ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ
Advertisement
ಪೌರತ್ವ ತಿದ್ದುಪಡಿ ಕಾಯ್ದೆಯ ಕಾರಣಕ್ಕಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದು ದೇಶದ ಮುಸಲ್ಮಾನರು ಮತ್ತು ಹಿಂದೂ ಸಹೋದರರ ನಡುವೆ ಭೇದಭಾವ ಮಾಡುತ್ತದೆ ಎನ್ನಲಾಗುತ್ತಿದೆಯಲ್ಲ?ನಾನು ಈ ಮಾತನ್ನು ಒಪ್ಪುವುದಿಲ್ಲ. ಕೆಲವು ರಾಜಕೀಯ ಪಕ್ಷಗಳಿವೆ. ಅವು ಹಿಂದೂ ಮತ್ತು ಮುಸಲ್ಮಾನರ ನಡುವೆ ವಿಭಜನೆ ಸೃಷ್ಟಿಸಲು ಬಯಸುತ್ತಿವೆ. ಈ ಕಾರಣದಿಂದಲೇ ಹೀಗೆ ಜನರ ಹಾದಿತಪ್ಪಿಸುತ್ತಿವೆ. ಇವುಗಳ ಅಪಪ್ರಚಾರಗಳಿಂದಾಗಿ ಒಂದು ರೀತಿಯ ಬ್ರಾಂತಿ ಸೃಷ್ಟಿಯಾಗಿದೆ.
Related Articles
ಜಾಮಿಯಾ ಮೀಲಿಯಾ ಸೇರಿದಂತೆ, ಹಲವು ವಿವಿಗಳಲ್ಲಿ ಪ್ರತಿಭಟನೆ ಆರಂಭವಾಗಿದೆಯಲ್ಲ?
ನಾನು ಇವರಿಗೆಲ್ಲ ಕೇಳುವುದಿಷ್ಟೆ: ನೀವು ಕಲ್ಲು ಎಸೆಯುತ್ತೀರಿ ಎಂದಾದರೆ, ಯಾರಧ್ದೋ ದ್ವಿಚಕ್ರ ವಾಹನಗಳಿಂದ ಪೆಟ್ರೊಲ್ ಹೊರತೆಗೆದು ಬಸ್‌ಗಳಿಗೆ ಬೆಂಕಿ ಹಚ್ಚುತ್ತೀರಿ ಎಂದರೆ, ನಾಗರಿಕರಿಗೆ ಲುಕ್ಸಾನು ಮಾಡುತ್ತೀರಿ ಎಂದಾದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೋ ಇಲ್ಲವೋ? ಇಲ್ಲದಿದ್ದರೆ, ಕಾನೂನು ಸುವ್ಯವಸ್ಥೆ ಕಂಟ್ರೋಲ್‌ಗೆ ಬರುವುದಾದರೂ ಹೇಗೆ? ನನಗೆ ನೀವು ಒಂದು ಮಾತು ಹೇಳಿ. ಜಾಮಿಯಾ ಮೀಲಿಯಾ ವಿವಿಯ ಒಳಗಿನಿಂದ ಕಲ್ಲು ಎಸೆಯುತ್ತಿದ್ದವರೆಲ್ಲ ಯಾರು? ಅವರೆಲ್ಲ ಯಾಕೆ ಹೀಗೆ ಮಾಡಿದರು? ಇದಕ್ಕೂ ಉತ್ತರ ಹುಡುಕಬೇಕಲ್ಲವೇ? ನಾನು ಈಗಲೂ ಹೇಳುತ್ತೇನೆ ಇದಕ್ಕೆಲ್ಲ ಮುಖ್ಯ ಕಾರಣ ಅಪಪ್ರಚಾರ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್, ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರ.
