Advertisement

ಮತಪತ್ರ ಯುಗಕ್ಕೆ ಮರಳಲ್ಲ

12:30 AM Jan 25, 2019 | |

ಹೊಸದಿಲ್ಲಿ: “ವಿದ್ಯುನ್ಮಾನ ಮತಯಂತ್ರಗಳ ಆಧಾರಿತ ಚುನಾವಣಾ ಪದ್ಧತಿಯನ್ನು ಯಾವುದೇ ಕಾರಣಕ್ಕೂ ಕೈಬಿಡಲಾಗದು. ಈ ವ್ಯವಸ್ಥೆ ಕೈಬಿಟ್ಟು ಹಳೆಯ ಮತಪತ್ರ ಯುಗಕ್ಕೆ ಪುನಃ ಹಿಂದಿರುಗಲು ಸಾಧ್ಯವೇ ಇಲ್ಲ’. ಇದು ಭಾರತೀಯ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್‌ ಅರೋರಾ ಅವರ ಸ್ಪಷ್ಟನೆ. 

Advertisement

ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ, ದೇಶಾದ್ಯಂತ ಮತ್ತೆ ಬ್ಯಾಲೆಟ್‌ ಪದ್ಧತಿಯೇ ಜಾರಿಗೊಳ್ಳಬೇಕೆಂದು ಆಗ್ರಹಿಸಿರುವ ಬೆನ್ನಿಗೇ ಆಯುಕ್ತರು ಇಂಥದ್ದೊಂದು ಕರಾರುವಾಕ್‌ ಸ್ಪಷ್ಟನೆ ನೀಡಿ ದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಆಗ್ರಹದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “”ಇವಿಎಂಗಳು ರಾಜಕೀಯ ಪಕ್ಷಗಳ ಪಾಲಿನ ಫ‌ುಟ್ಬಾಲ್‌ ಆಗಿವೆ. ಇವಿಎಂ ವಿರುದ್ಧದ ಟೀಕೆಗಳನ್ನು, ಸಲಹೆಗಳನ್ನು ಆಯೋಗ ಮುಕ್ತವಾಗಿ ಸ್ವಾಗತಿಸುತ್ತದೆ. ಆದರೆ, ಟೀಕೆಗಳಿಂದ ಆಯೋಗ ಕುಗ್ಗುವು ದಿಲ್ಲ. ಇವಿಎಂ ಆಧಾರಿತ ಚುನಾವಣಾ ವ್ಯವಸ್ಥೆಗೆ ಆಯೋಗ ಎಂದಿಗೂ ಬದ್ಧವಾಗಿರಲಿದೆ” ಎಂದು ಹೇಳಿದ್ದಾರೆ. 

ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಸ್ಪಷ್ಟನೆ
ವಿರೋಧ ಪಕ್ಷಗಳ ಅನುಮಾನ, ಆಗ್ರಹಗಳಿಗೆ ಖಡಕ್‌ ಉತ್ತರ
ರಾಜಕೀಯ ಪಕ್ಷಗಳ ಪಾಲಿನ ಫ‌ುಟ್ಬಾಲ್‌ ಆಗಿರುವ ಇವಿಎಂ
ಟೀಕೆಗಳಿಗೆ ಸ್ವಾಗತ; ಆದರೆ, ಇವಿಎಂಗಳ ಬಳಕೆಗೆ ಬದ್ಧ ಎಂದ ಸಿಇಸಿ

Advertisement

Udayavani is now on Telegram. Click here to join our channel and stay updated with the latest news.

Next