Advertisement

ಹೀಗೂ ಉಂಟು- ಮಂಗಳೂರು ದಕ್ಷಿಣ; ಇಲ್ಲಿ ಕೊಂಕಣಿ ಭಾಷಿಗರೇ ಶಾಸಕರು!

01:07 PM Mar 16, 2023 | Team Udayavani |

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 1957ರಿಂದ 2013ರ ವರೆಗೆ ನಡೆದ 14 ವಿಧಾನಸಭೆ ಚುನಾವಣೆಯಲ್ಲಿ ಒಂದು ಬಾರಿ ಜೈನ ಸಮುದಾಯದ ಧನಂಜಯ ಕುಮಾರ್‌ (1983) ಬಿಜೆಪಿಯಿಂದ ಗೆದ್ದದ್ದು ಬಿಟ್ಟರೆ ಉಳಿದೆಲ್ಲ ಚುನಾವಣೆಯಲ್ಲಿ ಕೊಂಕಣಿ ಭಾಷಿಗರೇ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ !

Advertisement

ಇದನ್ನೂ ಓದಿ:ಪರೀಕ್ಷೆಗೆ ಬರುವಾಗ ಅಪಘಾತ: 8 ಹೊಲಿಗೆಗಳನ್ನು ಹಾಕಿಕೊಂಡು ಆಸ್ಪತ್ರೆಯಲ್ಲೇ ಪರೀಕ್ಷೆ ಬರೆದ.!

ಕಾಂಗ್ರೆಸ್‌ನಿಂದ ಆಯ್ಕೆಯಾದ ವೈಕುಂಠ ಬಾಳಿಗ (1957), ಎಂ. ಶ್ರೀನಿವಾಸ ನಾಯಕ್‌ (1962),  ಎಂ.ಎಸ್‌. ನಾಯಕ್‌ (1967) ಹಾಗೂ ನಾಲ್ಕು ಬಾರಿ ನಿರಂತರವಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಎನ್‌. ಯೋಗೀಶ್‌ ಭಟ್‌ (1994, 1999, 2004, 2008) ಹಾಗೂ ಡಿ. ವೇದವ್ಯಾಸ್‌ ಕಾಮತ್‌ (2018) ಜಿಎಸ್‌ಬಿ ಸಮುದಾಯದ ಮುಖಂಡರಾಗಿದ್ದು, ಕೊಂಕಣಿ ಭಾಷಿಕರು.

ಕಾಂಗ್ರೆಸ್‌ನಿಂದ ಆಯ್ಕೆಯಾದ ಎಲ್‌.ಸಿ. ಪಾಯಸ್ಸ್‌ (1952), ಎಡ್ಡಿ ಸಲ್ಡಾನ್ಹಾ (1972), ಪಿ.ಎಫ್‌. ರೊಡ್ರಿಗಸ್‌ (1978), ಬ್ಲೇಸಿಯಸ್‌ ಎಂ. ಡಿ’ಸೋಜಾ (1985, 1989), ಜೆ.ಆರ್‌. ಲೋಬೋ (2013) ಕ್ರೈಸ್ತ ಸಮುದಾಯದ ಮುಖಂಡರಾಗಿದ್ದು, ಅವರು ಕೂಡ ಕೊಂಕಣಿ ಭಾಷಿಕರು.

ಈ ಕ್ಷೇತ್ರವು ಕೊಂಕಣಿ ಭಾಷೆ ಮಾತನಾಡುವ ಕ್ರೈಸ್ತ ಸಮುದಾಯ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು ಈ ಕಾರಣದಿಂದಾಗಿಯೇ ರಾಜಕೀಯ ಪಕ್ಷಗಳು ಕೂಡ ಟಿಕೆಟ್‌ ಹಂಚಿಕೆ ವೇಳೆ ಇಲ್ಲಿ ಕೊಂಕಣಿ ಸಮುದಾಯದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತ ಬಂದಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next