Advertisement

ತರಬೇತಿಯಲ್ಲಿ ತಾರತಮ್ಯವಿಲ್ಲ: ರಾಮನ್‌

12:45 AM Jan 07, 2019 | Team Udayavani |

ಹೊಸದಿಲ್ಲಿ: ತರಬೇತಿ ನೀಡುವ ವಿಚಾರದಲ್ಲಿ ನಾನು ನನ್ನದೇ ಆದ ಕೆಲವು ತತ್ವಗಳಿಗೆ ಬದ್ಧನಾಗಿದ್ದೇನೆ. ಹಾಗಾಗಿ, ಸದ್ಯದಲ್ಲೇ ನಾನು ತರಬೇತು ನೀಡಲಿರುವ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡದಲ್ಲಿ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ, ಇಬ್ಬರಿಗೂ ಒಂದೇ ವೇದಿಕೆಯಲ್ಲಿ ತರಬೇತಿ ನೀಡಲು ಯೋಜಿಸಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಡಬ್ಲ್ಯುವಿ ರಾಮನ್‌ ತಿಳಿಸಿದ್ದಾರೆ.

Advertisement

ಇತ್ತೀಚೆಗೆ ರಾಮನ್‌ ಅವರನ್ನು ಬಿಸಿಸಿಐ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರನ್ನಾಗಿಸಿ ನೇಮಿಸಿದೆ. ಅವರ ಆಯ್ಕೆಯಿನ್ನೂ ಆಧಿಕೃತಗೊಂಡಿಲ್ಲ. ಬಿಸಿಸಿಐ ಮಾಡಿರುವ ಈ ಶಿಫಾರಸಿಗೆ ಸುಪ್ರೀಂ ಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತ ಮಂಡಳಿ (ಸಿಒಎ) ಸದಸ್ಯೆಯಾದ ಡಯಾನಾ ಎಡುಲ್ಜಿ ಇನ್ನೂ ಒಪ್ಪಿಗೆ ಸೂಚಿಸಿಲ್ಲಆದರೆ ಈ ಬಗ್ಗೆ ಪ್ರತಿಜಕ್ರಿಯೆ ನೀಡದ ರಾಮನ್‌, ತಮ್ಮ ಕೆಲಸದ ಕುರಿತಷ್ಟೇ ಹೇಳಿದ್ದಾರೆ.

“ಕೋಚ್‌ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವವರ ನಿರ್ಧಾರಕ್ಕೆ ಸೂಕ್ತ ಸಮರ್ಥನೆ ನೀಡಬೇಕಿದೆ. ತರಬೇತಿಯಲ್ಲಿ ನಾನು ನನ್ನದೇ ಆದ ನಿಶ್ಚಿತ ಮಾರ್ಗಗಳನ್ನು ಹೊಂದಿದ್ದೇನೆ. ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಭಾರತೀಯ ಮಹಿಳಾ ಕ್ರಿಕೆಟರ್‌ಗಳನ್ನು ವಿಶ್ವಮಟ್ಟದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next