Advertisement

ಕೊತದೊಡ್ಡಿ ಗ್ರಾಮಕ್ಕೆ ಪಿಡಿಒ ಇಲ್ಲ; ಪ್ರಗತಿ ಕುಂಠಿತ

06:09 PM Sep 09, 2022 | Team Udayavani |

ದೇವದುರ್ಗ: ಕಳೆದ ಎರಡು ತಿಂಗಳಿಂದ ಕೊತ್ತದೊಡ್ಡಿ ಗ್ರಾಪಂಗೆ ಅಭಿವೃದ್ಧಿ ಅಧಿಕಾರಿ ಇಲ್ಲದ ಕಾರಣ ಹಲವು ಸಮಸ್ಯೆಗಳು ಉಲ್ಬಣಗೊಂಡಿವೆ. ತಾಪಂ, ಗ್ರಾಪಂ ಅಧಿಕಾರಿಗಳ ಮಧ್ಯೆಯೇ ಸಮನ್ವಯ ಕೊರತೆ ಹಿನ್ನೆಲೆ ಹಳ್ಳಿಗಳ ಗ್ರಾಮಸ್ಥರು ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

Advertisement

ಕೊತ್ತದೊಡ್ಡಿ ಗ್ರಾಪಂಗೆ ಹನ್ನೇರಡಕ್ಕೂ ಅಧಿಕ ಹಳ್ಳಿಗಳ ಬರುತ್ತಿವೆ. ಒಂದೊಂದು ಹಳ್ಳಿಗಳಲ್ಲಿ ಒಂದೊಂದು ಸಮಸ್ಯೆ ಇವೆ. ಹೆಚ್ಚು ಮಳೆಯಿಂದ ಸೊಳ್ಳೆಗಳ ಕಾಟ ವಿಪರೀತಗೊಂಡಿದೆ. ಫಾಗಿಂಗ್‌ ವ್ಯವಸ್ಥೆ ಮಾಡಿಲ್ಲ. ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ. ಸಾಂಕ್ರಮಿಕ ರೋಗಗಳ ಭೀತಿಯಿಂದ ಜನರು ತತ್ತರಿಸಿದ್ದಾರೆ.

ಕೊತ್ತದೊಡ್ಡಿ ಸೇರಿ ಇತರೆ ಹಳ್ಳಿಗಳಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿರುವ ಹಿನ್ನೆಲೆ ಗ್ರಾಮಸ್ಥರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಕೆಲ ಗ್ರಾಮಗಳಲ್ಲಿ ಜಲ ಜೀವನ ಮಿಷನ್‌ ಕಾಮಗಾರಿ ಪ್ರಗತಿಯಲ್ಲಿದೆ.

ಹೊನ್ನಕಾಟಮಳ್ಳಿ, ಹೇಮನೂರು, ಮಲ್ಲಿನಾಯಕದೊಡ್ಡಿ, ಕರಡೋಣ ಮಲಕಂದಿನ್ನಿ, ಯಲದೊಡ್ಡಿ, ಲಿಂಗನದೊಡ್ಡಿ, ಖಾಚಪುರ ಸೇರಿ ಇತರೆ ಗ್ರಾಮಗಳು ಕಳೆದ ಎರಡು ತಿಂಗಳಿಂದ ಹಲವು ಸಮಸ್ಯೆಗಳು ಎದುರಿಸುತ್ತಿವೆ. ಗ್ರಾಪಂ 13 ಮತ್ತು 14ನೇ ಹಣಕಾಸು ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಯೋಜನೆಯೂ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next