Advertisement

ರಾಷ್ಟ್ರಗಾನ ಎಂಬುದಿಲ್ಲ: ಸುಪ್ರೀಂ ಕೋರ್ಟ್‌

03:45 AM Feb 18, 2017 | |

 ನವದೆಹಲಿ: “ರಾಷ್ಟ್ರ ಗಾನ’ ಎಂಬ ಕಲ್ಪನೆ ನಮ್ಮಲ್ಲಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ರಾಷ್ಟ್ರಧ್ವಜದ ರೀತಿ “ರಾಷ್ಟ್ರಗೀತೆ’ಗೂ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಸಂವಿಧಾನದಲ್ಲಿ ಸೇರಿಸಿಕೊಳ್ಳಬೇಕೆಂಬ ಅರ್ಜಿಗೆ ನ್ಯಾಯ ಪೀಠ ಹೀಗೆ ಅಭಿಪ್ರಾಯ ಪಟ್ಟಿದೆ.

Advertisement

ಸಂವಿಧಾನದ 15ನೇ ವಿಧಿಯಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಬಗ್ಗೆ ಮಾತ್ರ ಹೇಳಲಾಗಿದೆ. ರಾಷ್ಟ್ರ ಗಾನದ ಬಗ್ಗೆ ಹೇಳಿಲ್ಲ ಎಂದು ನ್ಯಾ.ದೀಪಕ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಹೇಳಿತು. ಬಿಜೆಪಿ ವಕ್ತಾರ ಅಶ್ವಿ‌ನಿ ಉಪಾಧ್ಯಾಯ ರಾಷ್ಟ್ರ ಗಾನ ಕುರಿತು ಅರ್ಜಿ ಸಲ್ಲಿಸಿದ್ದರು. ರಾಷ್ಟ್ರ ಗಾನ ಹಾಡುವುದಕ್ಕೆ ಮಾರ್ಗದರ್ಶಿ ಸೂತ್ರ ಪ್ರಕಟಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೇಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next