Advertisement

Central Govt ಬಡ್ತಿಯಲ್ಲಿ ಒಬಿಸಿಗೆ ಮೀಸಲು ಪ್ರಸ್ತಾಪವೇ ಇಲ್ಲ

09:25 PM Dec 11, 2023 | Shreeram Nayak |

ನವದೆಹಲಿ: ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ಬಡ್ತಿ ನೀಡಲು ಮೀಸಲಾತಿ ನೀಡುವ ಯಾವುದೇ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಲೋಕಸಭೆಯಲ್ಲಿ ಸೋಮವಾರ ಸ್ಪಷ್ಟಪಡಿಸಿದೆ.

Advertisement

ಸಂಸತ್ತಿನ ಚಳಿಗಾಲದ ಅಧಿವೇಶನದ 6ನೇ ದಿನದಂದು ಕಾಂಗ್ರೆಸ್‌ ಸಂಸದ ಮಾಣಿಕ್ಕಂ ಟಾಗೋರ್‌ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್‌ ಸರ್ಕಾರ್‌ ಮೇಲಿನಂತೆ ಪ್ರತಿಕ್ರಿಯಿಸಿದರು.

ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ-2019 ವಿಶ್ವವಿದ್ಯಾನಿಲಯಗಳೆಲ್ಲವನ್ನೂ ಒಂದು ಘಟಕವಾಗಿ ಪರಿಗಣಿಸಿ ಮೀಸಲು ಒದಗಿಸುತ್ತಿದೆ. ಕಾಯ್ದೆ ಪ್ರಕಾರವಷ್ಟೇ ಮೀಸಲು ನೀಡಲಾಗುತ್ತಿದ್ದು, ಯಾವುದೇ ಹೊಸ ಪ್ರಸ್ತಾಪವನ್ನೂ ಸರ್ಕಾರ ಹೊಂದಿಲ್ಲವೆಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಸಭಾತ್ಯಾಗ: ಇತ್ತ ರಾಜ್ಯ ಸಭೆಯಲ್ಲೂ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ಕೇಂದ್ರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟ ಐಎನ್‌ಡಿಐಎ ಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದ್ದಾರೆ.

ಟಿಎಂಸಿ , ಆಪ್‌, ಎಸ್‌ಪಿ, ಜನತಾದಳ (ಯುನೈಟೆಡ್‌), ಡಿಎಂಕೆ, ಎನ್‌ಸಿಪಿ, ಸಿಪಿಐ ಹಾಗೂ ಶಿವಸೇನೆ (ಯುಟಿಬಿ) ಸಂಸದರು ಸದನದಿಂದ ಹೊರ ನಡೆದಿದ್ದಾರೆ.

Advertisement

ಎಲ್ಲದ್ದಕ್ಕೂ ಕೋಮುಬಣ್ಣ ಬಳಿಯಬೇಡಿ: ರಾಜ್ಯಸಭೆಯಲ್ಲಿ ಮಧ್ಯಾಹ್ನದ ಅವಧಿಗಳ ಸಮಯ ಬದಲಾಯಿಸಿದ್ದರ ಬಗ್ಗೆಯೂ ತೀವ್ರ ಚರ್ಚೆ ನಡೆದಿದೆ. ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಪಡಿಸಲು ಸಮಯ ಬದಲಿಸಲಾಗಿದೆ ಎಂದು ಡಿಎಂಕೆ ಸಂಸದ ತಿರುಚ್ಚಿ ಶಿವ ಆರೋಪಿಸಿದ್ದಾರೆ. ಬಿಜೆಪಿ ನಾಯಕ ಮುಕ್ತಾರ್‌ ಅಬ್ಟಾಸ್‌ ನಖೀÌ ಈ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕೋಮು ಬಣ್ಣ ನೀಡುವುದು ಸಲ್ಲದು ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಜಮ್ಮುಕಾಶ್ಮೀರ ಮಸೂದೆ ಮಂಡನೆ
ಜಮ್ಮುಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ -2023 ಹಾಗೂ ಜಮ್ಮುಕಾಶ್ಮೀರ ಮರುವಿಂಗಡಣೆ (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕಾಗಿ ಕೇಂದ್ರಗೃಹ ಸಚಿವ ಅಮಿತ್‌ ಶಾ ಮಂಡನೆ ಮಾಡಿದ್ದಾರೆ. ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ನಿರ್ಣಯದ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಕುರಿತಂತೆ ಚರ್ಚೆಗಳೂ ನಡೆದಿದ್ದು, ಕಣಿವೆ ಮಾತ್ರವಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವೂ ಭಾರತಕ್ಕೇ ಸೇರಿದ್ದು, ಅದನ್ನು ಯಾರು ಕಸಿಯಲು ಸಾಧ್ಯವಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next