Advertisement

ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಿಂದ ಆಹ್ವಾನವಿದೆ: ಜೆಡಿಎಸ್ ಶಾಸಕ ಚವ್ಹಾಣ

05:14 PM Sep 24, 2022 | Team Udayavani |

ವಿಜಯಪುರ : ಕಾಂಗ್ರೆಸ್-ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಂದ ನನಗೆ ಪಕ್ಪ ಸೇರಲು ಆಹ್ವಾನವಿದೆ. ಸದ್ಯ ಜೆಡಿಎಸ್ ಪಕ್ಷದಲ್ಲಿನ ಜೀತ (ಚುನಾವಣೆಯ ಅವಧಿ) ಬಾಕಿ ಇದ್ದು, ಮುಗಿದ ಮೇಲೆ ಮುಂದೇನು ಎಂದು ಯೋಚಿಸುತ್ತೇನೆ. ನನ್ನ ಹಣೆ ಬರಹದಲ್ಲೇನಿದೆ ಹಾಗೆ ಅಗಲಿದೆ ಎಂದು ನಾಗಠಾಣ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಶನಿವಾರ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಪುರದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ನಾಯಕರು ನನಗೆ ಅವಕಾಶ ನೀಡಿದ್ದು, ಮತದಾರರ ಕೃಪೆಯಿಂದ ಶಾಸಕನಾಗಿದ್ದೇನೆ. ಶಾಸಕತ್ವದ ಅವಧಿ ಮುಗಿದ ಮೇಲೆ, ಚುನವಣೆ ಸಂದರ್ಭದಲ್ಲಿ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತೇನೆ. ಮುಂದಿನದು ಹಣೆಬರಹದಲ್ಲಿ ಇದ್ದಂತೆ ಆಗಲಿದೆ ಎಂದರು.

ಇದನ್ನೂ ಓದಿ : ಪುಣೆಯಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ : ಹಲವರ ಬಂಧನ

ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಲಿವೆ. ನನ್ನ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ವಿಜಯಪುರ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ನನ್ನ ಕ್ಷೇತ್ರ ವಾರ್ಡ್‍ಗಳಲ್ಲಿ ಅಭಿವೃದ್ಧಿ ಮಾಡುವುದಕ್ಕಾಗಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ನನ್ನ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಅದರ ಹೊರತಾಗಿಯೂ ವಿಪಕ್ಷದಲ್ಲಿದ್ದರೂ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಅದುವೆ ನನಗೆ ಚುನಾವಣೆಯಲ್ಲಿ ಪ್ರಮುಖ ಅಜೆಂಡಾ ಎಂದರು.

ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದಾಗ ನಗರದ ಅಭಿವೃದ್ಧಿಗೆ 125 ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಮಂಜೂರಾದ ಅನುದಾನವನ್ನು ಹಿಂಡೆಯುವ ಮೂಲಕ ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯ ಮಾಡಿತು. ಪರಿಣಾಮ ನನ್ನ ಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್‍ಗಳ ಜನರು ನರಕದಲ್ಲಿ ಬದುಕುವಂತಾಗಿದೆ ಎಂದು ಹರಿಹಾಯ್ದರು.

Advertisement

ಬಿಜೆಪಿ ಸರ್ಕಾರ ಅನುದಾನ ಹಿಂಪಡೆದ ಕುರಿತು ಅವರದೇ ಪಕ್ಷದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರೇ ಸಾರ್ವಜನಿಕವಾಗಿ ಹೇಳಿದ್ದರು. ಆನಂತರ ಸದರಿ ಅನುದಾನ ಬಂದರೂ ನನ್ನ ಕ್ಷೇತ್ರದ ವಾರ್ಡ್‍ಗಳ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡುತ್ತಿಲ್ಲ. ನಗರದ ರೈಲ್ವೇ ನಿಲ್ದಾಣದಿಂದ ಐತಿಹಾಸಿಕ ಗೋಲಗುಂಬಜ ಸ್ಮಾರಕದ ಮುಂದಿನ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ 1.40 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದರೂ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ದೂರಿದರು.

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದಂತೆ ಬಿಜೆಪಿ ಕುತಂತ್ರ ಮಾಡುತ್ತಿದೆ. ಪರಿಣಾಮ ಆಡಳಿತ ಮಂಡಳಿ ಅವಧಿ ಮುಗಿದು ಮೂರು ವರ್ಷ ಕಳೆದರೂ ಇನ್ನೂ ಚುನಾವಣೆಗೆ ಮುಂದಾಗಿಲ್ಲ. ಜನರ ಸಂಕಷ್ಟ ಹೇಳಿಕೊಂಡರೂ ಕಣ್ಣು-ಕಿವಿ ಇಲ್ಲದ ಮಹಾನಗರ ಪಾಲಿಕೆ ಕನಿಷ್ಠ ಸ್ಪಂದನೆಯನ್ನೂ ಮಾಡುತ್ತಿಲ್ಲ ಎಂದು ಹರಿಹಾಯ್ದರು.

ಇನ್ನು ಕ್ಷೇತ್ರದ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ ನಡೆಸೋಣ ಎಂದರೆ ಆಡಳಿತ ಪಕ್ಷ ಕಾಟಾಚಾರಕ್ಕೆ ನಡೆಸಿದ ಅಧಿವೇಶನದಲ್ಲಿ ಜನರ ಭಾವನೆಗೆ ಸ್ಪಂದನೆ ಸಿಗುವ ಚರ್ಚೆಗೆ ಅವಕಾಶ ಸಿಗಲೇ ಇಲ್ಲ. ಡಬಲ್ ಎಂಜಿನ್ ಸರಕಾರದಲ್ಲಿ ಅಭಿವೃದ್ಧಿಗೆ ನಿರೀಕ್ಷೆ ಮೀರಿ ವೇಗ ಸಿಗಲಿದೆ ಎಂದಿದ್ದ ಬಿಜೆಪಿಯ ಆಡಳಿತದ ವೇಗ ಇದೇ ಏನು ಎಂದು ವ್ಯಂಗ್ಯವಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next