತದೆ ಎಂದರು.

ಕಾಂಗ್ರೆಸ್‌ ಸಹವಾಸ ಬಿಡಿ

ಬಿಜೆಪಿ ಜತೆಗಿದ್ದರೆ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿ ಅಡಿಗೆ ಹಾಳಾದ ಮೇಲೆ ಒಲೆ ಉರಿದಂತೆ, ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಗಾದೆಯಂತೆ ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ. ಕುಮಾರಸ್ವಾಮಿ ಅವರು ಇನ್ನು ಮೇಲಾದರೂ ಕಾಂಗ್ರೆಸ್‌ ಜತೆ ಸಹವಾಸ ಮಾಡುವುದನ್ನು ಬಿಡಬೇಕು. ಚಂಚಲ ಮನಸ್ಸಿನ ನಿಲುವಿಂದ ದೂರ ಸರಿಯಬೇಕೆಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next