Advertisement

ಶಿಕ್ಷಣ ಸಂಸ್ಥೆಗಳಲ್ಲಿಂದು ಸಂಸ್ಕೃತಿ-ಸಂಪ್ರದಾಯದ ಶಿಕ್ಷಣ ಉಳಿದಿಲ್ಲ

12:14 PM Jul 14, 2017 | |

ಹುಬ್ಬಳ್ಳಿ: ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಶಿಕ್ಷಣ ಉಳಿದಿಲ್ಲ ಎಂದು ಪದ್ಮರಾಜ ನಗರದ ಅದ್ವೆ„ತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಹೇಳಿದರು. ಗೋಕುಲ ರಸ್ತೆ ರೇಣುಕಾ ನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಅಕ್ಷರಾಭ್ಯಾಸ ಹಾಗೂ ಶಾಲಾ ವೆಬ್‌ಸೈಟ್‌ ಅನಾವರಣ ಮಾಡಿ ಅವರು ಮಾತನಾಡಿದರು.

Advertisement

ಮಕ್ಕಳಿಗೆ ಆರಂಭದಲ್ಲೇ ಭದ್ರ ಬುನಾದಿ ಹಾಕಬೇಕು. ಆರಂಭದಲ್ಲಿ ಎಡವಿದರೆ ಇಡೀ ಜೀವನದಲ್ಲಿ ಅವರನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಲಕರು, ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದರು. ಇಂದಿನ ಆಧುನಿಕ ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಯಾವುದೂ ಇಲ್ಲ.

ಕೇವಲ ಮಕ್ಕಳು ಪುಸ್ತಕದ ಹುಳುಗಳಾಗುತ್ತಿದ್ದು, ಅವರನ್ನು ಅದರಿಂದ ಹೊರ ತರಬೇಕಿದೆ. ಹೊಸ ಶಿಕ್ಷಣ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಾಗಿದ್ದು ಅದರಿಂದ ಮಕ್ಕಳಿಗೆ ಮುಕ್ತಿ ಕೊಡಿಸಬೇಕಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿ, ಸಂಪ್ರದಾಯ ಹೆಚ್ಚು ಬೆಳೆಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸುಮಾರು 34ಕ್ಕೂ ಹೆಚ್ಚು ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು.

ಮಜೇಥಿಯಾ ಫೌಂಡೇಶನ್‌ನ ಅಧ್ಯಕ್ಷ ಜಿತೇಂದ್ರ ಮಜೇಥಿಯಾ www.rvkhbl.co.in ಶಾಲಾ ವೆಬ್‌ಸೈಟ್‌ ಅನಾವರಣಗೊಳಿಸಿದರು. ದತ್ತಾತ್ರೇಯ ರತನ, ಅರವಿಂದ, ಸೋಮಶೇಖರ ಬೆಟಗೇರಿ, ಶಾಲಾ ಆಡಳಿತಾಧಿಕಾರಿ ಶ್ರೀಧರ ಜೋಶಿ, ವೀರೇಂದ್ರ ಕೌಜಲಗಿ ಹಾಗೂ ಶಾಲಾ ಶಿಕ್ಷಕರು-ಸಿಬ್ಬಂದಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next