Advertisement

ಅಂತಾರಾಷ್ಟ್ರೀಯ ಕ್ರೀಡಾ ಆಡಳಿತಗಾರರಿಗೆ ವಯೋಮಿತಿ ನಿರ್ಬಂಧವಿಲ್ಲ

02:34 AM Dec 13, 2024 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ ಜವಾಬ್ದಾರಿ ನಿಭಾಯಿಸುತ್ತಿರುವ ಭಾರತೀಯ ಕ್ರೀಡಾ ಆಡಳಿತ ಅಧಿಕಾರಿಗಳಿಗೆ ಸಮಾ ಧಾನಕರ ಸುದ್ದಿ ಸಿಕ್ಕಿದೆ. ರಾಷ್ಟ್ರೀಯ ಕ್ರೀಡಾಸಂಸ್ಥೆಗಳಲ್ಲಿ ಪದವಿ ಹೊಂದಲು ಇರುವ ಗರಿಷ್ಠ 70 ವರ್ಷದ ವಯೋಮಿತಿ ಅಂತಾರಾಷ್ಟ್ರೀಯ ಹುದ್ದೆಯಲ್ಲಿರುವರಿಗೆ ಅನ್ವಯವಾಗುವುದಿಲ್ಲ, ಹಾಗೆಯೇ ಒಟ್ಟು 12 ವರ್ಷಗಳ ಅಧಿಕಾರಾವಧಿ ಮಿತಿಯಲ್ಲೂ ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನಸುಖ್‌ ಮಾಂಡವಿಯ ಹೇಳಿದ್ದಾರೆ.

Advertisement

50 ವರ್ಷಗಳ ಕಾಲ ದುಡಿದ ಅನಂತರ ರಣಧೀರ್‌ ಸಿಂಗ್‌ (78) ಏಷ್ಯಾ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಹೀಗಿರುವಾಗ ಅವರಿಗೂ ವಯೋಮಿತಿ, ಅಧಿಕಾರಾವಧಿ ಮಿತಿ ಅನ್ವಯವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿ ನಿಭಾಯಿಸುವುದು ಹೇಗೆ ಎಂದು ಮನಸುಖ್‌ ಪ್ರಶ್ನಿಸಿದ್ದಾರೆ. ಸಂಸತ್ತಿನ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಸಣ್ಣಪುಟ್ಟ ಬದಲಾವಣೆಗಳಿರುವ ಕ್ರೀಡಾಮಸೂದೆ ಮಂಡನೆಯಾಗಲಿದೆ ಎಂದು ಮಾಂಡವಿಯ ಹೇಳಿದ್ದಾರೆ.

ಸದ್ಯದ ರಾಷ್ಟ್ರೀಯ ಕ್ರೀಡಾ ನೀತಿ ಪ್ರಕಾರ 70 ವರ್ಷ ದಾಟಿದರೆ ಅವರು ಕ್ರೀಡಾ ಸಂಸ್ಥೆ ಪದಾಧಿಕಾರಿಗಳಾಗುವಂತಿಲ್ಲ. ಹಾಗೆಯೇ ಗರಿಷ್ಠ 12 ವರ್ಷಗಳ ಅನಂತರ ಅಧಿಕಾರ ಹೊಂದುವಂತಿಲ್ಲ. ಜತೆಗೆ 4 ವರ್ಷಗಳ ಅವಧಿಗೆ ಸತತ 2 ಬಾರಿ ಆಯ್ಕೆಯಾದರೆ ಮುಂದಿನ 4 ವರ್ಷ ಅವರು ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂಬ ನಿಯಮವಿತ್ತು. ಈ ಎಲ್ಲ ನಿಯಮಗಳಿಂದ ಅಂತಾರಾಷ್ಟ್ರೀಯ ಹುದ್ದೆಯಲ್ಲಿರುವವರು ವಿನಾಯಿತಿ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next