Advertisement
ಆದರೆ ಜನರು ಹೇಳುತ್ತಿರುವುದೇ ಬೇರೆ. ಸಿಎಬಿ ಅನ್ನುವುದು ಆರಂಭವಷ್ಟೇ, ಸಿಎಬಿ ಮೂಲಕ ಹಿಂದೂಗಳನ್ನೆಲ್ಲ ದೇಶದಲ್ಲಿ ಉಳಿಸಿಕೊಳ್ಳುತ್ತೀರಿ, ನಂತರ ಎನ್‌ಆರ್‌ಸಿ ಮೂಲಕ ಮುಸಲ್ಮಾನರನ್ನೆಲ್ಲ ಹೊರಗೆ ಕಳುಹಿಸಲಾಗುತ್ತದೆ ಎನ್ನುವ ಭಯ ಜನರಿಗಿದೆಯಲ್ಲ? ನಾನು ಈಗಲೂ ಸ್ಪಷ್ಟಪಡಿಸುತ್ತೇನೆ- ಈ ದೇಶದ ಒಬ್ಬೇ ಒಬ್ಬ ಮುಸಲ್ಮಾನನಿಗೂ ಎನ್‌ಆರ್‌ಸಿ ಮತ್ತು ಸಿಎಬಿಯಿಂದ ಅನ್ಯಾಯವಾಗುವುದಿಲ್ಲ. ಮುಂದೆಯಲ್ಲ, ಯಾವತ್ತೂ ಅನ್ಯಾಯವಾಗುವುದಿಲ್ಲ. ಅಲ್ಲಾ ರೀ, ಈ ಎನ್‌ಆರ್‌ಸಿಯನ್ನು ತಂದವರು ಯಾರು? ಬಿಜೆಪಿಯೇ? ಖಂಡಿತ ಅಲ್ಲ. ಇದನ್ನು ರೂಪಿಸಿದ್ದು ಕಾಂಗ್ರೆಸ್. 1985ರ ಅಸ್ಸಾಂ ಒಪ್ಪಂದದ ಅನ್ವಯ ಎನ್‌ಆರ್‌ಸಿಯನ್ನು ಅಸ್ಸಾಂನಲ್ಲಿ ಜಾರಿ ಮಾಡಲಾಗುವುದೆಂದು ಅಂದು ರಾಜೀವ್ ಗಾಂಧಿ ಒಪ್ಪಂದ ಮಾಡಿಕೊಂಡಿದ್ದರು. ಇನ್ನು, “ನಾಗರಿಕತೆ ಕಾನೂನು 1955’ಗೆ ಅಧಿನಿಯಮ 14(ಎ) ಸೇರಿಸಿ, 3 ಡಿಸೆಂಬರ್ 2004ರಲ್ಲಿ ನೋಟಿಫೈ ಮಾಡಲಾಯಿತು. ಆಗ ಯಾರ ಸರ್ಕಾರವಿತ್ತು? ಯುಪಿಎ ಸರ್ಕಾರವೇ ಅಲ್ಲವೇ? ಕಾಂಗ್ರೆಸ್ ಪಕ್ಷವೇ ತಂದ ಅಧಿನಿಯಮ 14(ಎ)ದಿಂದಲೇ ಅಲ್ಲವೇ ಎನ್‌ಆರ್‌ಸಿಗೆ ಪ್ರಸಕ್ತ ರೂಪ ಸಿಕ್ಕಿರುವುದು? ತದನಂತರ ಇದೇ ಕಾಂಗ್ರೆಸ್ 2009ರಲ್ಲಿ ಇದರ ಶೆಡ್ನೂಲ್‌ನಲ್ಲಿ 4(ಎ) ಸೇರಿಸಿತು.
