Advertisement

ಟಿಎಂಸಿ ರ್ಯಾಲಿಗೆ ರಾಹುಲ್‌ ಇಲ್ಲ

12:30 AM Jan 17, 2019 | |

ಹೊಸದಿಲ್ಲಿ/ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹಿನ್ನಡೆ ಉಂಟಾಗಿದೆ. ಜ. 19ರಂದು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಕೋಲ್ಕತಾದಲ್ಲಿ ಆಯೋಜಿಸಲಾಗಿರುವ ಬೃಹತ್‌ ರ್ಯಾಲಿಯಲ್ಲಿ ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗಿಯಾಗುತ್ತಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅದರಲ್ಲಿ ಭಾಗವಹಿಸಲಿದ್ದಾರೆ. ಮಮತಾ ಬ್ಯಾನರ್ಜಿ ಜತೆಗೆ ವೇದಿಕೆ ಹಂಚಿಕೊಳ್ಳುವುದು ಬೇಡ ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. 

Advertisement

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ವಿಪಕ್ಷಗಳ ಒಕ್ಕೂಟದ ನಾಯಕನಾಗಿ ಮತ್ತು ಪ್ರಧಾನಿಯಾಗಿ ರಾಹುಲ್‌ ಗಾಂಧಿ ಆಗಲಿ ಎಂದು ಹೇಳಿದ್ದಾಗ ಅದಕ್ಕೆ ಮಮತಾ ಆಕ್ಷೇಪ ಮಾಡಿ ದ್ದರು. ಕಾರ್ಯಕ್ರಮದಿಂದ ದೂರ ಉಳಿಯುವುದಕ್ಕೆ ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಭಾಗವಹಿಸುವ ಬಗ್ಗೆ ಇನ್ನೂ ತೀರ್ಮಾನ ಪ್ರಕಟಿಸಿಲ್ಲ. ಮಮತಾ ಬ್ಯಾನರ್ಜಿ, ಬಿಎಸ್‌ಪಿ ನಾಯಕಿ ಮಾಯಾವತಿ ಕೂಡ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೂ ಆಗಿದ್ದಾರೆ.

ಜಗನ್‌-ರಾಮರಾವ್‌ ಭೇಟಿ: ತೆಲಂಗಾಣದಲ್ಲಿ ಚುನಾವಣಾ ಹೊಂದಾಣಿಕೆ ನಿಟ್ಟಿನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ವೈ.ಎಸ್‌. ಜಗನ್ಮೋಹನ ರೆಡ್ಡಿ ಮತ್ತು ಟಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಬುಧವಾರ ಹೈದರಾಬಾದ್‌ನಲ್ಲಿ ಭೇಟಿ ಯಾಗಿದ್ದರು. ಫೆಡರಲ್‌ ಫ್ರಂಟ್‌ ರಚನೆ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳು ಕೈಜೋಡಿಸಬೇಕು ಎಂದು ಇಬ್ಬರು ನಾಯಕರು ಹೇಳಿದ್ದಾರೆ. ಛತ್ತೀಸ್‌ಗಡದ ಮಾಜಿ ಸಿಎಂ ಅಜಿತ್‌ ಜೋಗಿ, ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜತೆಗೂ ಚರ್ಚೆ ನಡೆಸಿದ್ದಾಗಿ ಟಿಆರ್‌ಎಸ್‌ ನಾಯಕ ಕೆ.ಟಿ. ರಾಮ ರಾವ್‌ ಹೇಳಿದ್ದಾರೆ. 

ಹೆಚ್ಚು ಸ್ಥಾನಕ್ಕೆ ಬೇಡಿಕೆ: ಮಾಜಿ ಸಚಿವ ಅಜಿತ್‌ ಸಿಂಗ್‌ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಉಪಾ ಧ್ಯಕ್ಷ ಜಯಂತ್‌ ಚೌಧರಿ ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಜತೆಗೆ ಮಾತುಕತೆ ನಡೆಸಿದ್ದಾರೆ. ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟ 2 ಸ್ಥಾನಗಳನ್ನು ನೀಡಿತ್ತು. ಹೆಚ್ಚುವರಿ ಸ್ಥಾನ ನೀಡ ಬೇಕು ಎಂಬ ಮನವಿ ಮುಂದಿಟ್ಟುಕೊಂಡು ಈ ಭೇಟಿ ನಡೆದಿದೆ. ಅಜಿತ್‌ ಸಿಂಗ್‌ 8 ಸ್ಥಾನಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದರು. 

