ಮುಂಬೈ/ಲಂಡನ್: ಉದ್ಯಮಿ ವಿಜಯ್ ಮಲ್ಯ ಐಷಾರಾಮಿ ಜೀವನಕ್ಕೆ ಕಡಿವಾಣ ಬೀರಲಾರಂಭಿಸಿದೆ. ಈಗಾಗಲೇ ಕೋರ್ಟು, ಕಚೇರಿ ಎಂದು ಅಲೆಯುತ್ತಾ ಬಂದ ಮಲ್ಯ ಸದ್ಯಕ್ಕೆ ಸಾಮಾನ್ಯರಂತೆ ಇದ್ದಾರಂತೆ! ಅಚ್ಚರಿ ಆಯ್ತಾ? ನಂಬೋದು ಬಿಡೋದು ನಿಮಗೆ ಬಿಟ್ಟ ವಿಚಾರ. ಆದರೆ ಮಲ್ಯ ಪರ ವಕೀಲ ಅಮಿತ್ ದೇಸಾಯಿ ಮುಂಬೈ ಕೋರ್ಟ್‌ಗೆ ನೀಡಿದ ಮಾಹಿತಿ ಪ್ರಕಾರ ಅವರೀಗ ದುಬಾರಿ ವಾಚ್ ಕಟ್ಟುತ್ತಿಲ್ಲ. ಸೂಟು-ಬೂಟನ್ನೂ ಧರಿಸುತ್ತಿಲ್ಲ. ಐಷಾರಾಮಿ ಕಾರಿನಲ್ಲೂ ಓಡಾಡುತ್ತಿಲ್ಲ. ಭಾರೀ ಬೆಲೆ ಬಾಳುವ ಯಾವ ಆಭರಣ ವನ್ನೂ ಧರಿಸುತ್ತಿಲ್ಲ. ಅಂದರೆ ಅವೆಲ್ಲವೂ ಕೋರ್ಟ್ ವಶದಲ್ಲಿವೆ. ಹೀಗೆಂದು ಮುಂಬೈನ ಕೋರ್ಟೊಂದರಲ್ಲಿ ನಡೆದ ವಿಚಾ ರಣೆ ವೇಳೆ ಮಲ್ಯರ ವಕೀಲ ಮಾಹಿತಿ ನೀಡಿದ್ದಾರೆ. ಭಾರತಕ್ಕೆ ಗಡಿಪಾರು ಮಾಡಿ ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್ ಕೋರ್ಟ್ ಆದೇಶ ಹೊರಡಿ ಸಿದ ಸಂದರ್ಭದಲ್ಲಿ, ಮಲ್ಯ ಒಬ್ಬ ಆಡಂಬ ಪ್ರಿಯ. ಎಲ್ಲಾ ಆಸ್ತಿಗಳನ್ನೂ ಮುಟ್ಟುಗೋಲು ಹಾಕಿ ಕೊಳ್ಳುವಂತೆ ಆದೇಶಿಸಲಾಗಿತ್ತು.
ಆದೇಶ ಕೈ ಸೇರಿದೆ: ಯು.ಕೆ. ಗೃಹ ಇಲಾಖೆ: ವೆಸ್ಟ್‌ಮಿನಿಸ್ಟರ್ ಕೋರ್ಟ್ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಿದ ಆದೇಶದ ಪ್ರತಿ ಯು.ಕೆ.ಯ ಗೃಹ ಇಲಾಖೆಗೆ ಸಿಕ್ಕಿದೆ. ಈ ಬಗ್ಗೆ ಅಲ್ಲಿನ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
300 ಬ್ಯಾಗ್ ಜತೆಗೆ ಹೋದದ್ದು ಯಾರು?
ದೇಶ ಬಿಟ್ಟು ತೆರಳಿದಾಗ ಕಕ್ಷಿದಾರನ ಬಳಿ ಏನೂ ಇರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು ಎಂದು ಇ.ಡಿ.ಕೋರ್ಟ್‌ಗೆ ಮಲ್ಯ ವಕೀಲ ಅಮಿತ್ ದೇಸಾಯಿ ಹೇಳಿದರು. ಅದಕ್ಕೆ ವಿರೋಧಿಸಿದ ಇ.ಡಿ. ವಕೀಲ ಡಿ.ಎನ್.ಸಿಂಗ್ ಅವರು ಹೇಳಬೇಕಾದದ್ದು ಏನೇನೂ ಇಲ್ಲ. ಕಾರ್ಯ ಕ್ರಮಕ್ಕೆ ಹೋಗುವಾಗ 300 ಬ್ಯಾಗ್‌ಗಳ ಜತೆಗೆ ಯಾರಾದರೂ ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು.