Advertisement

ಕಮಲ ಕಾಂಗ್ರೆಸಿಗರಿಗೆ ಜಾಗವಿಲ್ಲ : ಮಂಜುನಾಥ್‌ ಕುಮಾರ್‌ 

01:00 AM Mar 07, 2019 | Team Udayavani |

ಮಡಿಕೆೇರಿ: ಪಕ್ಷದೊಳಗಿದ್ದೇ ಪಕ್ಷವನ್ನು ದುರ್ಬಲಗೊಳಿಸುವ ಮನೋಭಾವನೆ ತೋರುವ ಕಮಲ ಕಾಂಗ್ರೆಸ್ಸಿಗರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಇನ್ನು ಮುಂದೆ ಅವಕಾಶಗಳಿರುವುದಿಲ್ಲವೆಂದು ಜಿಲ್ಲಾ ಕಾಂಗ್ರೆಸ್‌ ನೂತನ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್‌ನಲ್ಲಿ ಇನ್ನು ಮುಂದೆ ಕಮಲ ಕಾಂಗ್ರೆಸ್ಸಿಗರು ಇರುವುದಿಲ್ಲ ಮತ್ತು ಅಂತಹವರಿಗೆ ಜಾಗವಿಲ್ಲವೆಂದರು. ಪಕ್ಷದೊಳಗಿದ್ದೆ ಪಕ್ಷ ಸಂಘಟನೆಗೆ ಅಸಹಕಾರ ತೋರುವವರು, ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುವವರು ಹಾಗೂ ಅಶಿಸ್ತಿನಿಂದ ನಡೆದುಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರಾಜ್ಯ ವ್ಯಾಪಿ 58 ಲಕ್ಷ ಮನೆಗಳಲ್ಲಿ ಒಂದೊಂದೆ ಮತದಾರರಿರುವುದನ್ನು ಪತ್ತೆ ಹಚ್ಚಿದ್ದು, ಹೊರ ರಾಜ್ಯಗಳಲ್ಲು ಇಂತಹ ಬೆಳವಣಿಗೆ ನಡೆದಿದೆ.

ಪತ್ತೆಯಾದ ಒಂದು ಮತ ಹೊಂದಿರುವ ಶೇ.75 ರಷ್ಟು ಮನೆಗಳ ಮತಗಳು ಕಾಂಗ್ರೆಸ್‌ಗೆ ಸೇರಿದ್ದವು ಎನ್ನುವುದು ಖಾತ್ರಿಯಾಗಿದೆ ಎಂದು ಟೀಕಿಸಿದರು.ಕೊಡಗು ಜಿಲ್ಲೆಯಲ್ಲಿ ಬಿಜೆಪಿಯೇತರ ಮತಗಳು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಉಸಿರು ಗಟ್ಟಿಸುವಂತಹ ವಾತಾವರಣದಿಂದ ಬೇಸತ್ತಿರುವ, ಅಲ್ಲಿನ ನಾಯಕರನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಮನಸ್ಥಿತಿಯಲ್ಲಿರುವ ಯಾರೇ ಆಗಿರಲಿ, ಅವರಿಗೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಕ್ತ ಅವಕಾಶ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್‌, ಕೆಪಿಸಿಸಿ ಸದಸ್ಯ ಜೋಸೆಫ್ ಶ್ಯಾಂ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯ ಘ‌ಟಕದ ಸಂಚಾಲಕ ಎಂ.ಎ. ಉಸ್ಮಾನ್‌ ಹಾಗೂ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕದ ಸೋಮವಾರಪೇಟೆ ಬ್ಲಾಕ್‌ ಅಧ್ಯಕ್ಷ ಟಿ.ಸುರೇಶ್‌ ಉಪಸ್ಥಿತರಿದ್ದರು.

ಜನಸಂಪರ್ಕ ಅಭಿಯಾನ
ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆ ಎದುರಾಗಲಿರುವುದರಿಂದ ಕಾಂಗ್ರೆಸ್‌ ಮತದಾರರನ್ನು ತಲುಪುವ ಜನ ಸಂಪರ್ಕ ಅಭಿಯಾನ, ಶಕ್ತಿ ಪ್ರಾಜೆಕ್ಟ್ ಮತ್ತು ಒಂದು ಮನೆ ಒಂದು ಮತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಂಪರ್ಕ ಅಭಿಯಾನದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರಾ ಡಳಿತ, ಸುಳ್ಳು ಆಶ್ವಾಸನೆ, ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳನ್ನು ಗ್ರಾಮ ಮಟ್ಟದಿಂದಲೇ ಜನಸಾಮಾನ್ಯರಿಗೆ ತಿಳಿಸಲಾಗುವುದು.ಜನಸಂಪರ್ಕ ಅಭಿಯಾನಕ್ಕೆ ಏಕಕಾಲದಲ್ಲಿ ಪಕ್ಷದ ಘಟಕಗಳ ಮೂಲಕ ಇಂದು ಚಾಲನೆ ನೀಡಲಾಗಿದೆ ಎಂದು  ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next