ರಾಹುಲ್‌ ಕಾರಣ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧದ ಭ್ರಷ್ಟಾ ಚಾರ ಆರೋಪಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ವಿಫ‌ ಲರಾದ್ದರಿಂದ ಮಹಾಮೈತ್ರಿಕೂಟ ತೊರೆಯಬೇಕಾಯಿತು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚನೆ ಹಿನ್ನೆಲೆಯಲ್ಲಿ ಚುನಾ ವಣಾ ವ್ಯೂಹತಂತ್ರಕಾರ ಪ್ರಶಾಂತ್‌ ಕಿಶೋರ್‌ಗೆ ಉನ್ನತ ಹುದ್ದೆ ನೀಡಲಾಯಿತು ಎಂದು ಕಾರ್ಯಕ್ರಮ ವೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ. 

Advertisement

ಮಮ್ಮುಟ್ಟಿ, ಲಾಲೇಟ್ಟನ್‌ ಸ್ಪರ್ಧೆ?
ಮಲಯಾಳದ ಜನಪ್ರಿಯ ಸಿನಿಮಾ ನಟರಾಗಿರುವ ಮೋಹನ್‌ಲಾಲ್‌, ಸುರೇಶ್‌ಗೋಪಿ, ಮಮ್ಮುಟ್ಟಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುರೇಶ್‌ಗೋಪಿ ಬಿಜೆಪಿ ವತಿಯಿಂದ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ. ತಿರುವನಂತಪುರ ಕ್ಷೇತ್ರದಿಂದ ಬಿಜೆಪಿ ಹುರಿಯಾಳಾಗಿ ಮೋಹನ್‌ಲಾಲ್‌ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಸಿಪಿಎಂನ ಮುಖವಾಣಿ ಯಾಗಿರುವ ಕೈರಳಿ ಚಾನೆಲ್‌ಗ‌ಳ ಅಧ್ಯಕ್ಷ ಮಮ್ಮುಟ್ಟಿ ಎರ್ನಾಕುಳಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಾಲಿ ಸಂಸದ ಇನೋಸೆಂಟ್‌ ಚಾಲಕ್ಕುಡಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದು ಅನುಮಾನ .

74ರಲ್ಲಿ ಗೆಲ್ಲುತ್ತೇವೆ: ನಡ್ಡಾ
ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಘೋಷಣೆಯಾದ ಬಳಿಕ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿರುವ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಲಕ್ನೋದಲ್ಲಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು ಮೈತ್ರಿಕೂಟ ಬಿಜೆಪಿ ಮೇಲೆ ಪರಿಣಾಮ ಬೀರದು. 80 ಸ್ಥಾನಗಳ ಪೈಕಿ 74ರಲ್ಲಿ ಗೆಲ್ಲಲಿದ್ದೇವೆ. ಚುನಾವಣೆ ಎನ್ನುವುದು ಫಿಸಿಕ್ಸ್‌ ಅಲ್ಲ ಕೆಮೆಸ್ಟ್ರಿ. ಮತದಾರರ ನಡುವಿನ ಕೆಮೆಸ್ಟ್ರಿಯಾಗಿದೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ರಣತಂತ್ರಕ್ಕೆ ಪ್ರತಿಯಾದ ಎಲ್ಲಾ ರೀತಿಯ ತಂತ್ರಗಳೂ ನಮ್ಮ ಬಳಿ ಇದೆ. ಅದನ್ನು ಚುನಾವಣೆ ವೇಳೆ ಪ್ರಕಟಿಸುತ್ತೇವೆ ಎಂದಿದ್ದಾರೆ ನಡ್ಡಾ. 

ಉತ್ತರ ಪ್ರದೇಶದಲ್ಲಿ ಸದ್ಯ 80 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಿದ್ದೇವೆ. ನಮ್ಮ ಜತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳಿಗೆ ಕೆಲವು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ.
ಗುಲಾಂ ನಬಿ ಆಜಾದ್‌  ಕಾಂಗ್ರೆಸ್‌ ನಾಯಕ

ಪಶ್ಚಿಮ ಬಂಗಾಳದಲ್ಲಿ ನಾಲ್ಕು ಹಂತಗಳ ಕಾಲ ರಥ ಯಾತ್ರೆ ನಡೆಸಲು ರಾಜ್ಯ ಸರಕಾರದ ಅನುಮತಿ ಕೋರಲಿದ್ದೇವೆ. 10-12 ದಿನಗಳ ಕಾಲ ಅದು ನಡೆ ಯಲಿದೆ. ಅನುಮತಿ ಸಿಗಬಹುದು ಎಂಬ ವಿಶ್ವಾಸವಿದೆ.
ಜೈ ಪ್ರಕಾಶ್‌ ಮಜುಂದಾರ್‌
 
ಪಶ್ಚಿಮ ಬಂಗಾಲ ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next