ಇಷ್ಟೆಲ್ಲ ಮಾಡಿದ ಕಾಂಗ್ರೆಸ್, ಈಗ ಎನ್‌ಆರ್‌ಸಿ ಯಾಕೆ ಮಾಡುತ್ತಿದ್ದೀರೆಂದು ನಮ್ಮನ್ನು ಪ್ರಶ್ನಿಸುತ್ತಿದೆ. ನಾನು ಕಾಂಗ್ರೆಸ್‌ಗೆ ಕೇಳುವುದಿಷ್ಟೆ-ನೀವೇಕೆ ಎನ್‌ಆರ್‌ಸಿಯನ್ನು ರೂಪಿಸಿದಿರಿ? ಇದರ ಹಿಂದಿನ ತರ್ಕವೇನಿತ್ತು? ಎನ್‌ಆರ್‌ಸಿ ರೂಪ ಪಡೆದದ್ದು ಕಾಂಗ್ರೆಸ್‌ನ ಅವಧಿಯಲ್ಲಿಯೇ ಎನ್ನುವುದು ಸತ್ಯ. ಅಲ್ಲದೇ ಹೀಗೆ ರೂಪಿಸಿರುವುದು ಸರಿಯಾಗಿಯೇ ಇದೆ ಎನ್ನುವುದನ್ನೂ ನಾನು ಒಪ್ಪುತ್ತೇನೆ. ಇನ್ನು ಎನ್‌ಆರ್‌ಸಿಗೂ ಸಿಎಬಿಗೂ ಸಂಬಂಧವೇ ಇಲ್ಲ. ಮೊದಲು ಎನ್‌ಆರ್‌ಸಿಯೆಂದರೆ ಏನು ಎಂದು ತಿಳಿದುಕೊಳ್ಳಿ. ಎನ್‌ಆರ್‌ಸಿ ಎಂದರೆ ಈ ದೇಶದ ನಾಗರಿಕರ ನೋಂದಣಿ ಮಾಡುವುದು ಎಂದಷ್ಟೇ ಅರ್ಥ. ಪ್ರಪಂಚದಲ್ಲಿ ಯಾವ ದೇಶದಲ್ಲಿ ಈ ರೀತಿಯ ನಾಗರಿಕ ನೋಂದಣಿಯಿಲ್ಲ? ಭಾರತದಲ್ಲಿ ಯಾರು ಬೇಕಾದರೂ ಬಂದು ಇರಬಹುದೇ?
ಹಾಗಿದ್ದರೆ ಈ ಆಧಾರ್, ಮತದಾರ ಚೀಟಿ ಇವೆಲ್ಲ ಭಾರತೀಯ ನಾಗರಿಕರ ಗುರುತುಗಳಲ್ಲವೇನು?ಅಲ್ಲಾ, ಖಂಡಿತ ಇಲ್ಲ. ಇದರಿಂದ ಪೌರತ್ವ ನಿರ್ಧಾರವಾಗುವುದಿಲ್ಲ. ಅದರಲ್ಲೂ ಆಧಾರ್‌ನಿಂದ ಒಂದಿಷ್ಟೂ ಆಗುವುದಿಲ್ಲ. ಆಧಾರದ ಉದ್ದೇಶವೇ ಬೇರೆ. ನೋಡಿ, ಎನ್‌ಆರ್‌ಸಿ ತಂದರೆ ಅದ್ಯಾರಿಗೆ ಅನ್ಯಾಯವಾಗುತ್ತದೆ? ಯಾಕೆ ಇದಕ್ಕೆ ಹೆದರಬೇಕು? ಯಾರು ಈ ದೇಶದ ನಾಗರಿಕರೋ ಅವರಿಗೆ ಇದರಿಂದ ಏನೂ ಅನ್ಯಾಯವಾಗದು. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿವೆ. ವಾಪಸ್ ಪಡೆಯುತ್ತೀರಾ? ಸಾಧ್ಯವೇ ಇಲ್ಲ. ಒಂದಿಷ್ಟೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಯಾರು ಈ ಮೂರೂ ರಾಷ್ಟ್ರಗಳಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಶರಣಾರ್ಥಿಯಾಗಿ ಬಂದಿದ್ದಾರೋ, ಅವರಿಗೆಲ್ಲ ನೆಹರೂ -ಲಿಯಾಖತ್ ಒಪ್ಪಂದದನ್ವಯ, ನಾವು ಪೌರತ್ವ ಕೊಡುತ್ತೇವೆ. ಈ ವಿಷಯವನ್ನೆಲ್ಲ ನೀವು ಲೋಕಸಭೆಯಲ್ಲೂ ಹೇಳಿದ್ದೀರಿ. ಆದರೂ ಇಂದು ದೇಶದ ವಿಶ್ವವಿದ್ಯಾಲಯಗಳಲ್ಲೆಲ್ಲ ಪ್ರತಿಭಟನೆ ತೀವ್ರವಾಗುತ್ತಿದೆಯಲ್ಲ? ನೀವು ಒಂದಕ್ಕೆ ಹತ್ತು ಸೇರಿಸಿ ಮಾತಾಡಬೇಡಿ. ದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದು 5 ವಿಶ್ವವಿದ್ಯಾಲಯಗಳಲ್ಲಿ. ಇನ್ನು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ, ಇನ್ನೂ ಕೆಲವು ವಿವಿಗಳಲ್ಲಿ ಸಾಂಕೇತಿಕ ಪ್ರತಿಭಟನೆ ನಡೆದಿದೆ. ಜಾಮಿಯಾ ಮೀಲಿಯಾ ವಿಶ್ವವಿದ್ಯಾಲಯದ ಒಳಕ್ಕೆ ದೆಹಲಿ ಪೊಲೀಸರು ಹೀಗೆ ನುಗ್ಗಬಹುದಿತ್ತೇ? ಅಲ್ಲಿನ ಗ್ರಂಥಾಲಯವನ್ನು ಪ್ರವೇಶಿಸಿ ಥಳಿಸಿದ್ದು ಸರಿಯೇ? ನಾನು ಈಗಲೂ ಹೇಳುತ್ತೇನೆ. ಯಾರು ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಾರೋ, ಯಾರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೋ ಅವರ ವಿರುದ್ಧ ಕ್ರಮ ಜರುಗಿಸಲೇಬೇಕಾಗುತ್ತದೆ. ಆದರೆ, ಅನುಮತಿಯಿಲ್ಲದೇ ವಿಶ್ವವಿದ್ಯಾಲಯಗಳೊಳಗೆ ಪೊಲೀಸರು ನುಗ್ಗಬಾರದಿತ್ತಲ್ಲವೇ? ಹಾಗಿದ್ದರೆ ಕಲ್ಲುಗಳು ತೂರಿಬಂದದ್ದು ಎಲ್ಲಿಂದ? ವಿ.ವಿಯೊಳಗಿಂದಲೇ ಅಲ್ಲವೇ? ವಿವಿಯೊಳಗೆ ವಿದ್ಯಾರ್ಥಿಗಳಲ್ಲದವರೂ ನುಸುಳಿದ್ದರು ಎನ್ನುವುದು ಈಗ ಸಾಬೀತಾಗುತ್ತಲೂ ಇದೆ. ವಿಶ್ವವಿದ್ಯಾಲಯದಲ್ಲಿ ಹೊರಗಿನವರು ಇದ್ದರು ಎನ್ನುವುದಕ್ಕೆ ವೀಡಿಯೋ ಪುರಾವೆಯೂ ಸಿಗುತ್ತಿದೆ. ಅದರ ಜತೆಗೆ, ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿದರು ಎನ್ನುವುದನ್ನು ಸಾಬೀತುಮಾಡುವ ವಿಡಿಯೋ ಪುರಾವೆಗಳೂ ಸಿಗುತ್ತಿವೆಯಲ್ಲ? ಈ ಗದ್ದಲಕ್ಕೆ ಮುಖ್ಯ ಕಾರಣ ಅಪಪ್ರಚಾರ. ಕಾಂಗ್ರೆಸ್, ತೃಣಮೂಲ , ಆಪ್, ಕಮ್ಯುನಿಸ್ಟ್ ಪಾರ್ಟಿಗಳು ನಡೆಸುತ್ತಿರುವ ಅಪಪ್ರಚಾರ. ಪ್ರಪಂಚದಲ್ಲಿ ಯಾವ ದೇಶದಲ್ಲಿ ಈ ರೀತಿಯ ನಾಗರಿಕ ನೋಂದಣಿಯಿಲ್ಲ? ಭಾರತದಲ್ಲಿ ಯಾರು ಬೇಕಾದರೂ ಬಂದು ಇರಬಹುದೇ? – ಅಮಿತ್ ಶಾ