Advertisement
ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರು ಮೋರ್ಚಾದ ಭಾಷಣದಲ್ಲಿ ನುಸುಳುಕೋರರ ವಿರುದ್ಧ ಮಾತನಾಡುತ್ತಾ ಕಲ್ಲು ಹೊಡೆಯುವವರಿಗೆ ಕಲ್ಲುಗಳಿಂದ ಮತ್ತು ಕತ್ತಿಗೆ ಕತ್ತಿಯಿಂದ ಉತ್ತರಿಸಲಾಗುವುದು ಎಂದು ಹೇಳಿದ್ದರು. ಅವರ ಹೇಳಿಕೆ ಬಗ್ಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಲ್ಲಿ ಕೇಳಿದಾಗ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ರಾಜ್ಯದ ರಾಜಕೀಯದ ಮೇಲೆ ಈ ರೀತಿಯ ಹೇಳಿಕೆ ಯಾವುದೆ ಪ್ರಭಾವ ಬೀರುವುದಿಲ್ಲ.
ಈ ವೇಳೆ ದಿಲ್ಲಿಯಲ್ಲಿಯ ಫಲಿತಾಂಶದ ಬಗ್ಗೆ ಮಾತನಾಡಿದ ಶರದ್ ಪವಾರ್ ಅವರು, ಬಿಜೆಪಿ ಸೋಲಿನ ಸರಣಿ ಪ್ರಾರಂಭವಾಗಿದೆ, ಅದು ನಿಲ್ಲುವಂತೆ ಕಾಣುತ್ತಿಲ್ಲ. ಬಿಜೆಪಿ ಪ್ರಯತ್ನ ವಿಫಲವಾಗಿದೆ. ಬಿಜೆಪಿಗೆ ಪೈಪೋಟಿ ನೀಡಿದ ಪಕ್ಷವನ್ನು ಸಾರ್ವಜನಿಕರು ಆಯ್ಕೆ ಮಾಡಿದ್ದಾರೆ. ಕೇಜ್ರಿವಾಲ್ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಆದ್ದರಿಂದ, ಫಲಿತಾಂಶದಿಂದ ನಾನು ವೈಯಕ್ತಿಕವಾಗಿ ಆಶ್ಚರ್ಯಪಡುತ್ತಿಲ್ಲ, ಎಂದು ಹೇಳುತ್ತಾ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಅಭಿನಂದಿಸಿದರು.