Advertisement

ದೇಶದಲ್ಲಿ ಪ್ರತೀವರ್ಷ ಶತ ಪೈಲಟ್ ಗಳಿಗೆ ಬೇಡಿಕೆ

09:32 AM Nov 28, 2019 | |

ಹೊಸದಿಲ್ಲಿ: ಭಾರತದಲ್ಲಿ ಪ್ರತಿ ವರ್ಷ ಸುಮಾರು 100 ಪೈಲಟ್‌ಗಳ ಅಗತ್ಯವಿರುತ್ತದೆ ಎಂದು ಕೇಂದ್ರ ಸರಕಾರದ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಮಾಹಿತಿ ನೀಡಿದ್ದಾರೆ. ಈ ಕೊರತೆಯನ್ನು ನೀಗಿಸಲು ಸರಕಾರ ಪೈಲಟ್‌ ತರಬೇತಿ ಅಕಾಡೆಮಿಗಳನ್ನು ಆರಂಭಿಸಲಾಗುವುದು ಎಂಬ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಿದ್ದಾರೆ.

Advertisement

ದೇಶದಲ್ಲಿ ಈಗಾಗಲೇ 32 ತರಬೇತಿ ಕೇಂದ್ರಗಳಿದ್ದು, ಅವುಗಳನ್ನು ಹೆಚ್ಚಿಸಲಾಗುವುದು. ಈ 32 ತರಬೇತಿ ಕೇಂದ್ರಗಳ (ಎಫ್ಟಿಒ) ಪೈಕಿ 23 ಖಾಸಗಿ ವಲಯದ ತರಬೇತಿ ಕೇಂದ್ರವಾಗಿದ್ದು, ಉಳಿದ 9 ಕೇಂದ್ರಗಳು ಕೇಂದ್ರ ಮತ್ತು ರಾಜ್ಯ ಸರಕಾರದಡಿಯಲ್ಲಿ ಬರುತ್ತದೆ. ಪ್ರತಿ ವರ್ಷ 350 ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ನಾವು ಪ್ರತಿ ವರ್ಷ 100 ವಿಮಾನಗಳಿಗೆ 100 ಪೈಲಟ್‌ಗಳನ್ನು ಸಿದ್ಧಪಡಿಸಬೇಕಾಗಿದೆ ಎಂದು ಸಚಿವರು ಹೇಳಿದರು.

ಸುಮಾರು 350 ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟು 9,000 ಪೈಲಟ್‌ಗಳ ಪೈಕಿ ಅರ್ಧದಷ್ಟು ಮಂದಿ ಕಮಾಂಡರ್‌ ಮಟ್ಟದಲ್ಲಿದ್ದು, ಉಳಿದವರು ಇತರ ವಿಭಾಗಗಳಲ್ಲಿ ಹಂಚಿಹೋಗಿದ್ದಾರೆ. ಕೆಲವು ವಿಭಾಗಗಳಲ್ಲಿ ವಿದೇಶಿ ಪೈಲಟ್‌ಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹೊಸ ಪೈಲಟ್‌ ತರಬೇತಿ ಕೆಂದ್ರಗಳು ಎಲ್ಲಿ ಸ್ಥಾಪನೆಯಾಗಲಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next