Advertisement

ಕಾಟಾಚಾರಕ್ಕೆ ಸಭೆ ಬೇಡ

02:44 PM Oct 04, 2019 | Team Udayavani |

ಲಕ್ಷ್ಮೇಶ್ವರ: ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯ ಯೋಜನೆಗಳ ಅನುಷ್ಠಾನ, ಪ್ರಗತಿ ಪರಿಶೀಲನಾ ಸಭೆಗಳನ್ನು ಗ್ರಾಮ ಮಟ್ಟದಲ್ಲಿ ನಡೆಸುವ ಉದ್ದೇಶದಿಂದ ಕೈಗೊಳ್ಳಲಾಗಿರುವ ತ್ತೈಮಾಸಿಕ ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಭೆ ಕೇವಲ ಕಾಟಾಚಾರಕ್ಕಾಗಬಾರದು ಎಂದು ಜಿಪಂ ಸದಸ್ಯ ಎಸ್‌.ಪಿ. ಬಳಿಗಾರ ಆಗ್ರಹಿಸಿದರು.

Advertisement

ಸಮೀಪದ ಅಡರಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ ಅವುಗಳ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಕಾರಣ ಯೋಜನೆ ಅನುಷ್ಠಾನ ಮಾಡುವ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮದಲ್ಲಿ  ಗ್ರಂಥಾಲಯ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕಲ್ಪಿಸಿದರೆ ಜಿಪಂ ಅನುದಾನ ಕಲ್ಪಿಸುವುದಾಗಿ ಹೇಳಿದರು.

ಗ್ರಾಪಂ ಅಧ್ಯಕ್ಷ ಗಣೇಶ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯ ಮತ್ತು ಅಂಗನವಾಡಿ ಕಟ್ಟಡಕ್ಕೆ ನಿವೇಶನ ಗುರುತಿಸಿದ್ದು, ಈ ಸ್ವತ್ತು ಉತಾರ ಸಿದ್ಧವಾದ ಕೂಡಲೇ ದಾಖಲೆಗಳೊಂದಿಗೆ ಜಿಪಂ ಸದಸ್ಯರಿಗೆ ಸಲ್ಲಿಸುವುದಾಗಿ ಹೇಳಿದರು. ಮುಖ್ಯವಾಗಿ ಸಭೆಗೆ ಕೃಷಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಬರಬೇಕಿತ್ತು. ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಡೆಂಘೀ ಜ್ವರದ ಬಾಧೆ ಕಾಡುತ್ತಿದೆ. ಈ ಬಗ್ಗೆ ಜನರಿಗೆ ತಿಳಿವಳಿಕೆ ಹೇಳಬೇಕಾಗಿದೆ. ಅಲ್ಲದೇ ಕೃಷಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕಿದೆ. ಆದರೆ ಅವರ್ಯಾರೂ ಸಭೆಗೆ ಬಂದಿಲ್ಲ. ಅನಿವಾರ್ಯ ಕಾರಣಗಳ ಅಧಿಕಾರಿಗಳು ಬರದಿದ್ದರೂ ಇಲಾಖೆ ಸಿಬ್ಬಂದಿಗಳೊಂದಿಗೆ ಕಾರ್ಯ ಯೋಜನೆಗಳ ಮಾಹಿತಿ ಕಳುಹಿಸಬೇಕು ಎಂದರು.

ಉಪಾಧ್ಯಕ್ಷೆ ಮಹಾದೇವಿ ಚಿಕ್ಕಣ್ಣವರ, ಸುರೇಶ ತೋಟದ, ಪಿಡಿಒ ಸವಿತಾ ಸೋಮಣ್ಣವರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಶಾಲೆ ಮುಖ್ಯ ಶಿಕ್ಷಕರು, ಜಿಪಂ ಇಂಜಿನಿಯರಿಂಗ್‌ ವಿಭಾಗದ ಸೆಕ್ಷನ್‌ ಇಂಜಿನಿಯರ್‌, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next