Advertisement

ಕೋವಿಡ್ ಪರೀಕ್ಷೆ ಹೆಚ್ಚಿಸುವ ಅಗತ್ಯತೆ ಕಾಣುತ್ತಿಲ್ಲ : ಸಚಿವ ಡಾ.ಎಸ್. ಸುಧಾಕರ್

06:19 PM Jun 14, 2022 | Team Udayavani |

ಮೈಸೂರು: ಕೋವಿಡ್ ವಿಚಾರದಲ್ಲಿ ಸದ್ಯಕ್ಕೆ ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ಡಾ.ಎಸ್. ಸುಧಾಕರ್ ಮಂಗಳವಾರ ಹೇಳಿಕೆ ನೀಡಿದ್ದಾರೆ.

Advertisement

ದಿನೇ ದಿನೇ ಕೋವಿಡ್ ಪ್ರಕರಣಗಳ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ತರಗತಿಯಲ್ಲಿ 10 ರಿಂದ 12 ಮಕ್ಕಳಿಗೆ ಪಾಸಿಟಿವ್ ಆದರೆ ಆ ತರಗತಿಗೆ ಮಾತ್ರ ರಜೆ. ಆ ಪ್ರಮಾಣ ಹೆಚ್ಚಾದರೆ ಮಾತ್ರ ಒಂದು ವಾರ ಶಾಲೆಗೆ ರಜೆ ಎಂದು ಸ್ಪಷ್ಟ ಪಡಿಸಿದರು.

ಕೋವಿಡ್ ಪರೀಕ್ಷೆ ಹೆಚ್ಚಿಸುವ ಅಗತ್ಯತೆ ಕಾಣುತ್ತಿಲ್ಲ. ಮಕ್ಕಳಲ್ಲಿ ಇದರ ತೀವ್ರತೆ ತುಂಬಾ ಕಡಿಮೆಯಿದೆ. ಮಾಸ್ಕ್ ಕಡ್ಡಾಯವಾಗಿ ಧರಿಸಿದರೆ ಒಳ್ಳೆಯದು. ಮತ್ತೆ ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next