ಸರಕಾರಕ್ಕೆ 100 ದಿನಗಳಾಗುತ್ತಿದ್ದಂತೆಯೇ 33 ಹೊಸ ಕಾರುಗಳ ಖರೀದಿಗೆ ಅನುಮತಿ ನೀಡಲಾಗಿತ್ತು. ಈಗ ಕಚೇರಿ ದುರಸ್ತಿ ಹಾಗೂ ವಸತಿ ಗೃಹಕ್ಕೆ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮುಂದಾಗಿದೆ.
Advertisement
ಅನಗತ್ಯ ಖರ್ಚು ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಆರ್ಥಿಕ ಶಿಸ್ತು ಕಾಪಾಡಿ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆಗಳನ್ನು ಮಾಡುವ ಸಿಎಂ ಮತ್ತು ಸಚಿವರು ತಮಗಾಗಿ ಖರ್ಚು ಮಾಡಲಿರುವ ಮೊತ್ತಕ್ಕೆ ಪಾರದರ್ಶಕ ಕಾಯ್ದೆಯ ವಿನಾಯಿತಿಯನ್ನೂ ಪಡೆದಿದ್ದಾರೆ.
ಯಾವುದೇ ಟೆಂಡರ್ ಇಲ್ಲದೆಯೇ ರಾಮನಗರದಲ್ಲಿರುವ ಟೊಯೋಟೋ ಕಿರ್ಲೋಸ್ಕರ್‌ನಿಂದ ನೇರವಾಗಿ ಕಾರು ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, 33 ಕಾರುಗಳಿಗೆ 9.90 ಕೋಟಿ ರೂ.ಗಳನ್ನು ಖರ್ಚು ಮಾಡಲು ಈ ಹಿಂದೆ ಆದೇಶಿಸಿದೆ. ಸಿಎಂ ಹಾಗೂ ಮಂತ್ರಿಮಂಡಲದ ಸಚಿವರು ಮಾತ್ರವಲ್ಲದೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರಿಗೆ 26 ಲಕ್ಷ ರೂ. ಇನ್ನೋವಾ ಕ್ರಿಸ್ಟಾ ಹಾಗೂ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ 30 ಲಕ್ಷ ರೂ. ಮೌಲ್ಯದ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಝಡ್‌ಎಕ್ಸ್ ಕಾರುಗಳ ಹಂಚಿಕೆಗೆ ಅನುಮತಿ ನೀಡಲಾಗಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಓಡಾಡಲು 40.83 ಲಕ್ಷ ರೂ. ಬೆಲೆಬಾಳುವ ಟೊಯೋಟೋ ಫಾಚ್ಯುìನರ್ ಕಾರು ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಕಚೇರಿ ದುರಸ್ತಿಗೆ 3.80 ಕೋ. ರೂ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯಲು 3.80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೂ ಯಾವುದೇ ಟೆಂಡರ್ ಕರೆದಿಲ್ಲ. ಯಾಕೆಂದರೆ, ಇದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮದಡಿ ವಿನಾಯಿತಿ ನೀಡ ಲಾಗಿದೆ.
Related Articles
ಸಚಿವರ ವಸತಿ ಗೃಹಗಳಿಗೆ ಗೃಹೋ ಪಯೋಗಿ ವಸ್ತುಗಳು ಹಾಗೂ ಪೀಠೊ ಪಕರಣಗಳ ಪೂರೈಕೆಗಾಗಿ 3.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅಧಿಸೂಚಿಸಿದ್ದು, ಈ ಎರಡೂ ಕಾಮಗಾರಿ ಗಳಿಗೂ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಒದಗಿಸುವ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ಕೊಡಲಾಗಿದೆ.
Advertisement
ಮನೆ ದುರಸ್ತಿಗೆ ಟೀಕೆಸತತ 3 ವರ್ಷಗಳ ಕಾಲ ಬಳಸಿದ್ದರೆ ಅಥವಾ ಗರಿಷ್ಠ 1 ಲಕ್ಷ ಕಿ.ಮೀ. ಸಂಚರಿಸಿದ್ದರೆ ಕಾರುಗಳನ್ನು ಬದಲಿಸಲು ಅವಕಾಶವಿದೆ. ಈಗಾಗಲೇ ಕೆಲವು ಕಾರುಗಳು ಗರಿಷ್ಠ ಮಿತಿಯನ್ನೂ ಮೀರಿ ಸಂಚರಿಸಿದ್ದು, ಜೀವರಕ್ಷಣೆಯ ದೃಷ್ಟಿಯಿಂದ ಇವುಗಳನ್ನು ಬದಲಿಸುವುದು ಸೂಕ್ತ. ಆದರೆ ಮನೆ, ಕಚೇರಿ ದುರಸ್ತಿಗೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.