Advertisement

ಉಡುಪಿ: ಇಂದು ರಾತ್ರಿ 8 ಗಂಟೆಯಿಂದ 14 ದಿನಗಳ ಕಾಲ ಜಿಲ್ಲೆಯಲ್ಲಿ ಬಸ್ ಸಂಚಾರ ಬಂದ್

07:59 PM Jul 15, 2020 | Hari Prasad |

ಉಡುಪಿ: ಕೋವಿಡ್ 19 ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ರಾಜ್ಯ ಸರಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿದೆ.

Advertisement

ಇದರ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇನ್ನು ಕೆಲವು ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ವಿಧಿಸಲಾಗಿದೆ. ಬಹಳ ಕಡೆಗಳಲ್ಲಿ ಆಂಶಿಕ ಲಾಕ್ ಡೌನ್ ಜಾರಿಗೆ ಬಂದಿದೆ.

ಇತ್ತ, ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸದಿರುವ ತೀರ್ಮಾನವನ್ನು ಮಂಗಳವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿತ್ತು.

ಆದರೆ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಅಂದರೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಸಭೆ ಬಂದಿತ್ತು. ಮತ್ತು ಈ 14 ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ನಿರ್ಧಾರವನ್ನೂ ಈ ಸಭೆಯಲ್ಲಿ ಮಾಡಲಾಗಿತ್ತು.

ಹಾಗಾಗಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಬಸ್ಸುಗಳ ಸಂಚಾರ ಇರುವುದಿಲ್ಲ.

Advertisement

ಮುಖ್ಯಾಂಶಗಳು:
– ಜು. 15ರ ರಾತ್ರಿ 8 ಗಂಟೆಯಿಂದ ಜು. 29ರ ವರೆಗೆ 14 ದಿನ ಜಿಲ್ಲೆಯ ಗಡಿಗಳು ಸೀಲ್‌ಡೌನ್‌.

– ಹೊರ ಜಿಲ್ಲೆ/ ಹೊರ ರಾಜ್ಯದಿಂದ ಬರುವವರು/ಹೋಗುವವರು ಜು. 15ರ ರಾತ್ರಿ 8 ಗಂಟೆಯೊಳಗೆ ಬರಲು/ಹೋಗಲು ಅವಕಾಶ.

– 14 ದಿನಗಳಲ್ಲಿ ಸಾರ್ವಜನಿಕ ಬಸ್‌ ಸಂಚಾರವಿಲ್ಲ.

– ಜಿಲ್ಲೆಯ ಗಡಿಗಳನ್ನು ದಾಟಿ ಕೆಲಸದ ನಿಮಿತ್ತ ನಿತ್ಯ ಹೋಗುವವರಿಗೆ, ತುರ್ತು ಸಂದರ್ಭಗಳಲ್ಲಿ ಹೋಗುವವರಿಗೆ, ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಜಿಲ್ಲಾಡಳಿತದಿಂದ ಪಾಸ್‌ಗಳನ್ನು ನೀಡಲಾಗುವುದು.

– ಸಂತೆಗಳು ಇರುವುದಿಲ್ಲ. ದಿನಸಿ ಅಂಗಡಿ, ಶಾಪ್‌ ಗಳು ತೆರೆದಿರುತ್ತವೆ.

– ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ ಸಮಾರಂಭ ನಡೆಯುವಂತಿಲ್ಲ. ಯಾವುದೇ ಕಾರ್ಯಕ್ರಮ ನಡೆಯುವುದು ನಿಷಿದ್ಧ.

– ಸಾರ್ವಜನಿಕ ಹಬ್ಬ ಆಚರಣೆ ಇರುವುದಿಲ್ಲ. ಪೂರ್ವನಿರ್ಧರಿತ ಮದುವೆ ಮಾತ್ರ ತಹಶೀಲ್ದಾರರಿಂದ ಅನುಮತಿ ಪಡೆದು 50 ಜನರೊಳಗೆ ನಡೆಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next