Advertisement

ದೆಹಲಿಗೆ ತೆರಳಿದ್ದ ಗದಗ ಜಿಲ್ಲೆಯವರಿಗೆ ಸೋಂಕಿಲ್ಲ

03:52 PM Apr 02, 2020 | Suhan S |

ಗದಗ: ದೆಹಲಿಯ ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸಾಗಿರುವ ಜಿಲ್ಲೆಯ 6 ಜನರನ್ನು ಗುರುತಿಸಲಾಗಿದ್ದು, ಅವರ ರಕ್ತ ಮತ್ತು ಗಂಟಲು ದ್ರವ್ಯದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಆರು ಜನರ ವರದಿ ನೆಗೆಟಿವ್‌ ಬಂದಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಮಾ. 10ರಂದು ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಗದಗ ನಗರದ 6 ಜನರು ಪಾಲ್ಗೊಂಡಿದ್ದರು.

Advertisement

ಸಮಾರಂಭದ ನಡೆದು ಒಂದೆರಡು ದಿನಗಳ ನಂತರ ಅವರು ನಗರಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ನಗರಕ್ಕೆ ಬಂದು ಈಗಾಗಲೇ 14 ದಿನಗಳನ್ನು ಕಳೆದಿದ್ದಾರೆ. ಯಾವುದೇ ರೀತಿಯ ಸೋಂಕು ಕಂಡುಬಂದಿಲ್ಲ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಆದರೂ ಅವರ ಮೇಲೆ ಜಿಲ್ಲಾಡಳಿತ ನಿಗಾವಹಿದೆ. ದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ನಲ್ಲಿ ಪಾಲ್ಗೊಂಡಿದ್ದ ಜಿಲ್ಲೆ 6 ಜನರ ಗಂಟಲು ದ್ರವ್ಯ ಮಾದರಿ ವರದಿ ನಕಾರಾತ್ಮಕವಾಗಿ ಬಂದಿರುವ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

ನೆರವು: ಕೋವಿಡ್ 19 ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಜಿಲ್ಲೆ ಸಂಪೂರ್ಣ ಸ್ತಬ್ಧಗೊಂಡಿದೆ. ಭಿಕ್ಷುಕರು, ಬಡವರು ಹಾಗೂ ಮೂಕ ಪ್ರಾಣಿಗಳು ಆಹಾರ ಸಿಗದೇ ನರಳುವಂತಾಗಿದೆ. ಜನ, ಜಾನುವಾರುಗಳ ಹಸಿವು ನೀಗಿಸಲು ತೋಂಟದಾರ್ಯ ಮಠ ಹಾಗೂ ಸವಿತಾ ಸಮಾಜ ಸುಧಾರಣಾ ಸಂಘ, ಯಂಗ್‌ ಇಂಡಿಯಾ ಪರಿವಾರದವರು ನಗರದಲ್ಲಿರುವ ಭಿಕ್ಷುಕರು,ಕಾರ್ಮಿಕರು ಹಾಗೂ ಪೊಲೀಸರು ಊಟ-ಉಪಹಾರ ನೀಡಿ ಉಪಚರಿಸಿದರು. ಅಷ್ಟೇ ಅಲ್ಲದೇ ಮೂಕ ಪ್ರಾಣಿಗಳಿಗೂ ಆಹಾರ ವಿತರಿಸಲಾಯಿತು.

205 ಜನರು ನಿಗಾಕ್ಕೆ: ಜಿಲ್ಲೆಯಲ್ಲಿ ಹೊಸದಾಗಿ 10 ಜನರು ಸೇರಿದಂತೆ ಇಲ್ಲಿವರೆಗೆ ನಿಗಾಕ್ಕೆ ಒಳಗಾದವರ ಸಂಖ್ಯೆ 205ಕ್ಕೆ ತಲುಪಿದ್ದು, 13 ಜನರು 28 ದಿನಗಳ ನಿಗಾ ಅವಧಿ  ಪೂರೈಸಿದ್ದಾರೆ. 179 ಜನರು ಮನೆಯಲ್ಲಿಯೇ ಪ್ರತ್ಯೇಕ ನಿಗಾಹದಲ್ಲಿದ್ದಾರೆ. 13 ಜನರು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದು, ಪರೀಕ್ಷೆಗಾಗಿ ಸಂಗ್ರಹಿಸಿದ ಗಂಟಲು ದ್ರವ್ಯ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 59 ಪ್ರಕರಣಗಳ ಪೈಕಿ 56 ಜನರ ವರದಿ ನೆಗೆಟಿವ್‌ ಎಂದು ಬಂದಿದೆ. ಇನ್ನುಳಿದ ಮೂವರ ವರದಿಗಳು ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next