Advertisement
ಸುಳ್ಯ ಭಾಗದಿಂದ ಪುತ್ತೂರು ನಗರಕ್ಕೆ ಸಂಪರ್ಕಿಸುವ ದ್ವಿಪಥ ರಸ್ತೆಯ ಒಂದು ಭಾಗದಲ್ಲಿ ಎರಡು ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಕಳೆದ ಎರಡು ವಾರಗಳ ಹಿಂದೆ ಈ ಹೊಂಡ ನಿರ್ಮಾಣ ವಾಗಿದ್ದರೂ ಯಾರೋ ಅಪಾಯ ವನ್ನು ಸೂಚಿಸಲು ಬ್ಯಾರಿಕೇಡ್‌ಗಳನ್ನು ತಂದಿರಿಸಿದ್ದು ಬಿಟ್ಟರೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.
ಎರಡೂ ಹೊಂಡಗಳಿಗೆ ಲಿಂಕ್ ಇರುವಂತೆ ಒಳಭಾಗದಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಗಿದೆ. ಘನ ವಾಹನಗಳೂ ಸಂಚರಿಸುವುದರಿಂದ ಈ ಕುಸಿತ ಅಧಿಕವಾಗುವ ಅಪಾಯವಿದೆ. ಪ್ರಸ್ತುತ ಬ್ಯಾರಿಕೇಡ್ ಅಳವಡಿಸಿ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ ಇರುವ ಸಂದರ್ಭ ಟ್ರಾಫಿಕ್ ಜಾಂ ಉಂಟಾಗುತ್ತಿದೆ.
Related Articles
ಇಲ್ಲಿ ರಸ್ತೆ ಹೊಂಡ ನಿರ್ಮಾಣವಾಗುವ ಸ್ಥಿತಿ ಪ್ರತಿ ವರ್ಷವೂ ಮುಂದುವರಿಯುತ್ತಿರುವ ಕಾರಣ ತಾತ್ಕಾಲಿಕ ದುರಸ್ತಿ ಮಾಡಿ ಹಣ ಪೋಲು ಮಾಡುವ ಬದಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಚಿಂತನೆ ನಡೆಸಬೇಕಿದೆ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.
Advertisement
ಶೀಘ್ರ ತೀರ್ಮಾನರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿರುವುದನ್ನು ಗಮನಿಸಿದ್ದೇವೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ದೊಡ್ಡ ಅನುದಾನ ಬೇಕಾಗುತ್ತದೆ. ಈ ಕುರಿತು ಶೀಘ್ರ ನಗರಸಭೆಯಲ್ಲಿ ತೀರ್ಮಾನ ಕೈಗೊಂಡು ಟೆಂಡರ್ ಕರೆದು ಸರಿಪಡಿಸುತ್ತೇವೆ.
– ರೂಪಾ ಟಿ. ಶೆಟ್ಟಿ,
ಪೌರಾಯುಕ್ತರು, ನಗರಸಭೆ ಪುತ್ತೂರು