Advertisement

ಅಭಿವೃದ್ಧಿಯಲ್ಲಿ ರಾಜಕಾರಣ ಸಲ್ಲದು

06:40 AM May 24, 2020 | Team Udayavani |

ಕುಣಿಗಲ್‌: ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದು, ಆತ್ಮಸಾಕ್ಷಿಗೆ ದ್ರೋಹ ಮಾಡಿದಂತೆ ಎಂದು ಶಾಸಕ ಡಾ. ಎಚ್‌.ಡಿ.ರಂಗನಾಥ್‌ ವಿಪಕ್ಷದವರನ್ನು ತರಾಟೆ ತೆಗೆದುಕೊಂಡರು. ಯಲಿಯೂರು ಗ್ರಾಪಂನಲ್ಲಿ ಉತ್ತಮ  ಕೆಲಸ ಮಾಡಿ ಐದು ವರ್ಷ ಪೂರ್ಣಗೊಳಿಸಿದ ಅಧ್ಯಕ್ಷರು,  ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

Advertisement

ದೇಶದಲ್ಲಿ ಕೊರೊನಾದಿಂದ ಸಾವಿ ರಾರು ಮಂದಿ ಮೃತಪಟ್ಟು, ಲಕ್ಷಾಂತರ ಮಂದಿ ಮಂದಿ ಸೋಂಕಿನಿಂದ  ನರಳುತ್ತಿದ್ದಾರೆ ಎಂದರು. ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದೆ ಇದರಿಂದ ಕಾರ್ಮಿಕರು, ಬಡ ವರು, ಶ್ರಮಿಕ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ನಿಟ್ಟಿನಲ್ಲಿ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್‌,

ಸಂಸದ ಡಿ.ಕೆ.ಸುರೇಶ್‌, ರೈತರಿಂದ ತರಕಾರಿ ಹಣ್ಣು ಖರೀದಿಸಿ ಬಡವರಿಗೆ ಉಚಿತವಾಗಿ ನೀಡಿರುವುದಲ್ಲದೇ ದವಸ, ಧಾನ್ಯ ವಿತರಿಸುತ್ತಿದ್ದೇವೆ. ಇದನ್ನು ಸಹಿಸದ ವಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕಲು ಹೊರಟಿದ್ದಾರೆ ಎಂದು ತರಾಟೆ  ತೆಗೆದುಕೊಂಡ ಶಾಸಕರು, ಬಡವರ ನೋವಿ ನಲ್ಲಿ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಅಧ್ಯಕ್ಷೆ ಮಮತಾ ನೇತೃತ್ವದ ಯಲಿಯೂರು ಗ್ರಾಪಂ ಎಲ್ಲಾ ಸದಸ್ಯರು  ಒಗಟ್ಟಿನಿಂದ ತಮ್ಮ ಅಧಿಕಾರದ ಕೇವಲ ಮೂರು ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಧಿಸಿ ತಾಲೂಕಿಗೆ ಮಾದರಿಯಾಗಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ರಂಗ ಸ್ವಾಮಿ, ಸದಸ್ಯರಾದ ಜಹೀರುದ್ದೀನ್‌, ರವೀಶ್‌,  ಜಯ ಲಕ್ಷ್ಮಮ್ಮ, ಗಂಗಮ್ಮ, ಮುನಿಸ್ವಾಮಿ, ಶಿವಣ್ಣ, ರತ್ನಮ್ಮ, ಮಹಮದ್‌ ಸಮಿವುಲ್ಲಾ, ಶೋಭಾ, ಶಿವರಾಮು, ಪ್ರೇಮಾ, ವೆಂಕಟಲಕ್ಷ್ಮಮ್ಮ,  ಮಂಜುಳ, ಲಕ್ಷ್ಮಮ್ಮ, ಪಿಡಿಒ ಶಂಕರ್‌, ಕಾರ್ಯದರ್ಶಿ ಬಲರಾಮಯ್ಯರನ್ನು  ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next